Breaking News

Monthly Archives: ಜುಲೈ 2021

ಕೇಂದ್ರ ಸಚಿವೆ ಕರಂದ್ಲಾಜೆಯನ್ನು ಹಾಡಿ ಹೊಗಳಿದ ಬಿಎಸ್‍ವೈ

ಕಲಬುರಗಿ: ಬಿಜೆಪಿ ಸರ್ಕಾರ ಬಂದು ಎರಡು ವರ್ಷವಾದರೂ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಬಗ್ಗೆ ತುಟಿ ಬಿಚ್ಚದ ಸಿಎಂ ಬಿ.ಎಸ್ ಯಡಿಯೂರಪ್ಪ ಕಲಬುರಗಿಯಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ಕರಂದ್ಲಾಜೆ ಅವರನ್ನು ಹಾಡಿ ಹೊಗಳಿದ್ದಾರೆ. ಕಲಬುರಗಿ ನಗರದಲ್ಲಿ ನೂತನ ಮಾದರಿಯ ತರಕಾರಿ ಮಾರುಕಟ್ಟೆ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಬಿಎಸ್‍ವೈ, ರೈತರ ಬಗ್ಗೆ ಸದಾ ಕಾಳಜಿ ವಹಿಸುವ ಶೋಭಾ ಕರಂದ್ಲಾಜೆ ಅವರನ್ನು ಪ್ರಧಾನಿ ಮೋದಿ ಕೃಷಿ ಸಚಿವರನ್ನಾಗಿ …

Read More »

ಬೆಳಗಾವಿ ಗ್ರಾಮಾಂತರ ಜಿಲ್ಲಾ ಬಿಜೆಪಿ ಕಾರ್ಯಕಾರಣಿ ವರ್ಚುವಲ್ ಸಭೆ

ಬೆಳಗಾವಿ:  ಕಾರ್ಯಕರ್ತರ ಸಹನೆ, ಸಹಕಾರ ಹಾಗೂ ಅವರ ನಿಸ್ವಾರ್ಥ ಸೇವೆಯಿಂದ ಬಿಜೆಪಿ ಪಕ್ಷ ಇಂದು ಪ್ರಪಂಚದಲ್ಲಿಯೆ ಅತಿಹೆಚ್ಚು ಕಾರ್ಯಕರ್ತರನ್ನು ಹೊಂದಿದ ಸಮರ್ಥ ಪಕ್ಷ ಎನ್ನುವದು ಜಗಜ್ಜನಿತವಾಗಿದೆ ಎಂದು ಉಪಸಭಾಪತಿ ಆನಂದ ಮಾಮನಿ ಹೇಳಿದರು. ನಗರದ ಗೋಮಟೇಶ್ವರ ಸಭಾ ಭವನದಲ್ಲಿ ಶನಿವಾರ ನಡೆದ ಬೆಳಗಾವಿ ಗ್ರಾಮಾಂತರ ಜಿಲ್ಲಾ ಬಿಜೆಪಿ ಕಾರ್ಯಕಾರಣಿ ವರ್ಚುವಲ್ ಸಭೆಯನ್ನು ಉದ್ಘಾಟಸಿ ಮಾತನಾಡಿ, ಚುನಾವಣೆಗೆ ಮಾತ್ರ ಸೀಮಿತವಾಗದೆ ಜನರ ಸಂಕಷ್ಟಕ್ಕೆ ಸದಾ ಸ್ಪಂದಿಸುವದೆ ಪಕ್ಷದ ಸಿದ್ದಾಂತವಾಗಿದೆ. ಬಿಡುವಿಲ್ಲದೆ ದೇಶದ ಜನರ …

Read More »

