Breaking News

Daily Archives: ಸೆಪ್ಟೆಂಬರ್ 3, 2026

ರಾಮದುರ್ಗ ತಾಲೂಕಿನಲ್ಲಿ ನಡೆದ ಕಳ್ಳತನ ಕಳ್ಳಿಯರ ಬಂಧನ

ಬೆಳಗಾವಿ: ಚಿನ್ನಾಭರಣ ಕಳ್ಳತನಕ್ಕೆ ಸಂಬಂಧಿಸಿದಂತೆ  ಬೆಳಗಾವಿಯ ಗ್ಯಾಂಗವಾಡಿಯ ಉಮಾ ಚೌಗುಲೆ(40) ಹಾಗೂ ಆರತಿ ಚೌಗುಲೆ(28)ಯನ್ನು ರಾಮದುರ್ಗ ತಾಲೂಕಿನ ಕಟಕೋಳ ಪೊಲೀಸರು ವಶಕ್ಲೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ರಾಮದುರ್ಗ ತಾಲೂಕಿನ ಬೀಡಕಿ ಗ್ರಾಮದ ಮಂಜುಳಾ ನರಗುಂದ ಲೋಕಾಪುರದಿಂದ ಸಾಲಹಳ್ಳಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕೈಚೀಲದಲ್ಲಿದ್ದ 3 ಲಕ್ಷ ರೂ. ಮೌಲ್ಯದ 30 ಗ್ರಾಂ ಚಿನ್ನ ಹಾಗೂ 16 ಸಾವಿರ ರೂ. ಮೌಲ್ಯದ 80 ಗ್ರಾಂ ಬೆಳ್ಳಿ ಆಭರಣ ಕಳ್ಳುವಾಗಿರುವ ಕುರಿತು …

Read More »

ಅಥಣಿ: ಕಾಲು ಜಾರಿಗೆ ಬಿದ್ದ ರೈತ ಸಾವು

ಅಥಣಿ ಗ್ರಾಮೀಣ: ಪಂಪ್ ಸೆಟ್ ಆರಂಭಿಸಲು ಗದ್ದೆಗೆ ಹೋಗಿದ್ದ ತಾಲೂಕಿನ ಬೆವನೂರ ಗ್ರಾಮದ ರೈತ ಬಸಗೌಡ ಪಾಟೀಲ(39)ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ಅಥಣಿ ತಾಲೂಕಿನ ಬೆವನೂರ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಬಸಗೌಡ ಪಾಟೀಲ ಬಾವಿಗೆ ಬಿದ್ದ ಕೂಡಲೇ ಸ್ಥಳೀಯರು ರಕ್ಷಣೆಗೆ ಧಾವಿಸಿದರೂ ಪ್ರಯೋಜನವಾಗಲಿಲ್ಲ. ನಂತರ ಮೃತ ದೇಹವನ್ನು ಅಥಣಿ ಅಗ್ನಿಶಾಮಕ ದಳ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಯಿತು. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. …

Read More »

40 ವಿಶೇಷ ಚೇತನ ಮಕ್ಕಳಿಗೆ ಸಾಧನ ವಿತರಿಸಿದ ಶಾಸಕ ಆಸೀಫ್ ಸೇಠ್

ಬೆಳಗಾವಿ: ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸಿಫ್ (ರಾಜು) ಸೇಠ್ ಅವರು ಬೆಳಗಾವಿ ನಗರದ ವಿವಿಧ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 40 ವಿಶೇಷ ಚೇತನ ಮಕ್ಕಳಿಗೆ ವಿಶೇಷ ಸಹಾಯಕ ಸಾಧನಗಳನ್ನು ವಿತರಿಸಿದರು. ಮಕ್ಕಳ ದೈನಂದಿನ ಚಟುವಟಿಕೆಗಳು, ಚಲನವಲನ, ಶಿಕ್ಷಣ ಹಾಗೂ ಸ್ವಾವಲಂಬನೆಗೆ ನೆರವಾಗುವ ಉದ್ದೇಶದಿಂದ ಈ ಸಾಧನಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಆಸಿಫ್ (ರಾಜು) ಸೇಠ್, ಪ್ರತಿಯೊಬ್ಬ ಮಗುವಿಗೂ ಕಲಿಯಲು, ಬೆಳೆಯಲು ಮತ್ತು ಆತ್ಮವಿಶ್ವಾಸದಿಂದ ಬದುಕಲು ಸಮಾನ …

Read More »

ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಾರಾಟ ಮಾಡಿದ್ದ ಅಜ್ಜಿ ಅಂದರ್

ಬೆಳಗಾವಿ: ನಕಲಿ ದಾಖಲೆ ಸೃಷ್ಠಿಸಿ  ಬೇರಯವರ ಭೂಮಿ ಮಾರಾಟ ಮಾಡಿದ 80 ವರ್ಷದ ಅಜ್ಜಿಯನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ವಡಗಾಂವ ಗಣೇಶ ಕಾಲೋನಿ ನಿವಾಸಿ ಮಂದಾಕಿನಿ ಪರಿಶವಾಡಕರ ಬಂಧಿತ ಆರೋಪಿ. ಬೇರೊಬ್ಬರ ಹೆಸರಿನಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನನ್ನು ತನ್ನದೆಂದು ಮಾರಾಟ ಮಾಡಿರುವ ಆರೋಪ ಇವರ ಮೇಲೆ ಇದೆ. ಕಣಬರ್ಗಿ ರಸ್ತೆಯ ಮಹಾಂತೇಶ ನಗರದಲ್ಲಿರುವ ಪ್ಲಾಟ್ ನಂ.2313 ಹಾಗೂ ಸಿಟಿಎಸ್ ನಂ.9449ರ ಜಾಗ ರತ್ನಾ ಯಶವಂತ ಮಲ್ಲೂಕರ ಅವರ ಹೆಸರಿನಲ್ಲಿತ್ತು. …

