Breaking News
Home / 2021 / ಆಗಷ್ಟ್ (page 81)

Monthly Archives: ಆಗಷ್ಟ್ 2021

ನನಗೆ ಕಾಲ್ ಬಂದಿಲ್ಲ‌ ಸಚಿವ ಸ್ಥಾನ ಸಿಗದಿದ್ದರೆ ಬಂಡಾಯ : ಆನಂದ ಮಾಮನಿ

ಬೆಳಗಾವಿ- ಇಂದು ಮುಖ್ಯಮಂತ್ರಿ ಬೊಮ್ಮಾಯಿ ಅವರ ಕ್ಯಾಬಿನೆಟ್ ರಚನೆ ಆಗಲಿದೆ.ನನಗೆ ಕಾಲ್ ಬಂದಿಲ್ಲ‌.ಈ ಕುರಿತು ಬಿ ಎಸ್ ವೈ ಜೊತೆ ಮಾತನಾಡುವೆ,ಸಚಿವ ಸ್ಥಾನ ಸಿಗದಿದ್ದರೆ ಡೆಪ್ಯುಟಿ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ಕೊಡುವೆ ಎಂದು ಬೆಳಗಾವಿ ಜಿಲ್ಲೆಯ ಸವದತ್ತಿ ಶಾಸಕ ಆನಂದ ಮಾಮನಿ ಹೇಳಿದ್ದಾರೆ. ಹೊಸ ಮುಖ್ಯಮಂತ್ರಿಯ ಹೊಸ ಕ್ಯಾಬಿನೆಟ್ ಗೆ ಬೆಳಗಾವಿ ಜಿಲ್ಲೆಯಿಂದಲೇ ಬಂಡಾಯ ಶುರುವಾಗಿದೆ.ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸಚಿವರ ಪಟ್ಟಿಯೊಂದಿಗೆ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ್ದು ಪತ್ರಿಕಾಗೋಷ್ಢಿ ನಡೆಸಿ,ಇಂದು …

Read More »

ಓಲಂಪಿಕ್ ನ ಪುರುಷರ ಹೈಜಂಪ್ ಫೈನಲ್ಲಿನ ದೃಶ್ಯ.

ಈ ದೃಶ್ಯ ಟೋಕಿಯೊ ೨೦೨೦ರ ಓಲಂಪಿಕ್ ನ ಪುರುಷರ ಹೈಜಂಪ್ ಫೈನಲ್ಲಿನ ದೃಶ್ಯ. ಪುರುಷರ ಹೈಜಂಪ್ ಫೈನಲ್ಲಿನಲ್ಲಿ ಇಟಲಿಯ ಜಿಯಾನ್ ಮಾರ್ಕೊ ತಂಬರಿ ಸ್ಪರ್ಧೆಯು ಕತಾರ್ ದೇಶದ ಮುತಾಜ್ ಈಸಾ ಬಾರ್ಶಿಮ್ ಜೊತೆಗಿತ್ತು. ಇಬ್ಬರು ಸ್ಪರ್ಧಿಗಳೂ 2.37 ಮೀಟರ್ ಎತ್ತರ ಹಾರಿದ್ದರಿಂದ ರಿಸಲ್ಟ್ ಸಮ ಬಂದಿತು. ನಂತರದಲ್ಲಿ ಓಲಂಪಿಕ್ ಅಧಿಕಾರಿಗಳು ಇಬ್ಬರೂ ಸ್ಪರ್ಧಿಗಳಿಗೆ ತಲಾ ಮೂರು ಅವಕಾಶಗಳನ್ನು ನೀಡಿದರು. ಮೂರು ಬಾರಿಯೂ ಇವರಿಬ್ಬರು 2.37 ಮೀ.ಗಿಂತ ಹೆಚ್ಚಿನ ಎತ್ತರ ಹಾರಲಿಲ್ಲ. …

Read More »

ದೇಶದಲ್ಲಿ ಮತ್ತೆ ಕೊರೊನಾ ಭೀತಿ: ಆರ್-ನಾಟ್ ವ್ಯಾಲ್ಯೂ ಹೆಚ್ಚಿದರೆ ಏನಾಗುತ್ತೆ ಗೊತ್ತಾ?

