ಹಾವೇರಿ: ಇಟ್ಟಿಗೆ ತುಂಬಿದ ಟ್ರ‍್ಯಾಕ್ಟರ್ ಮತ್ತು ಟ್ರೇಲರ್ ನಡುವೆ ಸಿಲುಕಿ ಚಾಲಕ ಸಾವನ್ನಪ್ಪಿರುವ ಘಟನೆ ಹಾವೇರಿ ತಾಲೂಕಿನ ಮರೋಳ ಗ್ರಾಮದಲ್ಲಿ ನಡೆದಿದೆ. ಹಾವೇರಿ ತಾಲೂಕಿನ ಗುತ್ತಲ ತಾಂಡಾದ ನಿವಾಸಿ ದೇವರಾಜ್ ಲಮಾಣಿ (26) ಮೃತ ಚಾಲಕ. ದೇವರಾಜ್ ಬೆಳಗ್ಗೆ ಎರಡೂವರೆ ಸಾವಿರ ಇಟ್ಟಿಗೆ ತುಂಬಿಕೊಂಡು ಮರೋಳ ಗ್ರಾಮಕ್ಕೆ ಬಂದಿದ್ದ. ಈ ವೇಳೆ ಏಕಾಏಕಿ ಟ್ರ‍್ಯಾಕ್ಟರ್‌ನ ಎಂಜಿನ್ ಮೇಲೆ ಎದ್ದು ನಡುವಲ್ಲಿ ಸಿಲುಕಿ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಗುತ್ತಲ ಪೊಲೀಸರು ಭೇಟಿ …
Read More »Yearly Archives: 2026
ವೈಷ್ಣೋದೇವಿ ಯಾತ್ರೆಗೂ ಸರ್ಕಾರದಿಂದ ಸಹಾಯ ಧನ: ರಾಮಲಿಂಗಾರೆಡ್ಡಿ
ಬೆಂಗಳೂರು: ಶ್ರೀ ಮಾತಾ ವೈಷ್ಣೋದೇವಿ ದೇವಾಲಯಕ್ಕೆ ಭೇಟಿ ನೀಡುವ ಯಾತ್ರಿಗಳಿಗೆ ತಲಾ 5 ಸಾವಿರ ಸಹಾಯಧನ ಯೋಜನೆ ಜಾರಿ ಮಾಡಲಾಗಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್‌ನ ಮಂಜೇಗೌಡ ಪ್ರಶ್ನೆಗೆ ಉತ್ತರ ನೀಡಿದ ಅವರು, ಶ್ರೀ ಮಾತಾ ವೈಷ್ಣೋದೇವಿ ದೇವಾಲಯಕ್ಕೆ ಭೇಟಿ ನೀಡುವ ಯಾತ್ರಿಗಳಿಗೆ ತಲಾ 5 ಸಾವಿರ ಸಹಾಯಧನ ಯೋಜನೆ ಜಾರಿ ಮಾಡಲಾಗಿದೆ. ಇದಕ್ಕಾಗಿ ಸರ್ಕಾರ 5 ಕೋಟಿ ಹಣ ಮೀಸಲು ಇಡಲಾಗಿದೆ. …
Read More »ಒಂದು ವಾರ ಸಹಕಾರ ಕೊಟ್ಟರೆ ಹೋಟೆಲ್‌ಗಳಿಗೆ ಸಿಲಿಂಡರ್ ಕೊಡ್ತೀವಿ: ಕೆ.ಹೆಚ್. ಮುನಿಯಪ್ಪ
ಬೆಂಗಳೂರು: ಒಂದು ವಾರ ಹೋಟೆಲ್‌ಗಳು ಗ್ಯಾಸ್ ಸಿಲಿಂಡರ್‌ಗಾಗಿ ಸಹಕಾರ ಕೊಡಬೇಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಮುನಿಯಪ್ಪ ಹೋಟೆಲ್ ಅಸೋಸಿಯೇಷನ್‌ಗೆ ಮನವಿ ಮಾಡಿದ್ದಾರೆ. ವಿಧಾನ ಪರಿಷತ್‌ನಲ್ಲಿ ಗ್ಯಾಸ್ ಸಮಸ್ಯೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಮಗೆ ಡೊಮೆಸ್ಟಿಕ್ ಸಿಲಿಂಡರ್ ಸಮಸ್ಯೆ ಇಲ್ಲ. ಎಷ್ಟು ಸಪ್ಲೈ ಆಗಬೇಕೋ ಅಷ್ಟು ಆಗಿದೆ. ಗೃಹ ಬಳಕೆ ನಿಲ್ಲಿಸೋದಿಲ್ಲ. 3 ಲಕ್ಷಕ್ಕೂ ಹೆಚ್ಚು ಸಿಲಿಂಡರ್ ಬಳಕೆ ಆಗುತ್ತಿದೆ. ಅದನ್ನ ಕೊಡುತ್ತಿದ್ದೇವೆ. ಕಮರ್ಷಿಯಲ್ ಗ್ಯಾಸ್ …
