Breaking News

ಅಥಣಿ: ಕಾಲು ಜಾರಿಗೆ ಬಿದ್ದ ರೈತ ಸಾವು

Spread the love

ಅಥಣಿ ಗ್ರಾಮೀಣ: ಪಂಪ್ ಸೆಟ್ ಆರಂಭಿಸಲು ಗದ್ದೆಗೆ ಹೋಗಿದ್ದ ತಾಲೂಕಿನ ಬೆವನೂರ ಗ್ರಾಮದ ರೈತ ಬಸಗೌಡ ಪಾಟೀಲ(39)ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ಅಥಣಿ ತಾಲೂಕಿನ ಬೆವನೂರ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಬಸಗೌಡ ಪಾಟೀಲ ಬಾವಿಗೆ ಬಿದ್ದ ಕೂಡಲೇ ಸ್ಥಳೀಯರು ರಕ್ಷಣೆಗೆ ಧಾವಿಸಿದರೂ ಪ್ರಯೋಜನವಾಗಲಿಲ್ಲ. ನಂತರ ಮೃತ ದೇಹವನ್ನು ಅಥಣಿ ಅಗ್ನಿಶಾಮಕ ದಳ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಯಿತು. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಎಸ್‌ಐ ವಿಜಯ ಪಾಟೀಲ, ತನಿಖಾಸಹಾಯಕ ಬಿ.ಬಿ.ಪಾಟೀಲ, ಗುಂಡುರಾವ್ ರಾಠೋಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Spread the love

About Laxminews 24x7

Check Also

ಭೂ ಮಂಜೂರಾತಿಗಾಗಿ ಮಾಜಿ ಯೋಧ ಆತ್ಮಹತ್ಯೆಗೆ ಯತ್ನ

Spread the loveಬೆಂಗಳೂರು: ದೇಶಕ್ಕಾಗಿ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ, ಶತ್ರುಗಳ ವಿರುದ್ಧ ಹೋರಾಟದ ವೇಳೆ ಕಾಲಿಗೆ ಗಾಯ ಮಾಡಿಕೊಂಡಿದ್ದ ಮಾಜಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