Breaking News

Yearly Archives: 2026

ಒಂದು ನಿಮಿಷದಲ್ಲಿ 28,000 ಅಡಿ ಕುಸಿದ ಬ್ರಿಟಿಷ್‌ ಏರ್‌ವೇಸ್‌ ವಿಮಾನ – ತಪ್ಪಿತು ಭಾರೀ ದುರಂತ!

ಲಂಡನ್‌: ಯುಕೆ ರಾಜಧಾನಿ ಲಂಡನ್‌ನಿಂದ ಚಿಕಾಗೋಗೆ ತೆರಳುತ್ತಿದ್ದ ಬ್ರಿಟಿಷ್ ಏರ್‌ವೇಸ್ ವಿಮಾನವೊಂದು  ಐರ್ಲೆಂಡ್‌ ವಾಯುಪ್ರದೇಶದಲ್ಲಿದ್ದಾಗ ಏಕಾಏಕಿ ಭಾರೀ ಪ್ರಮಾಣದಲ್ಲಿ ಕುಸಿದ ಘಟನೆ ನಡೆದಿದೆ. ವಿಮಾನವು ಸುಮಾರು 37 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದಾಗ, ಕೇವಲ 1 ನಿಮಿಷದಲ್ಲಿ 28,000 ಅಡಿಗೆ ಕುಸಿದು, 9,000 ಅಡಿಗೆ ಇಳಿದಿದೆ. ಘಟನೆ ವೇಳೆ ವಿಮಾನದಿಂದ ʻ7700ʼ ಎಮರ್ಜೆನ್ಸಿ ಸಂದೇಶ ರವಾನೆಯಾಗಿದೆ ಎಂದು ವರದಿಯಾಗಿದೆ. ಏಕಾಏಕಿ ವಿಮಾನ ಕೆಳಕ್ಕೆ ಕುಸಿದಿದ್ದರಿಂದ ಪ್ರಯಾಣಿಕರು ಹಾಗೂ ಸಿಬ್ಬಂದಿಯಲ್ಲಿ …

Read More »

SIR ಪ್ರತಿಭಟನೆಗಳು ರಾಷ್ಟ್ರ ವಿರೋಧಿ ಶಕ್ತಿಗಳ ಪಿತೂರಿಯ ಭಾಗ – ನಿಜವಾದ ಮತದಾರರಾಗಿದ್ರೆ ಈ ಕೆಲಸ ಮಾಡಿ: ಕಿರಣ್‌ ರಿಜಿಜು

ನವದೆಹಲಿ: ವಿರೋಧ ಪಕ್ಷಗಳು ಭಾರತವನ್ನು ಒಂದು ರಾಷ್ಟ್ರವಾಗಿ ದುರ್ಬಲಗೊಳಿಸುವ ದೊಡ್ಡ ಪಿತೂರಿ ನಡೆಸುತ್ತಿವೆ. ಎಸ್‌ಐಆರ್‌ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಗಳೆಲ್ಲವೂ ರಾಷ್ಟ್ರ ವಿರೋಧಿ ಶಕ್ತಿಗಳ ಪಿತೂರಿಯ ಭಾಗ ಎಂದು ಕೇಂದ್ರ ಸಚಿವ ಕಿರಣ್‌ ರಿಜಿಜು  ವಾಗ್ದಾಳಿ ನಡೆಸಿದ್ದಾರೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ  ಕುರಿತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್  ಅವರ ರಾಜೀನಾಮೆಗೆ ಆಗ್ರಹಿಸಿ ದೆಹಲಿ ಮತ್ತು ಮುಂಬೈನಲ್ಲಿ ಸೇರಿದಂತೆ ದೇಶದ ವಿವಿಧೆಡೆ ನಡೆಸುತ್ತಿರುವ ಪ್ರತಿಭಟನೆ ಕುರಿತು ಅವರು …

Read More »

ಮತದಾನದ ಹಕ್ಕು ಕಸಿಯುವುದು ಸಂವಿಧಾನದ ಆಶಯಕ್ಕೆ ವಿರುದ್ಧ – SIR ವಿರುದ್ಧ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ವಾಗ್ದಾಳಿ

