Breaking News

Daily Archives: ಸೆಪ್ಟೆಂಬರ್ 2, 2026

ವಿಶ್ವ ಟೇಕ್ವಾಂಡೋ ಸ್ಪರ್ಧೆಯಲ್ಲಿ 3 ಚಿನ್ನದ ಪದಕ ಗೆದ್ದ ಹೆಬ್ಬಾಳದ ಎನ್‍ಎಫ್‍ಸಿ ಟೀಮ್‌

ಬೆಂಗಳೂರು: ಮಂಗೋಲಿಯಾದಲ್ಲಿ ನಡೆದ ವಿಶ್ವ ಟೇಕ್ವಾಂಡೋ ಸ್ಪರ್ಧೆಯಲ್ಲಿ ಬೆಂಗಳೂರಿನ ಹೆಬ್ಬಾಳದ ಎನ್‍ಎಫ್‍ಸಿ ಟೀಂ ಚಿನ್ನದ ಬೇಟೆಯಾಡಿದೆ. ಭಾರತವನ್ನ ಪ್ರತಿನಿಧಿಸಿದ್ದ ಎನ್‍ಎಫ್‍ಸಿಯ ಇಶ್ವಾಕ್ 2 ಚಿನ್ನ ಹಾಗೂ ಮಹಿಮಾ ಪಿ.ಜಿ 1 ಚಿನ್ನದ ಪದಕವನ್ನು ಗಳಿಸಿದ್ದಾರೆ. ಧೃತಿ ದೀಪಕ್ ಶಾಸ್ತ್ರಿ, ಸ್ಮಯಾನ್ ಚೇತನ್, ಪ್ರಕೃತಿ, ಪ್ರಣಮ್ಯ ಬೆಳ್ಳಿ ಪದಕವನ್ನು ಗಳಿಸಿದ್ದಾರೆ. ಇನ್ನುಳಿದಂತೆ ಡಿ.ಸಿ. ಸಿದ್ದೇಶ್ ಹಾಗೂ ದೀಪಕ್ ಮೋಹನ್ ಕಂಚಿನ ಪದಕವನ್ನು ಗಳಿಸಿದ್ದಾರೆ. ಒಟ್ಟಾರೆ ಎನ್‍ಎಫ್‍ಸಿ ಟೀಂ 3 ಚಿನ್ನ, 5 ಬೆಳ್ಳಿ, …

Read More »

ಗದಗ ಜಿಲ್ಲೆಯಲ್ಲಿ ಬರ ವೀಕ್ಷಿಸಿದ ಸಿಎಂ ಡಿಕೆಶಿ – ಬರಪೀಡಿತವೆಂದು ಘೋಷಿಸುವುದಾಗಿ ಭರವಸೆ

ಗದಗ: ಜಿಲ್ಲೆಯ ಕದಂಪೂರದಲ್ಲಿ ಅನ್ನದಾತರ ಜಮೀನುಗಳಿಗೆ ತೆರಳಿ ಸಿಎಂ ಡಿಕೆ ಶಿವಕುಮಾರ್ ಅವರಿಂದು ಬರ ಪರಿಸ್ಥಿತಿಯ ಕುರಿತು ಪರಿಶೀಲಿನೆ ನಡೆಸಿದ್ದಾರೆ. ಹುಬ್ಬಳ್ಳಿಯಿಂದ  ಹೆಲಿಕಾಪ್ಟರ್ ಮೂಲಕ ಗದಗ ನಗರಕ್ಕೆ ಆಗಮನಿಸಿದ ಸಿಎಂ ಮುಂಡರಗಿ ತಾಲೂಕಿನ ಕದಂಪೂರ, ಗದಗ ತಾಲೂಕಿನ ಕುರ್ತಕೋಟಿ, ಹುಲಕೋಟಿಗೆ ಭೇಟಿ ನೀಡಿ, ಬರ ವೀಕ್ಷಣೆ ಮಾಡಿದರು. ಬಸವರಾಜ ರಾಯರೆಡ್ಡಿ, ಮಾಜಿ ಸಚಿವರು, ಶಾಸಕ ಹೆಚ್.ಕೆ. ಪಾಟೀಲ್ ಸೇರಿದಂತೆ ಹಲವು ನಾಯಕರು ಮತ್ತು ಹಿರಿಯ ಅಧಿಕಾರಿಗಳು ಸಿಎಂಗೆ ಸಾಥ್ ನೀಡಿದರು. …

Read More »

ಬರಪೀಡಿತ ಪಟ್ಟಿಗೆ ಜಗಳೂರು ಸೇರಿಸದಿದ್ರೆ ರಾಜೀನಾಮೆ ನೀಡುತ್ತೇನೆ: ಕಾಂಗ್ರೆಸ್‌ ಶಾಸಕ ದೇವೇಂದ್ರಪ್ಪ