ಜನರನ್ನು ಮಕ್ಕಳ ರೀತಿಯಲ್ಲಿ ನೋಡಬೇಕು’; ಆಲೋಚನೆಗಳನ್ನು ಹಂಚಿಕೊಂಡ ಉಪೇಂದ್ರ

ನಟ ಉಪೇಂದ್ರ ಪ್ರಜಾಕೀಯ ಪಕ್ಷ ಸ್ಥಾಪಿಸಿ ಅದರ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ರಾಜಕೀಯದಲ್ಲಿ ಹೊಸ ಬದಲಾವಣೆ ತರಬೇಕು ಎನ್ನುವ ಕನಸನ್ನು ಅವರು ಕಂಡಿದ್ದಾರೆ. ಈಗ ಜನರೊಂದಿಗೆ ಪ್ರಜಾಕೀಯದ ಬಗ್ಗೆ ಮಾತನಾಡಲು ಉಪೇಂದ್ರ ಫೇಸ್​ಬುಕ್​ ಲೈವ್​ ಬಂದಿದ್ದರು. ಈ ವೇಳೆ ಅವರು ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ‘ಯಾವ ಪಕ್ಷ ಬರುತ್ತದೆ, ಯಾರು ನಾಯಕ, ಯಾವ ಜಾತಿ ಎಂಬಿತ್ಯಾದಿ ನೋಡಿಕೊಂಡು ನಾವು ಮತ ಹಾಕುತ್ತಿದ್ದೇವೆ. ಆ ರೀತಿ ಆಗಬಾರದು. ಅದು ಸಂಪೂರ್ಣವಾಗಿ ಅಳಿಸಿ ಹೋಗಬೇಕು. …

Read More »

ಕೆಆರ್​​ಎಸ್​ ವಾರ್​ ಕುರಿತಂತೆ ಮಹತ್ವದ ಹೇಳಿಕೆ ನೀಡಿದ ಗೃಹ ಸಚಿವ ಬಸವರಾಜ್​ ಬೊಮ್ಮಾಯಿ

ರಾಜ್ಯದಲ್ಲಿ ಕನ್ನಂಬಾಡಿ ಕಾಳಗ ದಿನಕ್ಕೊಂದು ಆಯಾಮವನ್ನ ಪಡೆಯುತ್ತಿದೆ. ಡ್ಯಾಂ ಸುರಕ್ಷತೆ ವಿಚಾರವಾಗಿ ಶುರುವಾದ ವಿವಾದ ಇದೀಗ ವೈಯಕ್ತಿಕ ಹೇಳಿಕೆ ನೀಡುವವರೆಗೂ ಬಂದು ನಿಂತಿದೆ. ಇಂದು ಬೆಂಗಳೂರಿನಲ್ಲಿ ಕೆಆರ್​ಎಸ್​ ಡ್ಯಾಂ ವಿಚಾರವಾಗಿ ಸಂಸದೆ ಸುಮಲತಾ ಹಾಗೂ ಹೆಚ್​ಡಿಕೆ ನಡುವಿನ ಸಂಘರ್ಷದ ವಿಚಾರವಾಗಿ ಮಾತನಾಡಿದ ಗೃಹ ಸಚಿವ ಬೊಮ್ಮಾಯಿ ನಮ್ಮ ಡ್ಯಾಂ ಸುರಕ್ಷಿತವಾಗಿದೆಯಾ ಅನ್ನೋದಷ್ಟೇ ಮುಖ್ಯ ಎಂದು ಹೇಳಿದ್ರು. ಸಂಸದೆ ಸುಮಲತಾ ಅಂಬರೀಶ್​ ಹಾಗೂ ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ನಡುವೆ ನಡೆಯುತ್ತಿರುವ …

Read More »

ಭೀಕರ ಅಪಘಾತಕ್ಕೆ ಬಲಿ ಮೃತರು ಹುಕ್ಕೇರಿ ತಾಲೂಕಿನ ಬೆಲ್ಲದ-ಬಾಗೇವಾಡಿ ಗ್ರಾಮದವರು

ಅಮಾವಾಸೆ ಪೂಜೆಗೆಂದು ತೆರಳಿದ್ದ ಯುವಕರಿಬ್ಬರು ಲಾರಿಗೆ ಹಿಂದಿನಿಂದ ಬೈಕ್ ಗುದ್ದಿಸಿದ ಪರಿಣಾಮ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಸಮೀಪದ ನಿಪ್ಪಾಣಿ -ಮುದೋಳ ರಾಜ್ಯ ಹೆದ್ದಾರಿಯಲ್ಲಿ ಕಬ್ಬೂರ ಟೋಲ್ ಗೇಟ್ ಹತ್ತಿರ ಟೋಲ್ ಹಣ ಕಟ್ಟಲು ನಿಂತಿದ್ದ ಲಾರಿಗೆ ಬೈಕ್ ಸವಾರರಿಬ್ಬರು ಹಿಂಬದಿಯಿಂದ ಗುದ್ದಿ ಅಪಘಾತವಾಗಿದೆ. ಸ್ಥಳದಲ್ಲಿ ಇಬ್ಬರೂ ಮೃತಪಟ್ಟಿದ್ದಾರೆ. ಘಟನೆ ಶುಕ್ರವಾರ ರಾತ್ರಿ ೯ರ ವೇಳೆಗೆ ನಡೆದಿದೆ. ಮೃತರು ಹುಕ್ಕೇರಿ ತಾಲೂಕಿನ ಬೆಲ್ಲದ-ಬಾಗೇವಾಡಿ ಗ್ರಾಮದ ಸಿದ್ದಾರ್ಥ ಅಶೋಕ ಖೆಮಲಾಪುರೆ(೨೬) ಮತ್ತು ಪ್ರಮೋದ ಕರಿಯಪ್ಪಾ …

