Breaking News

Monthly Archives: ಏಪ್ರಿಲ್ 2026

ವಿಜ್ಞಾನಕ್ಕೂ ಸಿಗದ ಸವಾಲು: ಅಥಣಿ ಜಾತ್ರೆಯಲ್ಲಿ ಮಾತ್ರ ಪ್ರತ್ಯಕ್ಷವಾಗುವ ಪವಾಡದ ನೀರು!

ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಭಕ್ತಿ ಮತ್ತು ವಿಸ್ಮಯದ ಅಪರೂಪದ ಸಂಗಮವೊಂದು ಜರುಗುತ್ತಿದೆ. ವರ್ಷವಿಡೀ ಹನಿ ನೀರಿಲ್ಲದೆ ಬತ್ತಿ ಹೋಗುವ ಬೋರ್‌ವೆಲ್, ಜಾತ್ರೆಯ ಆ ದಿನಗಳಲ್ಲಿ ಮಾತ್ರ ಲಕ್ಷಾಂತರ ಜನರ ದಾಹ ತಣಿಸುತ್ತಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಏನಿದು ಪವಾಡ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್. ಶಿವಯೋಗಿಗಳ ನಾಡು ಎಂದೇ ಪ್ರಸಿದ್ಧಿಯಾದ ಅಥಣಿಯಲ್ಲಿ ಈಗ ಮುರುಘೇಂದ್ರ ಶಿವಯೋಗಿಗಳ ಪವಾಡವೊಂದು ಭಕ್ತರ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಇಲ್ಲಿನ ದೇವಸ್ಥಾನದ ಆವರಣದಲ್ಲಿರುವ ಹಳೆಯ ಕೊಳವೆ ಬಾವಿಯೊಂದು …

Read More »

ಬೇನಾಡಿ-ಅಪ್ಪಾಚಿವಾಡಿ ಗ್ರಾಮಗಳ ಅವ್ಯವಸ್ಥೆ; 20 ವರ್ಷವಾದರೂ ಆರಂಭವಾಗದ ಸೇತುವೆ ಕೆಲಸ ಡಿಸಿ ಆದೇಶ ಪಾಲಿಸಿದ್ದರೇ, ಗ್ರಾ.ಪಂ.ಗೆ ಬೀಗ ಜಡಿಯುವ ಎಚ್ಚರಿಕೆ ನೀಡಿದ ರಾಜ್ಯ ರೈತ ಸಂಘ

ನಿಪ್ಪಾಣಿ ತಾಲೂಕಿನ ಬೇನಾಡಿ ಗ್ರಾಮದ ಅವ್ಯವಸ್ಥೆ ಹಾಗೂ ಕಾಳಮ್ಮಾವಾಡಿ ಕಾಲುವೆಯ ಸೇತುವೆ ನಿರ್ಮಾಣದಲ್ಲಿ ಆಗುತ್ತಿರುವ ವಿಳಂಬ ಖಂಡಿಸಿ ಇಂದು ಜಿಲ್ಲಾಧಿಕಾರಿಗಳಿಗೆ ರಾಜ್ಯ ಸಂಘದವ ವತಿಯಿಂದ ಮನವಿಯನ್ನು ಸಲ್ಲಿಸಲಾಯಿತು. ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ಕಚೇರಿಗಳಿಗೆ ಬೀಗ ಹಾಕುವುದಾಗಿ ರೈತ ನಾಯಕರು ಗುಡುಗಿದ್ದಾರೆ. ಇಂದು ಬೆಳಗಾವಿಗೆ ಆಗಮಿಸಿದ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಈ ಕುರಿತಾದ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು. ಇದಕ್ಕೆ ಜಿಲ್ಲಾಧಿಕಾರಿಗಳು ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಿದರು. ನಿಪ್ಪಾಣಿ ತಾಲೂಕಿನ ಬೇನಾಡಿ ಗ್ರಾಮದಲ್ಲಿ ಚರಂಡಿ, …

Read More »