ಹೈದರಾಬಾದ್: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ  ಕುರಿತು ದೇಶಾದ್ಯಂತ ವಿವಾದ ಭುಗಿಲೆದ್ದಿದೆ. ಇದರ ಮಧ್ಯೆಯೇ ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಮಹತ್ವದ ಹೇಳಿಕೆ ನೀಡಿದ್ದಾರೆ. ತೆಲಂಗಾಣದ ಹೈದರಾಬಾದ್‌ನಲ್ಲಿರುವ ನಲ್ಸಾರ್‌ ಕಾನೂನು ವಿಶ್ವವಿದ್ಯಾಲಯದಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದ್ದಾರೆ. ಚುನಾವಣಾ ಆಯೋಗದ ಮತದಾರರ ಪರಿಷ್ಕರಣೆ  ಪ್ರಕ್ರಿಯೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಲಕ್ಷಾಂತರ ನಾಗರಿಕರ ಮತದಾನದ ಹಕ್ಕು ಕಸಿಯುವುದು ಸಂವಿಧಾನದ ಆಶಯಕ್ಕೆ ವಿರುದ್ಧ. ಕೋಟ್ಯಂತರ …

Read More »

ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬರ ಅಧ್ಯಯನ ನಡೆಸಿದ ಕೇಂದ್ರ ತಂಡ

ರಾಯಚೂರು: ಕೇಂದ್ರ ಬರ ಅಧ್ಯಯನ ತಂಡ ನಿನ್ನೆ ಮಧ್ಯಾಹ್ನದಿಂದ ರಾತ್ರಿವರೆಗೂ ರಾಯಚೂರಿನಲ್ಲಿ ವಿವಿಧೆಡೆ ಬೆಳೆ ಹಾನಿ ಪರಿಶೀಲನೆ ಮಾಡಿದೆ. ಸಂಜೆಯಾಗಿದ್ದರಿಂದ ಜಮೀನಿನಲ್ಲಿ ಮೊಬೈಲ್ ಟಾರ್ಚ್ ಹಾಕಿ ಬೆಳೆ ವೀಕ್ಷಣೆ ಮಾಡಿ ಮಾಹಿತಿ ಸಂಗ್ರಹಿಸಿದೆ. ರಾತ್ರಿಯಾದರೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಕೇಂದ್ರದ ತಂಡ ಬೆಳೆ ವೀಕ್ಷಣೆ ಮಾಡಿದೆ. ಸಂಜೆ ಕತ್ತಲು ಆವರಿಸಿದ ಹಿನ್ನೆಲೆಯಲ್ಲಿ ಮೊಬೈಲ್ ಟಾರ್ಚ್‌ನಲ್ಲಿ ವೀಕ್ಷಣೆ ಮಾಡಿತು. ರಾಯಚೂರಿಗೆ ಮಧ್ಯಾಹ್ನ ಆಗಮಿಸಿದ್ದ ತಂಡ ರಾತ್ರಿ ವರೆಗೆ ಜಿಲ್ಲೆಯ ವಿವಿಧೆಡೆ ಬರ …

Read More »

ವೋಟ್‌ಚೋರಿಗೆ SIR ದುರ್ಬಳಕೆ..? – ಬೆಂಗಳೂರಿನ ಜನರಿಗೂ ಸಿಎಂ ಡಿಕೆಶಿ ಎಚ್ಚರಿಕೆ

ಬೆಂಗಳೂರು: ರಾಜ್ಯದಲ್ಲಿ ಎಸ್‌ಐಆರ್ ಫಾರಂ-7 ವಿವಾದ ಮತ್ತೊಂದು ಮಜಲಿಗೆ ತಲುಪಿದೆ. ಬೆಂಗಳೂರಿನಲ್ಲೂ ಎಸ್‌ಐಆರ್ ಸಂಬಂಧ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ವಸಂತ ಲಕ್ಷ್ಮಿ ಸೇರಿದಂತೆ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ಮುಖಂಡ ಅನೂಪ್ ಅಯ್ಯಂಗರ್ ದೂರಿನಡಿ ಎಫ್‌ಐಆರ್ ದಾಖಲಿಸಲಾಗಿದೆ. ಇನ್ನೊಂದೆಡೆ ಸಾರ್ವಜನಿಕ ಕಾರ್ಯಕ್ರಮದಲ್ಲೇ ಸಿಎಂ ಡಿಕೆಶಿ ವೋಟ್‌ಚೋರಿ ಸುಳಿವು ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಮತಕನ್ನಕ್ಕೆ ಬ್ರೇಕ್ ಹಾಕಲು ತಾವು ಹೋರಾಡುತ್ತಿರೋದಾಗಿ ಹೇಳಿದ್ದಾರೆ. ಬೆಂಗಳೂರಲ್ಲೂ ನಿಮ್ಮ ವೋಟು …

Read More »

