ಬೆಳಗಾವಿ:ಕಾಂಗ್ರೆಸ್ ಸರ್ಕಾರದ ವೈಫಲ್ಯಗಳು ಹಾಗೂ ಜನವಿರೋಧಿ ಆಡಳಿತವನ್ನು ಖಂಡಿಸಿ ಬಿಜೆಪಿ ಹಮ್ಮಿಕೊಂಡಿರುವ ಬಳ್ಳಾರಿ ಚಲೋ ಪಾದಯಾತ್ರೆಗೆ ಬೆಂಬಲಿ ಸೂಚಿಸಿ ಬುಧವಾರ ಜಿಲ್ಲೆಯ ಬಿಜೆಪಿ ಹಾಲಿ, ಮಾಜಿ ಶಾಸಕರು, ಸ್ಥಳೀಯ ಮುಖಂಡರು ಭಾಗವಹಿಸಿ ಸಾಥ್ ನೀಡಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ, ವಿಧಾನಪರಿಷತ್‌ನ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಬಿಜೆಪಿ ಬೆಳಗಾವಿ ಜಿಲ್ಲಾಧ್ಯಕ್ಷ ಸುಭಾಷ್ಪಾಟೀಲ ಸೇರಿದಂತೆ ಜಿಲ್ಲೆಯ ಹಲವು ಪ್ರಮುಖ ನಾಯಕರು ಹೆಜ್ಜೆ …
Read More »Daily Archives: ಸೆಪ್ಟೆಂಬರ್ 10, 2026
ಮೊಬೈಲ್, ಟಿವಿಗೆ ಸಮಯ ವ್ಯರ್ಥ ಮಾಡದೆ ಜ್ಞಾನಾರ್ಜನೆಗೆ ಆದ್ಯತೆ ನೀಡಿ: ವಿದ್ಯಾರ್ಥಿಗಳಿಗೆ ಲಕ್ಷ್ಮೀ ಹೆಬ್ಬಾಳಕರ್ ಕರೆ
ಬೆಳಗಾವಿ: ವಿದ್ಯಾರ್ಥಿಗಳು ಜೀವನದಲ್ಲಿ ಸ್ಪಷ್ಟವಾದ ಗುರಿ ಇಟ್ಟುಕೊಂಡು, ಅದನ್ನು ಸಾಧಿಸುವ ನಿಟ್ಟಿನಲ್ಲಿ ನಿರಂತರವಾಗಿ ಪ್ರಯತ್ನಿಸಬೇಕು. ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯವಾದ ಘಟ್ಟವಾಗಿದ್ದು, ಈ ಸಮಯವನ್ನು ವ್ಯರ್ಥ ಮಾಡಿಕೊಳ್ಳದೆ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಮಾಜಿ ಸಚಿವೆ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಕರೆ ನೀಡಿದರು. ಬೆಳಗಾವಿಯ ಶಿವಬಸವ ನಗರದ ಕೆಪಿಟಿಸಿಎಲ್ ಸಮುದಾಯ ಭವನದಲ್ಲಿ ನಡೆದ “ಶ್ರೀರಾಮ್ ಸೇವಾ ಸಂಕಲ್ಪ” ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿ ಅವರು ಮಾತನಾಡಿದರು. …
Read More »ಅವರ ವಿದೇಶಿ ಹೂಡಿಕೆ ಬಗ್ಗೆ ಗೊತ್ತಿಲ್ಲ: ಸತೀಶ್ ಮೇಲಿನ ಇಡಿ ದಾಳಿ ಬಗ್ಗೆ ಲಖನ್ ಜಾರಕಿಹೊಳಿ ಹೇಳಿಕೆ