ಬೇಸಿಗೆ ಹಿನ್ನೆಲೆ, ಏರುತ್ತಿದೆ ತಾಪಮಾನ; ಈಜುಕೊಳದತ್ತ ಮುಖ ಮಾಡಿದ ವಿಜಯಪುರದ ಜನರು…

ಈ ಜಿಲ್ಲೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಬಿಸಿಲಿನ ತಾಪ ತಣಿಸಿಕೊಳ್ಳಲು ಜನರು ಈಜುಕೊಳದತ್ತ ಮುಖ ಮಾಡಿದ್ದಾರೆ. ಸರ್ಕಾರದಿಂದ ನಿರ್ಮಿಸಿದ ಈ ಈಜುಕೊಳದಲ್ಲಿ ಪುಟ್ಟ ಮಕ್ಕಳು ಸೇರಿದಂತೆ ಯುವಕ ಯುವತಿಯರು ಸಹಿತ ಹೆಚ್ಚಿನ ಸಂಖ್ಯೆಯಲ್ಲಿ ಈಜ ಕೊಳದತ್ತ ಆಗನಿಸುತ್ತಿದ್ದಾರೆ. ಈ ಕುರಿತಾದ ಒಂದು ಕಂಪ್ಲೀಟ್ ವರದಿ ಇಲ್ಲಿದೆ ನೋಡಿ… ಹೌದು ವಿಜಯಪುರ ನಗರದ ಕನಕದಾಸ ಬಡಾವಣೆಯಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಿಂದ ಹೈಟೆಕ್ ಈಜುಕೊಳ ನಿರ್ಮಿಸಿದ್ದು, ಫೆಬ್ರವರಿ ತಿಂಗಳಿಂದಲೇ ಬಿಸಿಲು …

Read More »

ಬೆಳಗಾವಿಯಲ್ಲಿ ಮಹಾಪಾಲಿಕೆ ಗರ್ಜನೆ: ‘ಆಪರೇಷನ್ ಬೀದಿ ನಾಯಿ’ ಆರಂಭ, ಬೆಚ್ಚಿಬಿದ್ದ ಶ್ವಾನಗಳು!

ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಲು ಮಹಾನಗರ ಪಾಲಿಕೆ ಕಠಿಣ ಕ್ರಮಕ್ಕೆ ಮುಂದಾಗಿದೆ. ನಗರದ ವಿವಿಧ ಭಾಗಗಳಲ್ಲಿ ನಾಗರಿಕರ ಆತಂಕಕ್ಕೆ ಕಾರಣವಾಗಿದ್ದ ಬೀದಿ ನಾಯಿಗಳ ಸಮಸ್ಯೆಯನ್ನು ನಿಯಂತ್ರಿಸಲು ಶನಿವಾರ “ಆಪರೇಷನ್ ಬೀದಿ ನಾಯಿ” ಹೆಸರಿನಲ್ಲಿ ವಿಶೇಷ ಕಾರ್ಯಾಚರಣೆ ಆರಂಭಿಸಲಾಗಿದೆ. ಈ ಕಾರ್ಯಾಚರಣೆಯ ಅಂಗವಾಗಿ ನಗರದ ಶೆಟ್ಟಿಗಲ್ಲಿ ಪ್ರದೇಶದಲ್ಲಿ ಪಾಲಿಕೆ ಸಿಬ್ಬಂದಿ ಹಾಗೂ ಸಂಬಂಧಿತ ಇಲಾಖೆ ಅಧಿಕಾರಿಗಳು ಸಂಯುಕ್ತವಾಗಿ ಕಾರ್ಯಾಚರಣೆ ನಡೆಸಿ ಅಪಾಯಕಾರಿ ಹಾಗೂ ಹಿಂಸಾತ್ಮಕವಾಗಿ …

Read More »

ನಾನೂ ಸಿಎಂ ಸ್ಥಾನದ ಆಕಾಂಕ್ಷಿ; ಸಚಿವ ಸತೀಶ್ ಜಾರಕಿಹೊಳಿ

ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿ ಬದಲಾವಣೆಯ ಚರ್ಚೆ ಮುನ್ನೆಲೆಗೆ ಬಂದಿದೆ. ಶಿವಮೊಗ್ಗದಲ್ಲಿ ಮಾತನಾಡಿರುವ ಸಚಿವ ಸತೀಶ್ ಜಾರಕಿಹೊಳಿ, ತಾವೂ ಕೂಡ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಹೇಳುವ ಮೂಲಕ ಹೊಸ ಸಂಚಲನ ಮೂಡಿಸಿದ್ದಾರೆ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಸ್ಥಾನದ ಮೇಲೆ ತಮಗೂ ಆಸೆ ಇದೆ ಎಂದು ಬಹಿರಂಗವಾಗಿ ಘೋಷಿಸಿದ್ದಾರೆ. ರಾಜ್ಯದಲ್ಲಿ ಸಿಎಂ ಸ್ಥಾನಕ್ಕಾಗಿ ನಾನು ಕೂಡ ಕಾಯುತ್ತಿದ್ದೇನೆ ಎಂದು ಹೇಳಿದ ಅವರು, …