ಇನ್ನು ಅದೆಷ್ಟು ಸಂಕಟ ನೀಡುತ್ತೋ ಈ ವೈರಸ್ ಗೊತ್ತಿಲ್ಲ. ಇದೆ ವರ್ಷ 2 ತಿಂಗಳ ಹಿಂದೆ, ದೇಶ ತಲ್ಲಣಿಸಿ ಹೋಗಿತ್ತು. ಕಾರಣ 2ನೇ ಅಲೆ. ಅದು ಮೊದಲ ಅಲೆ ರೀತಿ ಹೀಗೆ ಬಂದು ಹಾಗೆ ಹೋಗ್ಲೆ ಇಲ್ಲ. ಬಂದು ತನ್ನ ಬತ್ತಳಿಕೆಗೆ ಅದೆಷ್ಟೋ ಜನರನ್ನು ತನ್ನ ಜೊತೆ ಕರೆದೊಯ್ತು. ಈಗ ಮತ್ತೆ ಇದೆ ವೈರಸ್ ಹೊಸ ಸದ್ದು ಮಾಡ್ತಾ ಇದೆ. ಒಬ್ಬನಿಂದ ಎಷ್ಟು ಜನರಿಗೆ ಈ ವೈರಸ್ ಹರಡುತ್ತೆ ಅನ್ನೋ …

Read More »

ಗಸ್ತು ತಿರುಗುತ್ತಿದ್ದ ಸೈನಿಕರ ಮೇಲೆ ಉಗ್ರರ ದಾಳಿ; ಕನ್ನಡಿಗ ಸೇರಿ ಇಬ್ಬರು ಯೋಧರು ಹುತಾತ್ಮ

ಕಲಬುರಗಿ: ಗಸ್ತು ತಿರುಗುತ್ತಿದ್ದ ವೇಳೆ ಉಗ್ರರು ದಾಳಿ ನಡೆಸಿದ ಪರಿಣಾಮ ರಾಜ್ಯದ ಓರ್ವ ಸೈನಿಕ ಸೇರಿ ಇಬ್ಬರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ತ್ರಿಪುರದ ಧಲೈ ಜಿಲ್ಲೆಯಲ್ಲಿ ಉಗ್ರರು ನಡೆಸಿದ ದಾಳಿಗೆ ನಮ್ಮ ಸೈನಿಕರಿಬ್ಬರು ಸಾವನ್ನಪ್ಪಿದ್ದಾರೆ. ಕಲಬುರಗಿ ಜಿಲ್ಲೆ ಆಳಂದ ತಾಲ್ಲೂಕಿನ ಚಿಂಚನಸೂರ ಗ್ರಾಮದ ಯೋಧ ರಾಜಕುಮಾರ ಎಂ ಮಾವಿನ್ ಹುತಾತ್ಮ ಯೋಧ. ಯೋಧ ಸಾವನ್ನಪ್ಪಿರುವ ಮಾಹಿತಿ ತಿಳಿಯುತ್ತಿದ್ದಂತೆ ಚಿಂಚನಸೂರು ಗ್ರಾಮ ನೀರವ ಮೌನಕ್ಕೆ ಜಾರಿದೆ. ಇನ್ನು ಕುಟುಂಬಸ್ಥರ ಆಕ್ರಂದನ ಮುಗಿಲು …

Read More »

ಡಾ||ವಿಜಯಸಂಕೇಶ್ವರ ಅವರ ಸಾಧನೆ ಆಧರಿಸಿದ ಈ ಚಿತ್ರಕ್ಕೆ “ವಿಜಯಾನಂದ” ಎಂಬ ಶೀರ್ಷಿಕೆ.

ಹುಬ್ಬಳ್ಳಿ – ಆದರ್ಶ ಉದ್ಯಮಿ, ಪದ್ಮಶ್ರೀ ಪ್ರಶಸ್ತಿ ವಿಜೇತ ಡಾ. ವಿಜಯ ಸಂಕೇಶ್ವರ ಅವರ ಜಾವನ ಮತ್ತು ಸಾಧನೆ ಕುರಿತು ಚಲನಚಿತ್ರವೊಂದು ಸಿದ್ಧವಾಗುತ್ತಿದೆ. ಸಾರಿಗೆ ಕ್ಷೇತ್ರ, ಪತ್ರಿಕೋದ್ಯಮ, ಮಾಧ್ಯಮ ಹಾಗು ಹಲವಾರು ವಿಭಾಗಗಳಲ್ಲಿ ಪರಿಣತಿ ಹೊಂದಿರುವ ಪ್ರತಿಷ್ಠಿತ ವಿ ಆರ್ ಎಲ್ ಸಮೂಹ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಹಾಗು ಪ್ರೊಮೋಟರ್ ಆದ ಡಾ. ವಿಜಯ ಸಂಕೇಶ್ವರರ ಪುತ್ರರಾದ ಆನಂದ ಸಂಕೇಶ್ವರ ಅವರು ಇದೀಗ  ವಿ ಆರ್ ಎಲ್ ಮೀಡಿಯಾ ಸಂಸ್ಥೆಯ …