ಬೆಳಗಾವಿ: ಅವರ ಬಿಜಿನೆಸ್ ನನಗೆ ಗೊತ್ತಿಲ್ಲ. ಉದ್ಯಮದಲ್ಲಿ ಹೂಡಿಕೆ ಹಿನ್ನೆಲೆಯಲ್ಲಿ ದಾಳಿಯಾಗಿರಬಹದು ಎಂದು ಸಚಿವ ಸತೀಶ ಜಾರಕಿಹೊಳಿ ಮೇಲಿನ ಇಡಿ ದಾಳಿ ಬಗ್ಗೆ ಸಹೋದರ, ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ಬೆಳಗಾವಿ ಜಿಲ್ಲೆ ಗೋಕಾಕ ನಗರದಲ್ಲಿ ಲಖನ ಜಾರಕಿಹೊಳಿ ಮಾಧ್ಯಮಗಳ ಜೊತೆ ಮಾತನಾಡಿದ್ದು, ಸಚಿವ ಸತೀಶ ಅವರು ಉದ್ಯಮದಲ್ಲಿ ಹೂಡಿಕೆ ಹಿನ್ನೆಲೆಯಲ್ಲಿ ದಾಳಿಯಾಗಿರಬಹದು. ಅವರ ಉದ್ಯಮದ ಬಗ್ಗೆ ಅವರು ದಾಖಲೆ ಸಲ್ಲಿಸುತ್ತಾರೆ ಎಂದರು. ಎಸ್ ಟಿ ನಾಯಕರ …
Read More »ಬೆಳಗಾವಿ ಜಿಲ್ಲೆಯ ಪಡಿತರ ಚೀಟಿದಾರರ ಗಮನಕ್ಕೆ
ಬೆಳಗಾವಿ: ಅಂತ್ಯೋದಯ ಪಡಿತರ ಚೀಟಿದಾರರಿಗೆ ಕುಟುಂಬ ಸದಸ್ಯರ ಸಂಖ್ಯೆಯನ್ನು ಆಧರಿಸಿ ಉಚಿತವಾಗಿ ಆಹಾರ ಧಾನ್ಯ ವಿತರಿಸಲಾಗುತ್ತಿದ್ದು, 1 ರಿಂದ 3 ಸದಸ್ಯರು 0 ಕೆ.ಜಿ, 4 ಸದಸ್ಯರು 10 ಕೆ.ಜಿ, 5 ಸದಸ್ಯರು 30 ಕೆ.ಜಿ, 6 ಸದಸ್ಯರು 50 ಕೆ.ಜಿ, 7 ಸದಸ್ಯರು 70 ಕೆ.ಜಿ, 8 ಸದಸ್ಯರು 90 ಕೆ.ಜಿ, 9 ಸದಸ್ಯರು 110 ಕೆ.ಜಿ, 10 ಸದಸ್ಯರಿಗೆ 130 ಕೆ.ಜಿ ಅಕ್ಕಿಯನ್ನು ನೀಡಲಾಗುತ್ತಿದೆ. ರಾಜ್ಯ/ಕೇಂದ್ರ ಆದ್ಯತಾ …
Read More »ಯುವತಿ ನಾಪತ್ತೆ: ದೂರು ದಾಖಲು
ಬೆಳಗಾವಿ: ಬೆಳಗಾವಿ ನಗರದ ಬೆನ್ನಾಳ್ಳಿ ಚವಾಟಗಲ್ಲಿ ನಿವಾಸಿ ಪ್ರಣಾಲಿ ಮೋಹನ ಸಕಟ (ವ.19) ಎಂಬುವಳು ಸೆಪ್ಟೆಂಬರ್ 7 ರಂದು ಬೆನ್ನಾಳ್ಳಿ ಗ್ರಾಮದ ಕಿರಾಣಿ ಅಂಗಡಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವಳು ಮನೆಗೆ ಮರಳಿ ಬಾರದೆ ಕಾಣೆಯಾಗಿದ್ದು, ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಯುವತಿ ಚಹರೆ: 4 ಫೂಟ್.06 ಇಂಚ್ ಎತ್ತರ, ಗೋದಿಗೆಂಪು ಬಣ್ಣ ಮೈಯಿಂದ ಸಡಪಾತಳ, ದುಂಡು ಮುಖ, ಸಾದಾರಣ ಉದ್ದ ಮೂಗು, ಹಸಿರು ಬಣ್ಣದ …
Read More »
Laxmi News 24×7