Read More »

ಯತ್ನಾಳ್ ಒಬ್ಬ ಹುಚ್ಚ: ಶಾಸಕ ಆಸೀಫ್ ಸೇಠ್ ಆಕ್ರೋಶ

ಮುಸ್ಲಿಂ ಮತ ಬಿಜೆಪಿಗೆ ಬೇಡ ಎನ್ನುವ ಯತ್ನಾಳ್ ಒಬ್ಬ ಹುಚ್ಚ ಎಂದು ಬೆಳಗಾವಿ ಉತ್ತರ ಮತ ಕ್ಷೇತ್ರದ ಕಾಂಗ್ರೆಸ್ ಶಾಸಕ ಆಸೀಫ್ ಸೇಠ್ ಅವರು ವಾಗ್ದಾಳಿ ನಡೆಸಿದ್ದಾರೆ. ಬೆಳಗಾವಿ ನಗರದ ತಮ್ಮ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ನಮೆಗೆ ಮುಸ್ಲಿಂರ ಮತಗಳು ಬೇಡ ಎಂದಿದ್ದಾರೆ. ಹಾಗಾಗಿ ಯತ್ನಾಳ ಒಬ್ಬ ಹುಚ್ಚ. ಅವನ ಮಾತು ಏನ್ ಕೇಳತ್ತಿರಾ. ಇವರ ತಪ್ಪು ಕಲ್ಪನೆಯಿಂದ ದೇಶ ಹಾಳಾಗುತ್ತಿದೆ. ಇವರು ಬೇಡ, ಅವರು ಬೇಡ …

Read More »

ಕುಟುಂಬ ರಾಜಕಾರಣ ತಿರಸ್ಕರಿಸೋಣ ಚರಂತಿಮಠ ಅವರನ್ನು ಗೆಲ್ಲಿಸೋಣ

ಬಾಗಲಕೋಟ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯ ಬೆನಕಟ್ಟಿ ಗ್ರಾಮದಲ್ಲಿ ಇಂದು ನಮ್ಮ ಅಭ್ಯರ್ಥಿ ಡಾ.ವೀರಣ್ಣ ಚರಂತಿಮಠ ಅವರ ಪರವಾಗಿ ಮತಯಾಚನೆ ಮಾಡಿ, ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದೆ. ಇದಕ್ಕೂ ಮೊದಲು ಅಭಿಮಾನಿಗಳು ಹೂವಿನ ಮಳೆ ಸುರಿಸಿ ಹಾಗೂ ಮಹಿಳೆಯರು ಆರತಿ ಬೆಳಗಿ ಆತ್ಮೀಯವಾಗಿ ಗ್ರಾಮಕ್ಕೆ ಸ್ವಾಗತಿಸಿದರು. ಇದೇ ವೇಳೆ ನಡೆದ ಬೈಕ್ ರ‍್ಯಾಲಿಯಲ್ಲಿಯೂ ಭಾಗವಹಿಸಿದೆ. ಶಾಸಕರಾದ ಶ್ರೀ ಸಿದ್ದು ಸವದಿ ಹಾಗೂ ಮಾಜಿ ಶಾಸಕರಾದ ದೊಡ್ಡನಗೌಡರ ಪಾಟೀಲ ಅವರು ಸೇರಿದಂತೆ ಮುಖಂಡರು, ಹಿತೈಷಿಗಳು, …

Read More »

ಸಿನಿಮಾ ಮಾದರಿಯಲ್ಲಿ ಲಾರಿ ಕ್ಲೀನರ್ ಸ್ಕೆಚ್‌ಗೆ ಖದೀಮರು ಫಿದಾ..!