Read More »

ಬಿ.ಎಸ್.ಯಡಿಯೂರಪ್ಪ ಅವಧಿಯಲ್ಲಿ ನೇಮಕಗೊಂಡಿದ್ದ 10 ಹುದ್ದೆಗಳನ್ನು ರದ್ದುಪಡಿಸಲಾಗಿದೆ.

ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಅವಧಿಯಲ್ಲಿ ನೇಮಕಗೊಂಡಿದ್ದ 10 ಹುದ್ದೆಗಳನ್ನು ರದ್ದುಪಡಿಸಲಾಗಿದೆ. ಯಡಿಯೂರಪ್ಪ ರಾಜಕೀಯ ಕಾರ್ಯದರ್ಶಿಗಳಾಗಿದ್ದ ರೇಣುಕಾಚಾರ್ಯ, ಡಿ.ಎನ್.ಜೀವರಾಜ್, ಎನ್.ಆರ್.ಸಂತೋಷ್ ಅವರ ಹುದ್ದೆ ರದ್ದುಪಡಿಸಲಾಗಿದೆ. ಅಲ್ಲದೇ ಶಿಕ್ಷಣ ಸುಧಾರಣಾ ಸಲಹೆಗಾರ ಪ್ರೊ.ಎಂ.ಆರ್.ದೊರೆಸ್ವಾಮಿ, ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ್, ಯಡಿಯೂರಪ್ಪ ಕಾನೂನು ಸಲಹೆಗಾರರಾಗಿದ್ದ ಮೋಹನ್ ಲಿಂಬಿಕಾಯಿ, ಮಾಧ್ಯಮ ಸಲಹೆಗಾರ ಎನ್.ಭೃಂಗೇಶ್, ಸಿಎಂ ಇ-ಆಡಳಿತ ಸಲಹೆಗಾರ ಬೇಳೂರು ಸುದರ್ಶನ್, ಮಾಧ್ಯಮ ಸಂಯೋಜಕ ಜಿ.ಎಸ್.ಸುನೀಲ್, ಸಿಎಂ ನೀತಿ ನಿರೂಪಣೆ ಕಾರ್ಯತಂತ್ರ ಸಲಹೆಗಾರ ಪ್ರಶಾಂತ್ ಸೇರಿದಂತೆ …

Read More »

ಸಂಭವನೀಯ ಪಟ್ಟಿಯಲ್ಲಿ ಬಾಲಚಂದ್ರ ಜಾರಕಿಹೊಳಿ,ಹೆಸರು…

ಬೆಂಗಳೂರು: ಮಧ್ಯಾಹ್ನ 2:15 ಕ್ಕೆ ರಾಜಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸಂಭವನೀಯ ಪಟ್ಟಿಯಲ್ಲಿ ಬಾಲಚಂದ್ರ ಜಾರಕಿಹೊಳಿ, ಆರಗ ಜ್ಞಾನೇಂದ್ರ, ಸುನಿಲ್ ಕುಮಾರ್, ಎಸ್. ಅಂಗಾರ, ರಾಮದಾಸ್, ಮುರುಗೇಶ್ ನಿರಾಣಿ, ರಾಜುಗೌಡ, ಶಂಕರಗೌಡ ಪಾಟೀಲ್ ಮುನೇನಕೊಪ್ಪ, ಅಪ್ಪಚ್ಚುರಂಜನ್, ದತ್ತಾತ್ರೇಯ ಪಾಟೀಲ್, ಹಾಲಪ್ಪ ಆಚಾರ್, ಎಸ್.ಟಿ. ಸೋಮಶೇಖರ್, ಬೈರತಿ ಬಸವರಾಜ, ಬಿ.ಸಿ. ಪಾಟೀಲ್, ಸುಧಾಕರ್, ಆನಂದ ಸಿಂಗ್, ಕೆ.ಸಿ. ನಾರಾಯಣಗೌಡ, ಎಂಟಿಬಿ ನಾಗರಾಜ್, ಆರ್. ಶಂಕರ್, ಸಿ.ಪಿ. ಯೋಗೇಶ್ವರ್ …