ದಾವಣಗೆರೆ: ಜಗಳೂರು ತಾಲೂಕನ್ನು ಸರ್ಕಾರ ಬರ ಪೀಡಿತ ತಾಲೂಕುಗಳ ಅಧಿಕೃತ ಪಟ್ಟಿಗೆ ಸೇರ್ಪಡೆ ಮಾಡದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಕಾಂಗ್ರೆಸ್ ಶಾಸಕ ಬಿ. ದೇವೇಂದ್ರಪ್ಪ  ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಜಗಳೂರಿನಲ್ಲಿ ಮಾತನಾಡಿದ ಅವರು, ನನ್ನ ತಾಲೂಕಿನ ಜನರಿಗೆ ನ್ಯಾಯ ಸಿಗದಿದ್ದರೆ ನಾನು ಶಾಸಕನಾಗಿ ಮುಂದುವರಿಯುವುದರಲ್ಲಿ ಅರ್ಥವಿಲ್ಲ. ಈ ನಿಟ್ಟಿನಲ್ಲಿ ನಾನು ಕಠಿಣ ಹಾಗೂ ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಸಿದ್ಧನಾಗಿದ್ದೇನೆ ಎಂದರು. ಈ ಮೂಲಕ ತಾಲೂಕಿನ ಬರ …

Read More »

ಪೊಲೀಸರ ವಿರುದ್ಧ ಹಲ್ಲೆ ಆರೋಪ ಮಾಡಿದ ರೇಣುಕಾಚಾರ್ಯ

ದಾವಣಗೆರೆ: ಗುಟ್ಕಾ ನಿಷೇಧ  ಹಾಗೂ ಭದ್ರ ಮೇಲ್ದಂಡೆ ನೀರು ಬಿಡುಗಡೆ ಆದೇಶ ವಿರೋಧಿಸಿ ದಾವಣಗೆರೆಯಲ್ಲಿ ಬಿಜೆಪಿ  ರೈತ ಮೋರ್ಚಾದಿಂದ ತೀವ್ರ ಪ್ರತಿಭಟನೆ ನಡೆಯುತ್ತಿದೆ. ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ  ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಈ ವೇಳೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಎಂ.ಪಿ ರೇಣುಕಾಚಾರ್ಯ ಆರೋಪಿಸಿದ್ದಾರೆ. ಅರುಣ ಸರ್ಕಲ್, ವಿದ್ಯಾರ್ಥಿ ಭವನ್, ರೇಣುಕಾ ಮಂದಿರ ಸೇರಿದಂತೆ ಹಲವು ಕಡೆ ಟಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ. ಬಹುತೇಕ ಅಂಗಡಿ …

Read More »

ಟಿಪ್ಪರ್‌ ಲಾರಿಗೆ ಡಿಕ್ಕಿ ಹೊಡೆದ ಬೈಕ್‌; ಸವಾರರಿಬ್ಬರು ಸ್ಥಳದಲ್ಲೇ ಸಾವು

ಗದಗ: ಮಣ್ಣು ತುಂಬಿದ ಟಿಪ್ಪರ್‌ ಲಾರಿಗೆ ಬೈಕ್‌ ಡಿಕ್ಕಿ ಹೊಡೆದಿದ್ದು, ಬೈಕ್‌ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ರೋಣ ತಾಲೂಕಿನ ಇಟಗಿ  ಕ್ರಾಸ್ ಬಳಿ ನಡೆದಿದೆ. 65 ವರ್ಷದ ಶರಣಪ್ಪ ಜಾಲಿಹಾಳ, 59 ವರ್ಷದ ಸುರೇಶ ತಳವಾರ ಮೃತ ದುರ್ದೈವಿಗಳು. ಮೃತರು ರೋಣ ತಾಲೂಕಿನ ಹೊಸಳ್ಳಿ ಗ್ರಾಮದ ನಿವಾಸಿಗಳು. ರೋಣದಿಂದ ಗಜೇಂದ್ರಗಡ ಕಡೆಗೆ ಅಕ್ರಮವಾಗಿ ಮಣ್ಣು ತುಂಬಿಕೊಂಡು ಅತಿವೇಗವಾಗಿ ಟಿಪ್ಪರ್ ಹೊರಟಿತ್ತು. ಇಟಗಿಯಿಂದ ಹೊಸಳ್ಳಿ ಕಡೆಗೆ ಬೈಕ್ ಸವಾರರು …

Read More »

KPSC ಡೀಲಿಂಗ್‌ ಕೇಸ್‌ – 6 ಅಭ್ಯರ್ಥಿಗಳು ಅಪ್ರೂವರ್, 10 ಅಭ್ಯರ್ಥಿಗಳು ತಪ್ಪೊಪ್ಪಿಕೊಳ್ಳಲು ಸಿದ್ಧ!

