ಆನೇಕಲ್: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮಿ ಭೇಟಿ ಮಾಡಿ, ಆರೋಗ್ಯ ವಿಚಾರಿಸಿದ್ದಾರೆ.
ಈ ವೇಳೆ ದರ್ಶನ್ ಆಪ್ತ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮತ್ತು ನಟ ಝೈದ್ ಖಾನ್ ಕೂಡ ವಿಜಯಲಕ್ಷಿö್ಮ ಜೊತೆಗೆ ಜೈಲಿಗೆ ಆಗಮಿಸಿದ್ದು, ಹಣ್ಣು-ಹಂಪಲು ತೆಗೆದುಕೊಂಡು ಬಂದು ದರ್ಶನ್ ಆರೋಗ್ಯ ವಿಚಾರಿಸಿದ್ದಾರೆ. ಭೇಟಿ ವೇಳೆ ದರ್ಶನ್ ನಟ ಝೈದ್ ಖಾನ್ಗೆ ಮುಂದಿನ ಚಿತ್ರ ಬಗ್ಗೆ ಕೇಳಿದ್ದು, ಶಾಸಕ ದರ್ಶನ್ ಪುಟ್ಟಣ್ಣಯ್ಯ ದಚ್ಚುಗೆ ಆತ್ಮಸ್ಥೈರ್ಯ ತುಂಬಿದ್ದಾರೆ. ಕೆಲ ಕಾಲ ಚರ್ಚೆ ನಡೆಸಿ, ಬಳಿಕ ವಾಪಸ್ ಆಗಿದ್ದಾರೆ ಎನ್ನಲಾಗಿದೆ.
ಜೈಲಿನಿಂದ ಹೊರಬಂದ ಬಳಿಕ ಪತ್ನಿ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ಝೈದ್ ಖಾನ್ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ವಾಪಸ್ ಆಗಿದ್ದಾರೆ.
Laxmi News 24×7