ಹಾವೇರಿ: ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಬಳಿ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಇತ್ತೀಚೆಗೆ ನಡೆದಿದ್ದ ಸಿನೆಮಾ ಮಾದರಿಯ ದರೋಡೆ ಪ್ರಕರಣವನ್ನು ಭೇದಿಸುವಲ್ಲಿ ಹಾವೇರಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಬತ್ತು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ 40 ಲಕ್ಷ ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಮಹೀಂದ್ರಾ ಥಾರ್ ಮತ್ತು ಸ್ವಿಫ್ಟ್ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ​ಶುಕ್ರವಾರ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) …

Read More »

ಅತ್ತಿಗೆ ಮೇಲೆ ಕಣ್ಣಿಟ್ಟಿದ್ದ ಸಿಟ್ಟು..! ತಮ್ಮನ ಕೊಲೆಗೆ ಅಪ್ಪ ಸಾಥ್!

ತುಮಕೂರು ನಗರದ ಬನಶಂಕರಿ ಬಡಾವಣೆಯಲ್ಲಿ ರಕ್ತಸಂಬಂಧಗಳ ನಡುವಿನ ಕಲಹವೊಂದು ಭೀಕರ ಕೊ*ಲೆಯಲ್ಲಿ ಅಂತ್ಯಗೊಂಡಿದೆ. ತನ್ನ ಒಡಹುಟ್ಟಿದ ತಮ್ಮನನ್ನೇ ಅಣ್ಣ ಚಾಕುವಿನಿಂದ ಇರಿದು ಕೊಂ*ದಿದ್ದಾನೆ. ಇದರಲ್ಲಿ ಕುತೂಹಲದ ವಿಚಾರವೆಂದರೆ, ಮಗನ ಈ ಕ್ರೂರ ಕೃತ್ಯವನ್ನು ಮುಚ್ಚಿಹಾಕಲು ತಂದೆಯೂ ಸಾಥ್ ನೀಡಿದ್ದು, ವೈದ್ಯರ ಹೇಳಿಕೆ ಮತ್ತು ಪೊಲೀಸರ ತನಿಖೆಯಲ್ಲಿ ಅಸಲಿ ಕೊ*ಲೆ ಪ್ರಕರಣ ಬಯಲಿಗೆ ಬಂದಿದೆ. ಬನಶಂಕರಿ ನಿವಾಸಿ ಜಾನ್ ಪಾಲ್ ಎಂಬುವವರಿಗೆ ನವೀನ್ ಹಾಗೂ ಸ್ಟಾಲಿನ್ (29) ಎಂಬ ಇಬ್ಬರು ಮಕ್ಕಳಿದ್ದಾರೆ. …

Read More »

ಕಾಂಗ್ರೆಸ್ ಪಕ್ಷ ಬಡವರ ,ಕೂಲಿ ಕಾರ್ಮಿಕರ, ದೀನ‌ದಲಿತರ ,ಹಿಂದುಳಿದವರ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ನೀಡಿದೆ ಈ ಭಾಗದ ಜನರು ಮತ್ತೊಮ್ಮೆ ಉಮೇಶ್ ಮೇಟಿ ರವರಿಗೆ ಆಶೀರ್ವಾದ ಮಾಡಬೇಕು ಆಹಾರ ಸಚಿವ:- ಮುನಿಯಪ್ಪ‌

ಬಾಗಲಕೋಟೆ: ವಿಧಾನಸಭಾ ಕ್ಷೇತ್ರದ ಶಿರೂರು ಚನ್ನಯ್ಯನಗರದಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಆಹಾರ ಸಚಿವರಾದ ಕೆಹೆಚ್. ಮುನಿಯಪ್ಪ‌ ರವರು ಭಾಗವಹಿಸಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉಮೇಶ್ ಮೇಟಿ ಅವರಿಗೆ ಬಹುಮತದ ಗೆಲುವು ದೊರಕಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು. ಕಾಂಗ್ರೆಸ್ ಪಕ್ಷ ಬಡವರ ಬದುಕಿಗೆ ಭದ್ರತೆ ನೀಡುವ ನಿಟ್ಟಿನಲ್ಲಿ ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಹೇಳಿದರು. ಬಡವರಿಗೆ ಅಕ್ಕಿ ದೊರೆಯಬೇಕು, ಅವರು ನೆಮ್ಮದಿಯಾಗಿ ಊಟ ಮಾಡಬೇಕು ಮತ್ತು ಗೌರವಯುತ …

Read More »