ದೇಶದ ಚುಕ್ಕಾಣಿ ಕಾಂಗ್ರೆಸ್ ಕೈನಲ್ಲಿ ಸಿಕ್ಕರೆ ಭಾರತ ಮರಳಿ ಪಾಕಿಸ್ತಾನಕ್ಕೆ ಮರ್ಜ್ ಆಗುತ್ತೆ: ಸಿ.ಸಿ ಪಾಟೀಲ್

ಗದಗ: ದೇಶದ ಚುಕ್ಕಾಣಿ ಕಾಂಗ್ರೆಸ್ ಕೈನಲ್ಲಿ ಸಿಕ್ಕರೆ ಭಾರತ ಮರಳಿ ಪಾಕಿಸ್ತಾನಕ್ಕೆ ಮರ್ಜ್ ಆಗುತ್ತೆ ಎಂದು ಮಾಜಿ ಸಚಿವ ಸಿ.ಸಿ ಪಾಟೀಲ್  ಟೀಕಿಸಿದ್ದಾರೆ. ನಗರದ ಕಲ್ಯಾಣ ಕೇಂದ್ರದಲ್ಲಿ ರಾಮಕೃಷ್ಣ ಹೆಗಡೆ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್ ಆಡಳಿತ ವೈಫಲ್ಯತೆ ಕಂಡಿದೆ. ಪ್ಲೇನ್ ಟೆಕ್‌ ಆಫ್‌ ಆಗುವ ಹಂತದಲ್ಲಿಲ್ಲ. ರನ್-ವೇಗೆ ಬಂದು ನಿಂತಿದೆ. ತಮ್ಮ ವೈಫಲ್ಯ ಮರೆಮಾಚಲು ಎಸ್‌ಐಆರ್‌, ಇವಿಎಮ್‌ ಮತ್ತು ಕೇಂದ್ರ …

Read More »

ಶೌಚಾಲಯಕ್ಕೆ ಜಾತಿ ಕೇಳಿದ ಅಧಿಕಾರಿಗಳು – ತುಂಬಿದ ಸಭೆಯಲ್ಲಿ ಶಾಸಕರ ಎದುರೇ ಕಣ್ಣೀರಿಟ್ಟ ಮಹಿಳೆ!

ಚಿಕ್ಕಮಗಳೂರು: ಶೌಚಾಲಯಕ್ಕಾಗಿ ಮಹಿಳೆಯೊಬ್ಬರು ತುಂಬಿದ ಸಭೆಯಲ್ಲಿ ಕಣ್ಣೀರಿಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಗಂಡಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಮ್ಮೆ ಗ್ರಾಮದಲ್ಲಿ ನಡೆದಿದೆ. ಶೃಂಗೇರಿ ತಾಲೂಕಿನ ಕಿಗ್ಗಾ ಗ್ರಾಮದಲ್ಲಿ ನಡೆದ ಜನಸೇವಾ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರು ತುಂಬಿದ ಸಭೆಯಲ್ಲಿ ಶಾಸಕರ ಎದುರೇ ಶೌಚಾಲಯಕ್ಕಾಗಿ ಕಣ್ಣೀರಿಟ್ಟಿದ್ದಾರೆ. ಅಧಿಕಾರಿಗಳು ನೀವು ಎಸ್ಸಿ-ಎಸ್ಟಿ ಸಮುದಾಯಕ್ಕೆ ಸೇರಿದ್ದೀರಾ ಎಂದು ಪ್ರಶ್ನಿಸಿದಾಗ ಮಹಿಳೆ ಇಲ್ಲ ನಾನು ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಮಹಿಳೆ ಎಂದಿದ್ದಾರೆ. ಆಗ ಅಧಿಕಾರಿಗಳು ನೀವು …

Read More »

