Breaking News

ಹುಬ್ಬಳ್ಳಿ ಸಿಲಿಂಡರ್​ ಸ್ಫೋಟ: ಘಟನೆಯಿಂದ ಮನನೊಂದು ದೇಗುಲ ನೆಲಸಮಕ್ಕೆ ನಿರ್ಧಾರ

Spread the love

ಹುಬ್ಬಳ್ಳಿ, ಡಿಸೆಂಬರ್​ 29: ನಗರದ ಅಯ್ಯಪ್ಪ (Ayyappa) ಮಾಲಾಧಾರಿಗಳ ಸಿಲಿಂಡರ್ ಸ್ಪೋಟ ಪ್ರಕರಣದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಒಂಬತ್ತು ಜನರ ಪೈಕಿ ಒಬ್ಬೊಬ್ಬರೆ ಪ್ರಾಣ ಬಿಡುತ್ತಿದ್ದಾರೆ. ಹೀಗಾಗಿ ಸದ್ಯ ಸಾವಿನ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ. ಈ ಮಧ್ಯೆ 22 ವರ್ಷದ ಹಿಂದೆ ನಿರ್ಮಿಸಿದ್ದ ಅಯ್ಯಪ್ಪ ಸನ್ನಿಧಿ ನೆಲಸಮಕ್ಕೆ ನಿರ್ಧಾರ ಮಾಡಲಾಗಿದೆ.

ಹುಬ್ಬಳ್ಳಿ ಸಿಲಿಂಡರ್​ ಸ್ಫೋಟ: ಘಟನೆಯಿಂದ ಮನನೊಂದು ದೇಗುಲ ನೆಲಸಮಕ್ಕೆ ನಿರ್ಧಾರ

ನಗರದ ಅಚ್ಚವ್ವನ ಕಾಲೋನಿಯಲ್ಲಿ 22 ವರ್ಷದ ಹಿಂದೆ ಅಯ್ಯಪ್ಪ ಸನ್ನಿಧಿ ನಿರ್ಮಿಸಲಾಗಿತ್ತು. ಗಜಾನನ ಜಿತೂರಿ ಸ್ವಾಮೀಜಿ ಅವರು ಈ ಸನ್ನಿಧಿ ನಿರ್ಮಿಸಿದ್ದರು. ಇದೀಗ ಘಟನೆಯಿಂದ ಮನನೊಂದಿರುವ ಗಜಾನನ ಜಿತೂರಿ ಸ್ವಾಮೀಜಿ, ಅಯ್ಯಪ್ಪ ಸ್ವಾಮಿ ಸನ್ನಿಧಿ ನೆಲಸಮ ಮಾಡಲು ನಿರ್ಧರಿಸಿದ್ದಾರೆ. ಆ ಸನ್ನಿಧಿ ನೋಡುವುದಕ್ಕೆ ಆಗಲ್ಲ ಎಂದು ಕಣ್ಣೀರು ಹಾಕಿದ್ದು, ಏರಿಯಾದ ಜನರಿಗೆ ಹೇಳಿ ಸನ್ನಿಧಿ ತೆರವು ಮಾಡುತ್ತೇನೆ ಎನ್ನುತ್ತಿದ್ದಾರೆ.

ಲಿಂಗರಾಜ ಬೆರನೂರು ಮನೆಯಲ್ಲಿ ತಿಥಿ ಕಾರ್ಯ: ಕಣ್ಣೀರು ಹಾಕಿದ ತಾಯಿ

ಇನ್ನು ದುರಂತದಲ್ಲಿ ಮೃತಪಟ್ಟ ಲಿಂಗರಾಜ ಬೆರನೂರು ಮನೆಯಲ್ಲಿ ಇಂದು ತಿಥಿ ಕಾರ್ಯ ಮಾಡಲಾಗಿದೆ. ಮಗ ಲಿಂಗರಾಜನನ್ನು ನೆನೆದು ತಾಯಿ ಕವಿತಾ ಕಣ್ಣೀರು ಹಾಕಿದ್ದಾರೆ. ಲಿಂಗರಾಜಗೆ ಐಟಿಐ ಸರ್ಕಾರಿ ಕಾಲೇಜಿನಲ್ಲಿ ಸೀಟು ಸಿಕ್ಕಿತ್ತು, ಆದರೆ ತಾಯಿಗೆ ನೆರವಾಗಲು ಓದು ಬಿಟ್ಟು ಕೆಲಸಕ್ಕೆ ಹೋಗುತ್ತಿದ್ದ.ಸ್ವಂತ ಮನೆಯಿಲ್ಲದೆ ಜೀವನ ನಡೆಸುತ್ತಿದ್ದ ಲಿಂಗರಾಜ ಕುಟುಂಬ, ತಾಯಿ ಕವಿತಾಗೆ ಇದ್ದ ಒಬ್ಬ ಗಂಡು ಮಗ ಲಿಂಗರಾಜ ಮಾತ್ರ. ಕೆಎಲ್​ಇನಲ್ಲಿ ಗುತ್ತಿಗೆ ಆಧಾರದ ಮೇಲೆ ಅಟೆಂಡರ್​ ಆಗಿರುವ ತಾಯಿ, ನಮಗೆ ಪರಿಹಾರ ಹಣ ಬೇಡ ಸರ್ಕಾರಿ ಕೆಲಸ ನೀಡಿದರೆ ನೆರವಾಗುತ್ತೆ. ಮನೆಗೆ ಆಧಾರವಾಗಿದ್ದ ಮಗ ಮೃತಪಟ್ಟಿದ್ದಾನೆ. ಸರ್ಕಾರಿ ನೌಕರಿ ಕೊಟ್ರೆ ಮನೆ ನಡೆಯೋಕೆ ಅನುಕೂಲ ಆಗುತ್ತೆ ಎಂದು ಕಣ್ಣೀರು ಹಾಕಿದ್ದಾರೆ.


Spread the love

About Laxminews 24x7

Check Also

ಜನರ ಆರೋಗ್ಯ ಕಾಪಾಡುವ ಸರಕಾರದ ಸಂಕಲ್ಪಕ್ಕೆ ಕೈಜೋಡಿಸಿ: ಲಕ್ಷ್ಮೀ ಹೆಬ್ಬಾಳಕರ್

Spread the loveಜನರ ಆರೋಗ್ಯ ಕಾಪಾಡುವ ಸರ್ಕಾರದ ಸಂಕಲ್ಪ ಸಾಕಾರಗೊಳ್ಳಬೇಕಾದರೆ ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳು ಕೈಜೋಡಿಸುವುದು ಅಗತ್ಯ ಎಂದು ಮಹಿಳಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