ಬೆಂಗಳೂರು: ಕೆಪಿಎಸ್‌ಸಿ (ಕರ್ನಾಟಕ ಲೋಕಸೇವಾ ಆಯೋಗ) ಹಗರಣ ಪ್ರಕರಣದಲ್ಲಿ ಸಿಐಡಿ ತನಿಖೆ ಚುರುಕುಗೊಂಡಿದ್ದು, ಪ್ರಮುಖ ಆರೋಪಿಗಳಾದ ಬಸವರಾಜ್ ಕನ್ನಾಳಿ ಹಾಗೂ ಗ್ಯಾನೇಂದ್ರಗೆ ಕಾನೂನು ಸಂಕಷ್ಟ ಮತ್ತಷ್ಟು ಬಿಗಿಯಾಗಿದೆ. ಈ ಬೆನ್ನಲ್ಲೇ ಹಗರಣದಲ್ಲಿ ಭಾಗಿಯಾಗಿದ್ದ 10 ಅಭ್ಯರ್ಥಿಗಳು ಅಪ್ರೂವರ್ ಆಗಲು ಸಿದ್ಧವಿದ್ದು, ಸಿಐಡಿ ಮುಂದೆ ತಮ್ಮ ತಪ್ಪೊಪ್ಪಿಗೆ ಹೇಳಿಕೆ ದಾಖಲಿಸಲು ಸಿದ್ಧರಾಗಿದ್ದಾರೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಅಭ್ಯರ್ಥಿಗಳ ಅಪ್ರೂವರ್ ಹೇಳಿಕೆಯನ್ನ ತನಿಖಾಧಿಕಾರಿಗಳು ದಾಖಲಿಸಿಕೊಂಡಿದ್ದಾರೆ. ಅಕ್ರಮದ ಗುಟ್ಟು ರಟ್ಟು ಮಾಡುತ್ತಿರುವ ಅಭ್ಯರ್ಥಿಗಳಲ್ಲಿ …

Read More »

ತಮಿಳುನಾಡು ಕುರುವೈ ಬೆಳೆಗೆ ಮೆಟ್ಟೂರು ಡ್ಯಾಂನಿಂದ ನೀರು ಬಿಡುಗಡೆ

ಚೆನ್ನೈ: ರಾಜ್ಯದಲ್ಲಿ ಮಳೆಯ ಅನಿಶ್ಚಿತತೆಯ ಮಧ್ಯೆಯೇ ತಮಿಳುನಾಡಿಗೆ  ಕರ್ನಾಟಕ 28 ಟಿಎಂಸಿ ನೀರು ಹರಿದಿದೆ. ನಮಗೆ ನೀರಿಲ್ಲ…ನೀರಿಲ್ಲ ಎನ್ನುತ್ತಿದ್ದ ತಮಿಳುನಾಡು ಈಗ ಕುರುವೈ ಬೆಳೆಗೆ ನೀರು ಬಿಡುಗಡೆ ಮಾಡಿದೆ. ಭತ್ತದ ಬೆಳೆಗೆ ನೆರವಾಗಲು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್  ಅವರು ಮಂಗಳವಾರ ಮೆಟ್ಟೂರು ಅಣೆಕಟ್ಟಿನಿಂದ ನೀರನ್ನು ಬಿಡುಗಡೆ ಮಾಡಿದ್ದಾರೆ. 120 ಅಡಿ ಸಾಮರ್ಥ್ಯದ ಮೆಟ್ಟೂರಿನಲ್ಲಿ ಸದ್ಯ 91 ಅಡಿ ನೀರಿದ್ದು, 45 ದಿನಗಳ ಬಳಿಕ ನೀರು ಬಿಡುಗಡೆ ಮಾಡಿದೆ. …

Read More »