Read More »

ಮಂತ್ರಿಗಿರಿಗೆ ಮುಹೂರ್ತ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟ ಸೇರುವ ಶಾಸಕರ ಪಟ್ಟಿ ಅಂತಿಮವಾಗಿದ್ದು, ಬುಧವಾರ ಅಪರಾಹ್ನ 2.15ಕ್ಕೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಈ ಬಗ್ಗೆ ಮುಖ್ಯಕಾರ್ಯದರ್ಶಿ ಪಿ. ರವಿಕುಮಾರ್‌ ಅವರಿಗೆ ಸಿಎಂ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಈಗಾಗಲೇ ನೂತನ ಸಚಿವರಾಗುವ ಶಾಸಕರಿಗೆ ಮಾಹಿತಿ ರವಾನೆಯಾಗಿದೆ ಎನ್ನಲಾಗುತ್ತಿದೆ. 20ರಿಂದ 24 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಮೊದಲ ಹಂತದಲ್ಲಿ ಅಳೆದು ತೂಗಿ …

Read More »

ಮಕ್ಕಳಿಗೆ ದಿನಾಲೂ ಪಾಠ – ಕೊಪ್ಪಳದ ಯುವಕರ ಶಿಕ್ಷಣ ಪ್ರೇಮ

ಕೊಪ್ಪಳ: ಕೊರೊನಾದಿಂದಾಗಿ ಶಾಲೆಗಳು ಬಂದ್ ಆಗಿವೆ. ಹೀಗಾಗಿ ಓಣಿಯಲ್ಲಿ ಆಟವಾಡುತ್ತಾ ಕಾಲಹರಣ ಮಾಡುವ ಮಕ್ಕಳಿಗೆ ನಿರಂತರ ಶಿಕ್ಷಣ ನೀಡುತ್ತಿರುವ ಕೊಪ್ಪಳ ಯುವಕರಿಬ್ಬರು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಕೊರನಾದಿಂದಾಗಿ ಪ್ರಾಥಮಿಕ ಶಾಲೆಗಳಂತೂ ಆರಂಭವಾಗಿಲ್ಲ. ಪ್ರೌಢ ಶಾಲೆಗಳಲ್ಲಿ ಆನ್ ಲೈನ್ ಶಿಕ್ಷಣ ನೀಡುತ್ತಿದ್ದಾರೆ. ಈ ವರ್ಷ ಒಂದನೆಯ ತರಗತಿಯಿಂದಲೇ ಆನ್‍ಲೈನ್ ಶಿಕ್ಷಣ ನೀಡಲು ಮುಂದಾಗಿದ್ದಾರೆ. ಆದರೆ ಬಡವರ ಮಕ್ಕಳಿಗೆ ಆನ್ ಲೈನ್ ಶಿಕ್ಷಣ ಪಡೆಯಲು ಸಾಧ್ಯವಿಲ್ಲ, ಶಾಲೆಯಿಂದ ದೂರವಾದ ಮಕ್ಕಳು …

Read More »

ಬುಧವಾರ ಮಧ್ಯಾಹ್ನ 2:15ಕ್ಕೆ ನೂತನ ಸಚಿವರ ಪ್ರಮಾಣವಚನ- ಯಾರಿಗೆ ಮಂತ್ರಿಗಿರಿ?

ಬೆಂಗಳೂರು: ಅಂತೂ ಇಂತೂ ಸಂಪುಟ ಯೋಗ ಕೂಡಿ ಬಂದಿದ್ದು, ಬುಧವಾರ ಮಧ್ಯಾಹ್ನ 2:15ಕ್ಕೆ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ನೂತನ ಸಚಿವರ ಪ್ರಮಾಣವಚನಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ನಾಳೆ ಮಧ್ಯಾಹ್ನ 2.15ಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣ ವಚನ ಸಮಾರಂಭ ನಡೆಯಲಿದೆ. ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ. ಮುಖ್ಯಕಾರ್ಯದರ್ಶಿಯಿಂದ ಶಿಷ್ಟಾಚಾರ ವಿಭಾಗಕ್ಕೆ ಸಹ …

Read More »