Read More »ರಾಜ್ಯದಲ್ಲಿ ಗ್ಯಾಸ್ ವಿತರಣೆಗೆ ಗೈಡ್‌ಲೈನ್ಸ್ ಬಿಡುಗಡೆ – ಹೋಟೆಲ್‌ಗಳಿಗೆ ಕೇವಲ 10%
ಬೆಂಗಳೂರು: ಗ್ಯಾಸ್ ವಿತರಣೆಗೆ ಕರ್ನಾಟಕ ಸರ್ಕಾರದಿಂದ ಗೈಡ್‌ಲೈನ್ಸ್ ಬಿಡುಗಡೆ ಮಾಡಲಾಗಿದೆ. ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ಪ್ರಾಮುಖ್ಯತೆ ನೀಡಿದ್ದು, ಶೇ.100 ಗ್ಯಾಸ್ ವಿತರಣೆಗೆ ಸೂಚನೆ ನೀಡಿದೆ. ಆದರೆ, ಹೋಟೆಲ್‌ಗಳಿಗೆ ಕೇವಲ 10% ಗ್ಯಾಸ್ ವಿತರಣೆಗೆ ಸೂಚಿಸಲಾಗಿದೆ. ನಾಳೆಯಿಂದ ಗ್ಯಾಸ್ ವಿತರಣೆಗೆ ಸರ್ಕಾರ ಸೂಚಿಸಿದೆ. ಅಗತ್ಯ ವಲಯಗಳಿಗೆ ಪ್ರಮುಖ ಆದ್ಯತೆ ನೀಡಲಾಗಿದೆ. ಯಾವ್ಯಾವ ವಲಯಕ್ಕೆ ಎಷ್ಟೆಷ್ಟು ಪರ್ಸೆಂಟೇಜ್ ಗ್ಯಾಸ್ ವಿತರಿಸಬೇಕೆಂದು ಏಜೆನ್ಸಿ ಕಂಪನಿಗಳಿಗೆ ಸರ್ಕಾರ ಗೈಡ್‌ಲೈನ್ಸ್ ಬಿಡುಗಡೆ ಮಾಡಿದೆ. ಯಾವ್ಯಾವ …
Read More »ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರವನ್ನೂ ನೀಡಬೇಕು
ಖಾನಾಪುರ: ದೇಶದ ಭವಿಷ್ಯ ಕಟ್ಟುವ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಸಂಸ್ಕಾರವನ್ನೂ ನೀಡುವಂತೆ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ ಜಾರಕಿಹೊಳಿ ಹೇಳಿದರು. ಯಮಕನಮರಡಿ ಮತಕ್ಷೇತ್ರದ ಅಲದಾಳ ಗ್ರಾಮದಲ್ಲಿ ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ೨೦ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಅಂಗನವಾಡಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಸಚಿವ ಸತೀಶ ಜಾರಕಿಹೊಳಿ ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಲು ಆದ್ಯತೆ ನೀಡಿದ್ದಾರೆ. ಪಾಲಕರು ಸರ್ಕಾರಿ ಸೌಲಭ್ಯಗಳ ಸದುಪಯೋಗ …
Read More »ಚುನಾವಣೆ ಎದುರಿಸಲು ಪಕ್ಷವನ್ನು ತಳಮಟ್ಟದಿಂದಲೇ ಸಂಘಟಿಸಬೇಕು