ದುನಿಯಾ ವಿಜಯ್ ಪುತ್ರನಿಂದ ಕಾಲೇಜ್‌ ವಿದ್ಯಾರ್ಥಿ ಕಿಡ್ನ್ಯಾಪ್, ಹಲ್ಲೆ – ದೂರು ದಾಖಲು

ಬೆಂಗಳೂರು: ಸ್ಯಾಂಡಲ್‌ವುಡ್ ಖ್ಯಾತ ನಟ ದುನಿಯಾ ವಿಜಯ್  ಅವರ ಪುತ್ರ ಸಾಮ್ರಾಟ್ ವಿಜಯ್ ವಿರುದ್ಧ ಕಾಲೇಜು ವಿದ್ಯಾರ್ಥಿಯೊಬ್ಬನನ್ನು ಅಪಹರಿಸಿ ಕಾರಿನಲ್ಲೇ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಗಂಭೀರ ಆರೋಪ ಕೇಳಿಬಂದಿದೆ. ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಸಾಮ್ರಾಟ್ ವಿಜಯ್ ಸೋಮವಾರ ಸ್ನೇಹಿತರೊಂದಿಗೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಅದೇ ಕಾಲೇಜಿನ ವಿದ್ಯಾರ್ಥಿ ಮನೀಶ್ ಗೌಡ ಹಾಗೂ ಆತನ ಸ್ನೇಹಿತರು ಮತ್ತೊಂದು ಕಾರಿನಲ್ಲಿ ಸಾಮ್ರಾಟ್ ಕಾರನ್ನು ಓವರ್‌ಟೇಕ್ ಮಾಡಿ ರೇಗಿಸಿದ್ದಾರೆ. ಈ …

Read More »

ನೇಪಾಳ ದುರಂತ| ಶೃಂಗೇರಿ ಶ್ರೀಗಳಿಂದ ತೀವ್ರ ಕಳವಳ – ಸಂತ್ರಸ್ತರ ನೆರವಿಗೆ ಧಾವಿಸಿದ ಶಾರದಾ ಪೀಠ

ಚಿಕ್ಕಮಗಳೂರು: ಭೀಕರ ಮಳೆ ಮತ್ತು ಪ್ರವಾಹದಿಂದಾಗಿ ನೂರಾರು ಮಂದಿ ಮೃತಪಟ್ಟು, ಸಾವಿರಾರು ಜನರು ನಾಪತ್ತೆಯಾಗಿ ಕಂಗಾಲಾಗಿರುವ ನೇಪಾಳದ ದುರಂತ  ಸ್ಥಿತಿಗೆ ಶೃಂಗೇರಿ ಶಾರದಾ ಪೀಠದ ಕಿರಿಯ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಸಂಕಷ್ಟದಲ್ಲಿರುವ ನೇಪಾಳದ ಸಂತ್ರಸ್ತ ಜನತೆಗೆ ಶೃಂಗೇರಿ ಮಠವುಸಂಪೂರ್ಣ ನೆರವು ನೀಡಲು ಸನ್ನದ್ಧವಾಗಿದೆ. ಪ್ರಕೃತಿಯ ಮುನಿಸಿಗೆ ತುತ್ತಾಗಿರುವ ನೇಪಾಳದ ಜನತೆಗೆ ಅಗತ್ಯ ಆಹಾರ, ದಿನಬಳಕೆ ವಸ್ತುಗಳು ಹಾಗೂ ಅಗತ್ಯ ನೆರವು-ಪರಿಹಾರ ಕಾರ್ಯಗಳನ್ನು …

Read More »

ಸಸಿ ನೆಡುವ ಶಿಕ್ಷೆ ನೀಡಿದ ಚಿಕ್ಕೋಡಿ ನ್ಯಾಯಾಲಯ

ಚಿಕ್ಕೋಡಿ: ತಾಲೂಕಿನ ಯಕ್ಸಂಬಾ ಪಟ್ಟಣದ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಸೇವಿಸಿ ಅವಾಚ್ಚ ಶಬ್ದಗಳಿಂದ ಸಾರ್ವಜನಿಕರನ್ನು ನಿಂದಿಸಿದ ಅನಿಲ ಪೂಜಾರಿ ಚಿಕ್ಕೋಡಿ ಪ್ರಥಮ ಹೆಚ್ಚುವರಿ ಸಿವಿಲ್ ಹಾಗೂ ಜೆಎಂಎಫ್ ಸಿ ನ್ಯಾಯಾಲಯ ಸಸಿ ನೆಡುವ ವಿನೂತನ ಶಿಕ್ಷೆ ವಿಧಿಸಿ ಸೋಮವಾರ ತೀರ್ಪು ನೀಡಿದೆ. ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಹಾಜರಾಗಿ, ತಾನು ಸಾರ್ವಜನಿಕ ಸ್ಥಳದಲ್ಲಿ ಏರು ಧ್ವನಿಯಲ್ಲಿ ಮಾತನಾಡಿ ಸಾರ್ವಜನಿಕರಿಗೆ ತೊಂದರೆ ನೀಡಿದ ಒಪ್ಪಿಕೊಂಡಿದ್ದ ಅನಿಲ ಪೂಜಾರಿಗೆ 1 ಸಾವಿರ ರೂ. ದಂಡದ …

Read More »