Breaking News

ಐಸ್‌ಕ್ರೀಮ್‌ ಮಾರುಕಟ್ಟೆಗೆ ರಿಲಯನ್ಸ್‌ ಎಂಟ್ರಿ – 10 ರೂ.ಗೆ ಬಾಂಬೆ ಕ್ರೀಮರಿ

Spread the love

ಬೆಂಗಳೂರು: ರಿಲಯನ್ಸ್‌ ಇಂಡಸ್ಟ್ರೀಸ್‌ನ  ಎಫ್‌ಎಂಸಿಜಿ ವಿಭಾಗದ ಸಂಸ್ಥೆಯಾಗಿರುವ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ (ಆರ್‌ಸಿಪಿಎಲ್), ಇದೀಗ ಅಧಿಕೃತವಾಗಿ ಭಾರತದ ಐಸ್ ಕ್ರೀಮ್ ಮಾರುಕಟ್ಟೆಯನ್ನು ಪ್ರವೇಶಿಸಿದೆ. ರಿಲಯನ್ಸ್ ತನ್ನ ಹೊಸ ಐಸ್‌ಕ್ರೀಂ ಬ್ರ್ಯಾಂಡ್ ಬಾಂಬೆ ಕ್ರೀಮರಿಯನ್ನು ಮಾರುಕಟ್ಟೆಗೆ ಇಂದು ಬಿಡುಗಡೆಗೊಳಿಸಿದೆ.

ವಿಶ್ವದರ್ಜೆಯ ಅತ್ಯುತ್ತಮ ಗುಣಮಟ್ಟ, ಎಲ್ಲರಿಗೂ ಕೈಗೆಟುಕುವ ಬೆಲೆ ಎಂಬ ಪ್ರಮುಖ ನೀತಿಯ ಅಡಿಯಲ್ಲಿ ಈ ಬ್ರ್ಯಾಂಡ್ ಅನ್ನು ರೂಪಿಸಲಾಗಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಕೃತಕ ಉತ್ಪನ್ನಗಳ ನಡುವೆ, ಸಂಪೂರ್ಣವಾಗಿ ನೈಜ ಹಾಲಿನ ಕೆನೆಯಿಂದ ತಯಾರಾದ ಅಚ್ಚುಮೆಚ್ಚಿನ ಐಸ್ ಕ್ರೀಮ್ ಅನ್ನು ಗ್ರಾಹಕರಿಗೆ ತಲುಪಿಸುವುದು ಕಂಪನಿಯ ಮುಖ್ಯ ಗುರಿಯಾಗಿದೆ. ಯಾವುದೇ ರಾಜಿ ಮಾಡಿಕೊಳ್ಳದೆ ಅತ್ಯುತ್ತಮ ಡೇರಿ ಪದಾರ್ಥಗಳನ್ನು ಬಳಸಿ ತಯಾರಿಸಿರುವ ಇದು, ಭಾರತದ ಮೊದಲ ಕೈಗೆಟುಕುವ ಪ್ರೀಮಿಯಂ ಡೈರಿ ಬ್ರ್ಯಾಂಡ್ ಆಗಿ ಹೊರಹೊಮ್ಮಲಿದೆ ಎಂದು ಸಂಸ್ಥೆ ತಿಳಿಸಿದೆ.

ಈ ಬಗ್ಗೆ ಮಾತನಾಡಿದ ಆರ್‌ಸಿಪಿಎಲ್ ನ ನಿರ್ದೇಶಕ ಟಿ. ಕೃಷ್ಣಕುಮಾರ್, ” ಡೇರಿ ಉತ್ಪನ್ನ ತಯಾರಿಕೆಯಲ್ಲಿ ಯಾವುದೇ ಶಾರ್ಟ್‌ಕಟ್‌ಗಳಿರಬಾರದು ಎಂಬ ದೃಢವಾದ ಯೋಚನೆಯಿಂದ ನಾವು ಬಾಂಬೆ ಕ್ರೀಮರಿಯನ್ನು ಆರಂಭಿಸಿದ್ದೇವೆ. ಆರ್‌ಸಿಪಿಎಲ್ ಕೇವಲ ಮಾರುಕಟ್ಟೆಗೆ ಪ್ರವೇಶಿಸುತ್ತಿಲ್ಲ, ಬದಲಿಗೆ ಈ ವಿಭಾಗದಲ್ಲಿ ದೀರ್ಘಕಾಲಿಕ ಬದ್ಧತೆಯೊಂದಿಗೆ ಮುನ್ನಡೆಯುತ್ತಿದೆ. ಪ್ರತಿ ಭಾರತೀಯ ಕುಟುಂಬಕ್ಕೂ ಕೈಗೆಟುಕುವ ಬೆಲೆಯಲ್ಲಿ ಅಸಲಿ ಐಸ್ ಕ್ರೀಮ್‌ನ‌ ಸವಿ ರುಚಿಯನ್ನು ಇದು ಖಾತರಿಪಡಿಸುತ್ತದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಾಂಬೆ ಕ್ರೀಮರಿ ಬ್ರ್ಯಾಂಡ್‌ ಅಡಿಯಲ್ಲಿ ಗ್ರಾಹಕರ ಮೆಚ್ಚಿನ ಐಸ್‌ಕ್ರೀಮ್ ಕೋನ್‌ಗಳು, ಕಪ್‌ಗಳು, ಟಬ್‌ಗಳು, ಬಾರ್‌ಗಳು ಮತ್ತು ಸ್ಟಿಕ್‌ಗಳಂತಹ ವಿವಿಧ ಆಕರ್ಷಕ ಉತ್ಪನ್ನಗಳು ಲಭ್ಯವಿರಲಿದೆ. ವಿಶೇಷವೆಂದರೆ, ಕೇವಲ ರೂ. 10 ರಿಂದ ಇದರ ಬೆಲೆಗಳು ಪ್ರಾರಂಭವಾಗುವುದರಿಂದ ಎಲ್ಲಾ ವರ್ಗದ ಜನರಿಗೂ ಇದು ಸುಲಭವಾಗಿ ಲಭ್ಯವಾಗಲಿದೆ.

ಪ್ರಸ್ತುತ ಮೊದಲ ಹಂತವಾಗಿ ಪಶ್ಚಿಮ ಭಾರತದಲ್ಲಿ ತಕ್ಷಣವೇ ಲಭ್ಯವಾಗುವಂತೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ದೇಶಾದ್ಯಂತ ತನ್ನ ವ್ಯಾಪಾರ ಜಾಲವನ್ನು ವಿಸ್ತರಿಸಲು ರಿಲಯನ್ಸ್ ಸಜ್ಜಾಗಿದೆ.


Spread the love

About Laxminews 24x7

Check Also

ದರ್ಶನ್‌ಗೆ ಮತ್ತೆ ಢವ ಢವ – ಇಂದು ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ ದಾಖಲಾಗುತ್ತಾ?

Spread the loveಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ  ಆರೋಪಿ ದರ್ಶನ್‌ಗೆ ಮತ್ತೆ ಢವ ಢವ ಶುರುವಾಗಿದೆ. ಇಂದು ಪ್ರದೋಷ್‌ನಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