ವಿಜಯಪುರ: ಜಿಲ್ಲೆಯ ತಿಕೋಟಾ ತಾಲೂಕಿನ ಸೋಮದೇವರಹಟ್ಟಿ, ಕಳ್ಳಕವಟಗಿ, ಘೋಣಸಗಿ, ಹಡಗಿನಾಳ ಹಾಗೂ ಇತರೆ ಗ್ರಾಮಗಳಲ್ಲಿ ಇಂದು ಭೂಮಿಯಾಳದಿಂದ ಭಾರಿ ಶಬ್ದ ಕೇಳಿಬಂದಿದೆ.
ನಗರದ ಕೆಹೆಚ್ಬಿ ಕಾಲೊನಿ, ಬ್ಯಾಂಕರ್ಸ್ ಕಾಲೊನಿ, ಸದಾಶಿವ ನಗರ, ಆಕೃತಿ ಕಾಲೊನಿಗಳ ನಿವಾಸಿಗಳಿಗೂ ಶಬ್ದ ಕೇಳಿಸಿದೆ.
ಭೂಮಿ ನಡುಗಿದಂತೆ ಅನುಭವವಾಗಿದೆ. ಭೂಕಂಪನಕ್ಕೆ ಮನೆಯೊಳಗಿನ ಪಾತ್ರೆಗಳು ಅಲ್ಲಾಡಿ ಬಿದ್ದಿವೆ ಎಂದು ಜನರು ಹೇಳಿದ್ದಾರೆ.
ಥೈಲ್ಯಾಂಡ್‌ನ ಬ್ಯಾಂಕಾಂಕ್ ಹಾಗೂ ಇತರೆಡೆಗಳಲ್ಲಿ ಭೂಕಂಪವಾಗಿರುವುದರಿಂದಾಗಿ ಇಲ್ಲಿಯೂ ಭೂಕಂಪವಾಗಿರಬಹುದು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಸದ್ಯ ಇದು ಭೂಕಂಪವೇ ಅಥವಾ ಭೂಮಿಯಿಂದ ಬಂದಿರುವ ಶಬ್ದವೇ ಎಂಬುದರ ಬಗ್ಗೆ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಬೇಕಿದೆ.
Laxmi News 24×7