Read More »

ಗಂಡನ ಕೊಲೆ: ಪತ್ನಿ ಸೇರಿ ನಾಲ್ವರ ಬಂಧನ

ಯಲ್ಲಾಪುರ: ಗಂಡನನ್ನು ಕೊಲೆ ಮಾಡಿ, ನಂತರ ಆತ ಕಾಣೆಯಾಗಿದ್ದಾಗಿ ಪೊಲೀಸರಿಗೆ ದೂರು ನೀಡಿದ್ದ ಆರೋಪಿ ಮಹಿಳೆ ಹಾಗೂ ಕುಟುಂಬದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ತಾಲ್ಲೂಕಿನ ಬಳಗಾರಿನ ಅತ್ತಗಾರಿನ, ಪ್ರಸ್ತುತ ಚಿಕ್ಕಮಾವಳ್ಳಿಯಲ್ಲಿರುವ ಶ್ವೇತಾ ರಾಜೇಶ ನಾಯ್ಕ (29), ಅವರ ತಂದೆ ದೀಪಕ್ ಬುದ್ದಾ ಮರಾಠಿ (53), ತಮ್ಮ ಗಂಗಾಧರ ಮರಾಠಿ (26) ಹಾಗೂ ತಾಯಿ ಯಮುನಾ ಮರಾಠಿ (50) ಬಂಧಿತರು. ರಾಜೇಶ ನಾರಾಯಣ ನಾಯ್ಕ (29) ಕೊಲೆಯಾದವರು. ಪತ್ನಿ ಶ್ವೇತಾ, ತನ್ನ …

Read More »

ದೇವರ ದರ್ಶನ ಮುಗಿಸಿ ವಾಪಾಸ್ ಆಗುತ್ತಿದ್ದ ಟಾಟಾ ಏಸ್ ಲಾರಿಗೆ ಡಿಕ್ಕಿ : ಸ್ಥಳದಲ್ಲೇ ಇಬ್ಬರ ಸಾವು, ಹಲವರು ಗಂಭೀರ

ಹಾಸನ : ಆದಿಚುಂಚನಗಿರಿಗೆ ತೆರಳಿ, ದೇವರ ದರ್ಶನ ಮುಗಿಸಿಕೊಂಡು ವಾಪಾಸ್ ಆಗುತ್ತಿದ್ದಂತ ಸಂದರ್ಭದಲ್ಲಿ, ಬೆಳ್ಳೂರು ಕ್ರಾಸ್ ಬಳಿ ಟಾಟಾ ಏಸ್ ಲಾರಿ ನಡುವೆ ಡಿಕ್ಕಿಯಾಗಿ, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಲ್ಲದೇ ಚಾಲಕ ಸೇರಿದಂತೆ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.   ಮಂಡ್ಯದ ಕೆ ಆರ್ ಪೇಟೆ ತಾಲೂಕಿನ ಅಗ್ರಹಾರ ಬಾಚನಹಳ್ಳಿಯ ಜಯರಾಮೇಗೌಡ ಮತ್ತು ಅವರ ಕುಟುಂಬಸ್ಥರು ಆದಿಚುಂಚನಗಿರಿಗೆ ದೇವರ ದರ್ಶನಕ್ಕೆ ತೆರಳಿದ್ದರು. ದೇವರ ದರ್ಶನ ಮುಗಿಸಿಕೊಂಡು ವಾಪಾಸ್ ಆಗುತ್ತಿದ್ದಂತ ಸಂದರ್ಭದಲ್ಲಿ ಟಾಟಾ …

Read More »

