Breaking News

ಬೈಕ್‌ನಲ್ಲಿ ತೆರಳುತ್ತಿದ್ದಾಗಲೇ ಬಡಿತ ನಿಲ್ಲಿಸಿದ ಹೃದಯ; ಯೋಧನ ಸಾವಿನ ಕೊನೆ ಕ್ಷಣ ಸೆರೆ

Spread the love

ಬೆಳಗಾವಿ: ಯಾವುದೇ ಸೂಚನೆಯನ್ನು ನೀಡದೆ ಬರುವ ಜವರಾಯನ ಅಟ್ಟಹಾಸಕ್ಕೆ ಮಧ್ಯಮ ವಯಸ್ಸಿನವರ ಪ್ರಾಣಪಕ್ಷಿ ಹಾರಿಹೋಗುತ್ತಿದೆ. ಬದುಕು ಹೇಗೆಲ್ಲ ಅಂತ್ಯವಾಗುತ್ತೆ ಎಂಬುದನ್ನು ಅಂದಾಜಿಸಲೂ ಸಾಧ್ಯವಿಲ್ಲ. ಹೃದಯವು ಯಾವ ಕ್ಷಣದಲ್ಲಿ ಕೈಕೊಡುತ್ತೆ ಎಂಬುದು ಊಹಿಸಲು ಆಗುತ್ತಿಲ್ಲ.

ನಿಂತ ನಿಲುವಿನಲ್ಲೇ ಬದುಕನ್ನು ಸ್ತಬ್ಧಗೊಳಿಸುವ ನಿರ್ನಾಮ ಶಕ್ತಿಯನ್ನು ಅದು ಹೊಂದಿದೆ. ಕುಳಿತಲ್ಲೇ ಕುಸಿಯುವುದು, ನಿಂತಲ್ಲೇ ಉರುಳಿ ಬೀಳುವುದು, ಮಲಗಿದಲ್ಲೇ ಮರಣಿಸುವುದು, ನೃತ್ಯ ಮಾಡುತ್ತಲೇ ಹೃದಯ (Heart Attack) ಸ್ತಬ್ಧವಾಗುವುದು. ಹೀಗೆ ಸಾವಿನ ಹತ್ತಾರು ಭಯಾನಕ ಸನ್ನಿವೇಶಗಳನ್ನು ನಾವು ನೋಡಿದ್ದೇವೆ. ಇದೀಗ ಬೆಳಗಾವಿಯಲ್ಲಿ ಯೋಧರೊಬ್ಬರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ಯೋಧ ಬೈಕ್‌ನಲ್ಲಿ ಹೋಗುತ್ತಿದ್ದಾಗ ಸಹಿಸಲು ಆಗದ ಎದೆನೋವು ಕಾಣಿಸಿಕೊಂಡಿದೆ. ಬೈಕ್‌ ನಿಧಾನಿಸಿ ಎದೆ ಸವಾರಿಕೊಂಡು ನಿಲ್ಲಲ್ಲು ಯತ್ನಿಸಿದ್ದಾರೆ. ಆದರೆ ಕರುಣೆಯೇ ಇಲ್ಲದ ಹೃದಯ ತನ್ನ ಬಡಿತವನ್ನು ನಿಲ್ಲಿಸಿತ್ತು. ನೋಡನೋಡುತ್ತಲೇ ಆ ಯೋಧ ರಸ್ತೆ ಬದಿಗೆ ಕುಸಿದು ಬಿದ್ದಿದ್ದರು. ಸಾವಿನ ಕ್ಷಣವು ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಬೆಳಗಾವಿಯ ಎಂಎಲ್‌ಐಆರ್‌ಸಿ ಕ್ಯಾಂಪ್‌ನಲ್ಲಿ ಈ ಘಟನೆ ನಡೆದಿದೆ. ಹೃದಯಾಘಾತದಿಂದ ಸುನೀಲ್ ಸಲಾಂ (37) ಎಂಬುವವರು ಮೃತಪಟ್ಟಿದ್ದಾರೆ. ಸುನೀಲ್‌ ಮರಾಠ ಲಘು ಪದಾತಿದಳಲ್ಲಿ ಹವಾಲ್ದಾರ್ ಆಗಿ ಕೆಲಸ ಮಾಡುತ್ತಿದ್ದರು. ಬೈಕ್‌ನಲ್ಲಿ ತೆರಳುತ್ತಿದ್ದಾಗ ದಿಢೀರ್‌ ಹೃದಯಾಘಾತದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.


Spread the love

About Laxminews 24x7

Check Also

ಜನರ ಆರೋಗ್ಯ ಕಾಪಾಡುವ ಸರಕಾರದ ಸಂಕಲ್ಪಕ್ಕೆ ಕೈಜೋಡಿಸಿ: ಲಕ್ಷ್ಮೀ ಹೆಬ್ಬಾಳಕರ್

Spread the loveಜನರ ಆರೋಗ್ಯ ಕಾಪಾಡುವ ಸರ್ಕಾರದ ಸಂಕಲ್ಪ ಸಾಕಾರಗೊಳ್ಳಬೇಕಾದರೆ ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳು ಕೈಜೋಡಿಸುವುದು ಅಗತ್ಯ ಎಂದು ಮಹಿಳಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