ಬೆಳಗಾವಿ: ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಸೇರಿದಂತೆ ವಿವಿಧ ಚುನಾವಣೆ ಎದುರಿಸಲು ಪಕ್ಷವನ್ನು ತಳಮಟ್ಟದಿಂದಲೇ ಸಂಘಟಿಸಬೇಕು ಎಂದು ಕರ್ನಾಟಕ ಕಾಂಗ್ರೆಸ್ ಪ್ರದೇಶ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ವಿನಯಕುಮಾರ ಸೊರಕೆ ಹೇಳಿದರು. ನಗರದ ಕಾಂಗ್ರೆಸ್ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬೆಳಗಾವಿ, ಗ್ರಾಮೀಣ ಜಿಲ್ಲಾ ಪ್ರಚಾರ ಸಮಿತಿ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿದೆ ಎಂದು ನಿರ್ಲಕ್ಷಿಸಬಾರದು. ಪದಾಧಿಕಾರಿಗಳು, ಕಾರ್ಯಕರ್ತರು ಅಧಿಕಾರದ ಬದಲಾಗಿ ಪಕ್ಷಕ್ಕಾಗಿ ದುಡಿಯುವ ಮನೋಪ್ರವೃತ್ತಿ ಬೆಳೆಸಿಕೊಳ್ಳಬೇಕು …
Read More »ಬೆಳಗಾವಿ:15 ದಿನ ಮಗು ಅನುಮಾಸ್ಪದ ಸಾವು:ತಂದೆಯೇ ಮಗುವಿಗೆ ವಿಷ ಪ್ರಾಶನ ಶಂಕೆ
ಬೆಳಗಾವಿ: 15 ದಿನಗಳ ಹಿಂದೆಯಷ್ಟೇ ಜನಿಸಿದ್ದ ಮಗು ಏಕಾಏಕಿ ಸಾವನ್ನಪ್ಪಿದ್ದು, ತಂದೆ ಮೇಲೆ ಅನುಮಾನ ವ್ಯಕ್ತವಾಗಿದೆ. ಬೆಳಗಾವಿ ತಾಲೂಕಿನ ಉಕ್ಕಡ ಗ್ರಾಮದಲ್ಲಿ 15 ದಿನಗಳ ಹಿಂದೆಯಷ್ಟೇ ಜನಿಸಿದ್ದ ಮಗು ಪ್ರಿಯಾಂಕಾ ಇಂದು (ಮಾರ್ಚ್ 17) ಏಕಾಏಕಿ ಸಾವನ್ನಪ್ಪಿದ್ದು, ತಂದೆಯೇ ಮಗುವಿಗೆ ವಿಷ ಪ್ರಾಶನ ಮಾಡಿರುವ ಆರೋಪ ಕೇಳಿಬಂದಿದೆ. ಬಿಮ್ಸ್ ಆಸ್ಪತ್ರೆ ಮುಂದೆ ಮಗುವಿನ ಶವವಿಟ್ಟುಕೊಂಡು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಮತ್ತೊಂದೆಡೆ ಮಗುವಿನ ತಂದೆ ಭೀಮರಾಯ ತಲೆಮರೆಸಿಕೊಂಡಿದ್ದಾನೆ. ಬಿಮ್ಸ್ ಆಸ್ಪತ್ರೆಗೆ ಡಿಸಿಪಿ …
Read More »ಉತ್ತರ ಕೊಡದ ಇಲಾಖೆಗಳು – ಸಚಿವರಿಗೆ ಸಿಎಂ ಪತ್ರ, ಖಡಕ್ ವಾರ್ನಿಂಗ್, ವಿಧಾನಸಭೆಯಲ್ಲಿ ಪಟ್ಟಿ ಓದಿದ ಸ್ಪೀಕರ್
ಬೆಂಗಳೂರು: ಸ್ಪೀಕರ್ ಖಾದರ್ ಖದರ್‌ಗೆ ಸರ್ಕಾರ ಬೆಚ್ಚಿಬಿದ್ದಿದೆ. ಸ್ಪೀಕರ್ ಸಭಾತ್ಯಾಗದ ಅಪರೂಪದ ಘಟನೆಯಿಂದ ಸರ್ಕಾರಕ್ಕೆ ಮುಜುಗರ ಆಗಿದೆ. ಹಾಗಾಗಿಯೇ ತಮ್ಮದೇ ಸಂಪುಟದ ಸಚಿವರಿಗೂ ಸಿಎಂ ಪತ್ರ ಬರೆದು ವಾರ್ನಿಂಗ್ ಮಾಡಿದ್ದಾರೆ. ಸರ್ಕಾರಕ್ಕೆ ಮುಜಗರ, ಶಾಸಕರ ಹಕ್ಕಿಗೆ ಚ್ಯುತಿ ಆಗಿದೆ ಎಂದು ಖಾರವಾಗಿ ಪತ್ರ ಬರೆದಿದ್ದಾರೆ. ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಸದನದಲ್ಲಿ ಉತ್ತರಿಸಲು ಬಾಕಿ ಇರುವ ಪ್ರಶ್ನೆಗಳಿಗೆ ಉತ್ತರ ಕಳುಹಿಸಿಲ್ಲ. ಇದುವರೆಗೂ ಉತ್ತರ ಕಳುಹಿಸದೇ ಇರುವುದು ಶಾಸಕರುಗಳಿಗೆ ಸದನದಲ್ಲಿ ಅನಾನುಕೂಲ ಆಗಿದೆ. …
Read More »ಬೆಳಗಾವಿಯಲ್ಲಿ ಐಟಿ, ಸೆಮಿಕಂಡಕ್ಟರ್ ಪಾರ್ಕ್ ಸ್ಥಾಪಿಸಲು ಕ್ರಮ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ರಾಜ್ಯದ ಎರಡನೇ ರಾಜಧಾನಿಯೆಂದೇ ಘೋಷಣೆಗೊಂಡಿರುವ ಹಾಗೂ ರಾಜ್ಯದ ಗಡಿ ಜಿಲ್ಲೆಯಾದ ಬೆಳಗಾವಿಯಲ್ಲಿ ಐ.ಟಿ ಪಾರ್ಕ್ , ಸೆಮಿಕಂಡಕ್ಟರ್ ಪಾರ್ಕ್‌ಗಳನ್ನು ನಿರ್ಮಿಸಿ ಅಭಿವೃದ್ಧಿ ಪರ ರಾಜ್ಯವನ್ನಾಗಿ ಮಾಡುವ ಹಾಗೂ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಉದ್ದೇಶ ಸರ್ಕಾರಕ್ಕೆ ಇದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ತಿಳಿಸಿದರು. ಇಂದು ವಿಧಾನಸಭೆಯ ಪ್ರಶ್ನೋತ್ತರ ಕಲಾಪದ ವೇಳೆಯಲ್ಲಿ ವಿಧಾನಸಭಾ ಸದಸ್ಯರಾದ ಅಭಯ್ …
Read More »SSLC ಪರೀಕ್ಷೆಗೆ ಹಾಜರಾಗುತ್ತಿರುವ ಮಕ್ಕಳಿಗೆ ಶುಭಕೋರಿದ ಸಿಎಂ
ಬೆಂಗಳೂರು: 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾ.18ರಿಂದ ಪ್ರಾರಂಭವಾಗುತ್ತಿದ್ದು, ಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸದನದಲ್ಲಿ ಶುಭಾಶಯ ಕೋರಿದರು. ಪ್ರಸ್ತುತ ಸಾಲಿನಲ್ಲಿ 8,65,968 ಮಕ್ಕಳು ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗಳನ್ನು ತರಲಾಗಿದ್ದು, ಮೂರು ಹಂತದಲ್ಲಿ ಪರೀಕ್ಷೆಗಳು ನಡೆಯುತ್ತವೆ. ಒಂದು ವೇಳೆ ಮೊದಲ ಹಂತದ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾಗ್ಯೂ ಎರಡನೇ ಹಂತ, ಮೂರನೇ ಹಂತದಲ್ಲಿ ಪರೀಕ್ಷೆಗೆ ಅವಕಾಶ ಇರುವುದರಿಂದ ಯಾವುದೇ ವಿದ್ಯಾರ್ಥಿಗಳು ಆತಂಕಗೊಳ್ಳದೇ ಪರೀಕ್ಷೆಯನ್ನು ಎದುರಿಸುವಂತೆ …
Read More »
Laxmi News 24×7