Read More »

8 ಜನ ಮೊಬೈಲ್ ಕಳ್ಳರನ್ನು ಬಂಧಿಸಿದ ಬೆಳಗಾವಿ ಪೊಲೀಸರು

ಬೆಳಗಾವಿ: ಬೆಳಗಾವಿ ಪೊಲೀಸರು ಕಾರ್ಯಚರಣೆ ನಡೆಸುವ ಮೂಲಕ ಮೊಬೈಲ್ ಕಳ್ಳತನ ಪ್ರಕರಣದಲ್ಲಿ 8 ಜನ ಆರೋಪಿಗಳನ್ನು ಬಂಧಿಸಿ, 40 ಮೋಬೈಲ್ ಫೋನ್ ವಶಕ್ಕೆ ಪಡೆದಿದ್ದಾರೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ​ಕುಟಕೋಳ ಪೋಲಿಸ್ ಠಾಣೆಯಲ್ಲಿ ದಾಖಲಾದ ಕಳ್ಳತನ ಪ್ರಕರಣ ತನಿಖೆ ನಡೆಸಿದ ಪೊಲೀಸರು, ಆರೋಪಿಗಳಿಂದ ಒಟ್ಟು 1 ಲಕ್ಷ ,34, ಸಾವಿರದ 200 ರೂಪಾಯಿ ಮೌಲ್ಯದ ವಸ್ತುಗಳು ವಶ ಪಡೆದಿದ್ದಾರೆ. ವಿವಿಧ ಕಂಪನಿಗಳ 4, ಲಕ್ಷ 94, ಸಾವಿರದ 200 …

Read More »

ಬೆಳಗಾವಿ ಉತ್ತರ ವಲಯದ 8ನೇ ಕರ್ತವ್ಯ ಕೂಟ: ನಗರ ಘಟಕಕ್ಕೆ 13 ಬಹುಮಾನ

ಬೆಳಗಾವಿ: ಬೆಳಗಾವಿ ಉತ್ತರ ವಲಯ ಮಟ್ಟದ 8ನೇ ಕರ್ತವ್ಯ ಕೂಟ – 2026ರಲ್ಲಿ ಬೆಳಗಾವಿ ನಗರ ಪೊಲೀಸ್ ಘಟಕದ ತಂಡವು ಭಾಗವಹಿಸಿ, ವಿವಿಧ ತಾಂತ್ರಿಕ, ವೈಜ್ಞಾನಿಕ ಹಾಗೂ ವಿಶೇಷ ಪೊಲೀಸ್ ಕೌಶಲ್ಯಗಳ ಸ್ಪರ್ಧೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿ ಒಟ್ಟು 13 ಬಹುಮಾನಗಳನ್ನು ಪಡೆದುಕೊಂಡಿದೆ. ಈ ಮೂಲಕ ಬೆಳಗಾವಿ ನಗರ ಘಟಕವು (11 ಪದಕ + 2 ಟ್ರೋಫಿ) ಗಳೊಂದಿಗೆ ವಲಯ ಮಟ್ಟದಲ್ಲಿ ಸರ್ವೋತ್ತಮ ದ್ವಿತೀಯ ಸ್ಥಾನ ಪಡೆದು ಗೌರವಕ್ಕೆ ಪಾತ್ರವಾಗಿದೆ. …

Read More »

ಬೆಳಗಾವಿ ಜಿಲ್ಲೆಯಲ್ಲಿ ಸೆ.5 ರಂದು ಪ್ರಜಾಸೇವೆ ಆಂದೋಲನ ಸಭೆ

ಬೆಳಗಾವಿ: ರಾಜ್ಯ ಸರ್ಕಾರದ ಸೂಚನೆಯನ್ವಯ ಸಾರ್ವಜನಿಕ ಕುಂದು ಕೊರತೆಗಳನ್ನು ಆಲಿಸಿ, ಸೂಕ್ತ ಪರಿಹಾರ ನೀಡುವ ಉದ್ದೇಶದಿಂದ ಪ್ರಜಾ ಸೇವೆ ಆಂದೋಲನ ಸಭೆ ಶನಿವಾರ (ಸೆ.5) ಖಾನಾಪುರ ತಾಲೂಕಿನ ಲೋಕಮಾನ್ಯ ಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಉಸ್ತವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಪ್ರತಿ ಮಾಹೆಯ 1ನೇ ಹಾಗೂ 3ನೇ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ‌ ಜಿಲ್ಲಾ‌ ಮಟ್ಟದ ಹಾಗೂ ಪ್ರತಿ ಮಾಹೆಯ 2ನೇ ಹಾಗೂ …

Read More »

ಜಿಲ್ಲಾದ್ಯಂತ ಇಂದು ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಬೆಳಗಾವಿ: ಜಿಲ್ಲಾ ಪಂಚಾಯತ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಸೆ.3 ರಂದು ಜಿಲ್ಲೆಯ ಎಲ್ಲ ತಾಲೂಕುಗಳ ಒಟ್ಟು 22 ಸ್ಥಳಗಳಲ್ಲಿ “ಸ್ವಯಂ ಪ್ರೇರಿತ ರಕ್ತದಾನ ಶಿಬಿರ”ವನ್ನು ಆಯೋಜಿಸಲಾಗಿದೆ. ಹೀಗಾಗಿ, ಸರ್ಕಾರಿ ನೌಕರರು ಸಿಬ್ಬಂದಿ, ಸಂಘ-ಸಂಸ್ಥೆಗಳ ಸದಸ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಮನವಿ ಮಾಡಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಕ್ತದಾನ …

Read More »