ಕಾರ್ಯಕರ್ತನಿಗೆ ಹೊಡೆದ ಡಿಕೆಶಿ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆಶಿವಕುಮಾರ್​ ಅವರಿಗೆ ರೌಡಿ ಕೊತ್ವಾಲನೊಂದಿಗಿದ್ದ ಗತಕಾಲದ ನೆನಪು ಕಾಡಿತೇ..? ಒಂದು ರಾಷ್ಟ್ರೀಯ ಪಕ್ಷದ ರಾಜ್ಯ ಅಧ್ಯಕ್ಷನಾಗಿದ್ದುಕೊಂಡು ಸಾರ್ವಜನಿಕವಾಗಿ ಒಬ್ಬ ವ್ಯಕ್ತಿಯ ಮೇಲೆ ಹಲ್ಲೆ ಮಾಡಿರುವುದು ಅಕ್ಷಮ್ಯ ಎಂದು ರಾಜ್ಯ ಬಿಜಪಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ವಿರುದ್ಧ ಕಿಡಿಕಾರಿದೆ. ಡಿ.ಕೆ ಶಿವಕುಮಾರ್​ ಮಾದೇಗೌಡರ ಆರೋಗ್ಯ ವಿಚಾರಿಸಲು ಮಂಡ್ಯ ಜಿಲ್ಲೆಯ ಕೆ.ಎಂ.ದೊಡ್ಡಿಗೆ ತೆರಳಿದ್ದರು, ಈ ವೇಳೆ ಕಾಂಗ್ರೆಸ್​ ಕಾರ್ಯಕರ್ತರೊಬ್ಬರು ಹೆಗಲ ಮೇಲೆ ಕೈ ಹಾಕಿ ಫೋಟೋ ತೆಗೆದುಕೊಳ್ಳಲು …

Read More »

ಪದೇ ಪದೇ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಯತ್ನಾಳ್, ಈಗ ಅಮಿತ್ ಶಾ ಎದುರು ದಾಖಲೆಗಳನ್ನು ಇಟ್ಟು ದೂರು ನೀಡಲಿದ್ದಾರೆ ?

ನವ ದೆಹಲಿ (ಜುಲೈ. 10): ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಆಗಮಿಸಿ ಪಕ್ಷದ ಎಲ್ಲಾ ಆಂತರಿಕ ಸಮಸ್ಯೆಗಳನ್ನು ಬಗೆಹರಿಸಿ ಹಿಂತಿರುಗಿದ ನಂತರವೂ,  ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಾಯಕತ್ವವನ್ನು ಬದಲಿಸಬೇಕು ಎಂದು ಪ್ರಯತ್ನಿಸುತ್ತಿರುವ ರಾಜ್ಯ ಬಿಜೆಪಿಯ ಒಂದು ಬಣದ ಗುಂಪಿನ ಪ್ರಯತ್ನ ಇನ್ನೂ ನಿಂತಿಲ್ಲ.  ಮೊದಲಿಗೆ ಭಾರೀ ಸದ್ದಿನೊಂದಿಗೆ ನಡೆಯುತ್ತಿದ್ದ ಕಸರತ್ತು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಬಂದು ಹೋದ ಮೇಲೆ ಸದ್ದಿಲ್ಲದೆ …

Read More »

ಡಿಕೆಶಿಯವರೇ, ನೀವು ರಾಜಕಾರಣಿಯೋ- ರೌಡಿಯೋ : ಬಿಜೆಪಿ ಕಿಡಿ

ಬೆಂಗಳೂರು (ಜುಲೈ 10); ರಾಜ್ಯ ಪ್ರಾದೇಶಿಕ ಕಾಂಗ್ರೆಸ್​ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಇತ್ತೀಚೆಗೆ ಸಾರ್ವಜನಿಕವಾಗಿ ಕಾಂಗ್ರೆಸ್​ ಕಾರ್ಯಕರ್ತನ ಕಪಾಳಕ್ಕೆ ಬಾರಿಸುವ ಮೂಲಕ ಸುದ್ದಿಯಾಗಿದ್ದರು. ಡಿ.ಕೆ. ಶಿವಕುಮಾರ್​ ಕಾರ್ಯಕರ್ತನ ಕಪಾಳಕ್ಕೆ ಬಾರಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಅಲ್ಲದೆ, ಈ ವಿಡಿಯೋವನ್ನು ರಾಷ್ಟ್ರೀಯ ಮಾಧ್ಯಮಗಳೂ ಪ್ರಸಾರ ಮಾಡುವ ಮೂಲಕ ಕೆಪಿಸಿಸಿ ಅಧ್ಯಕ್ಷರ ವರ್ತನೆಯನ್ನು ಕಟುವಾಗಿ ವಿಮರ್ಶೆ ಮಾಡಿತ್ತು. ಕರ್ನಾಟಕ ಬಿಜೆಪಿ ಘಟಕ ಸಹ ಡಿಕೆ ಶಿವಕುಮಾರ್ ಅವರ ಈ …

Read More »