ಯೋಧನ ಪಾರ್ಥಿವ ಶರೀರ ಸಾಗಿಸುತ್ತಿದ್ದ ಅಂಬುಲೆನ್ಸ್ ಅಪಘಾತ – ನಾಲ್ವರು ದುರ್ಮರಣ

ಲಕ್ನೋ: ಯೋಧನ ಪಾರ್ಥಿವ ಶರೀರ ಸಾಗಿಸುತ್ತಿದ್ದ ಅಂಬುಲೆನ್ಸ್‌ವೊಂದು  ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೃತಪಟ್ಟ ಘಟನೆ ಉತ್ತರ ಪ್ರದೇಶದ  ಸುಲ್ತಾನ್‌ಪುರದಲ್ಲಿ  ನಡೆದಿದೆ. ಅಪಘಾತದಲ್ಲಿ ಯೋಧನ ಪುತ್ರ, ಸಹೋದರ, ಸೋದರಳಿಯ ಹಾಗೂ ಅಂಬುಲೆನ್ಸ್ ಚಾಲಕ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಚಂಡೀಗಢದಿಂದ ಉತ್ತರ ಪ್ರದೇಶದ ದಿಯೋರಿಯಾ ಜಿಲ್ಲೆಯಲ್ಲಿರುವ ಸ್ವಗ್ರಾಮಕ್ಕೆ ಸೇನೆಯ ಸುಬೇದಾರ್ ಮೇಜರ್ ಸತ್ಯವಾನ್ ಅವರ ಪಾರ್ಥಿವ ಶರೀರ ಅಂಬುಲೆನ್ಸ್‌ನಲ್ಲಿ ಕೊಂಡೊಯ್ಯಲಾಗುತ್ತಿತ್ತು. ಭಾನುವಾರ ಬೆಳಗ್ಗೆ ಸುಮಾರು 8 ಗಂಟೆಗೆ …

Read More »

ಕಾಳಿ ನದಿಯಲ್ಲಿ ಜಲಸಾಹಸ ಕ್ರೀಡೆಗೆ ಆತಂಕ; ಗಣೇಶಗುಡಿ – ಇಳವಾದಲ್ಲಿ ದೈತ್ಯ ಮೊಸಳೆ ಪ್ರತ್ಯಕ್ಷ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ಸ್ಥಳವಾದ ಜೋಯಿಡಾ, ಗಣೇಶ ಗುಡಿ ಭಾಗದ ಕಾಳಿ ನದಿಯಲ್ಲಿ  ಮೊಸಳೆಗಳು ಹೆಚ್ಚಾಗಿದ್ದು, ಆತಂಕ ತಂದೊಡ್ಡಿವೆ. ಜೋಯಿಡಾ ತಾಲೂಕಿನ ಗಣೇಶ ಗುಡಿಯಲ್ಲಿ ರಿವರ್ ರ‍್ಯಾಫ್ಟಿಂಗ್‌, ಕಯಾಕಿಂಗ್, ಬೋಟಿಂಗ್ ಹಾಗೂ ರಿಪವರ್ ಸ್ವಿಮ್ಮಿಂಗ್ ಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಹೀಗಿರುವಾಗ ಜಲಸಾಹಸ ಕ್ರೀಡೆ ನಡೆಸುವ ಸ್ಥಳದಲ್ಲೇ ಮೊಸಳೆ ಪ್ರತ್ಯಕ್ಷವಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಕಾಳಿ ನದಿ ನೀರಿನಲ್ಲಿ ಈ ಹಿಂದೆ ಮೊಸಳೆಗಳು ಇರಲಿಲ್ಲ. ಬಹುತೇಕ ಮೊಸಳೆಗಳು ದಾಂಡೇಲಿ …

Read More »

ಹೊಸಕೋಟೆಯಲ್ಲಿ ಭೀಕರ ಅಗ್ನಿ ಅವಘಡ; ಕೆಮಿಕಲ್ ಬ್ಲಾಸ್ಟ್ ಆಗಿ ಹೊತ್ತಿ ಉರಿದ ಕಂಟೇನರ್

ಬೆಂಗಳೂರು: ಹೊಸಕೋಟೆ ನಗರದ ಸಂತೆ ಸರ್ಕಲ್‌ನಲ್ಲಿ ಸಂಜೆ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಲಾರಿ ಕಂಟೇನರ್ ತಯಾರಿಸುವ ಗ್ಯಾರೇಜ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆ ಕಂಟೇನರ್‌ ಧಗಧಗನೇ ಹೊತ್ತಿ ಉರಿದಿದೆ. ನಗರದ ಸಂತೆ ಸರ್ಕಲ್ ಬಳಿಯ ʼಕಾರ್ತಿಕ್ ಇಂಜಿನಿಯರಿಂಗ್ ವರ್ಕ್ಸ್‌ʼ ಗ್ಯಾರೇಜ್‌ನಲ್ಲಿ ಈ ಘಟನೆ ಸಂಭವಿಸಿದೆ. ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್ ಅಗ್ನಿ ಅವಘಡ ಸಂಭವಿಸಿದೆ ಎಂಬ ಶಂಕೆ ವ್ಯಕ್ತವಾಗಿದೆ. ಲಾರಿ ಪೇಂಟಿಂಗ್ ಮಾಡಲು ಗ್ಯಾರೇಜ್ ಒಳಗೆ ಇಟ್ಟಿದ್ದ ಕೆಮಿಕಲ್ ಡಬ್ಬಿಗಳಿಗೆ …

Read More »