Breaking News
Home / 2021 / ಏಪ್ರಿಲ್ / 03 (page 5)

Daily Archives: ಏಪ್ರಿಲ್ 3, 2021

ನನ್ನ ಕಾರಿನ ಮೇಲೆ ಬಿಜೆಪಿ ಗೂಂಡಾಗಳು ದಾಳಿ ನಡೆಸಿದ್ದಾರೆ: ರಾಕೇಶ್ ಟಿಕಾಯತ್

ಜೈಪುರ, ಎ. 2: ಭಾರತೀಯ ಕಿಸಾನ್ ಒಕ್ಕೂಟ (ಬಿಕೆಯು)ದ ನಾಯಕ ರಾಕೇಶ್ ಟಿಕಾಯತ್ ಅವರ ವಾಹನ ವ್ಯೆಹದ ಮೇಲೆ ರಾಜಸ್ಥಾನದ ಅಲವರ್ ಜಿಲ್ಲೆಯ ತಾತರ್‌ಪುರ ಗ್ರಾಮದಲ್ಲಿ ಶುಕ್ರವಾರ ದಾಳಿ ನಡೆದಿದೆ. ಈ ದಾಳಿಯಿಂದ ಟಿಕಾಯತ್ ಅವರ ಕಾರಿನ ಕಿಟಕಿಯ ಗಾಜು ಒಡೆದಿದೆ ಎಂದು ತಿಳಿದು ಬಂದಿದೆ. ರಾಕೇಶ್ ಟಿಕಾಯತ್ ಅವರ ವಾಹನ ಅಲವಾರ್‌ನ ಹರಸೋರಾ ಗ್ರಾಮದಿಂದ ಬಾನಸೂರ್‌ಗೆ ಸಂಚರಿಸುತ್ತಿದ್ದ ಸಂದರ್ಭ ಈ ದಾಳಿ ನಡೆದಿದೆ. ಹರಸೋರಾದಲ್ಲಿ ರೈತರ ಸಭೆ ಉದ್ದೇಶಿಸಿ …

Read More »

6 -9 ನೇ ತರಗತಿ ಸ್ಥಗಿತ, ಸಿನಿಮಾ ಶೇ. 50 ರಷ್ಟು ಸೀಟ್ ಭರ್ತಿ; ಮತ್ತೆ ಕಠಿಣ ನಿಯಮ ಜಾರಿ -ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಆತಂಕವನ್ನುಂಟು ಮಾಡಿದ ಹಿನ್ನೆಲೆಯಲ್ಲಿ ಸೋಂಕು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಕಠಿಣ ನಿಯಮ ಜಾರಿಗೆ ತರಲಾಗಿದೆ. ವಿದ್ಯಾಗಮವೂ ಸೇರಿದಂತೆ 6 ರಿಂದ 9 ನೇ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ. 10, 11, 12 ನೇ ತರಗತಿಗಳು ಪ್ರಸ್ತುತವಿರುವಂತೆಯೇ ಮುಂದುವರೆಯುತ್ತದೆ. ಆದರೆ ತರಗತಿಗಳಿಗೆ ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯವಾಗಿರುವುದಿಲ್ಲ. ವಸತಿ ಶಾಲೆಗಳು ಬೋರ್ಡಿಂಗ್ ಶಾಲೆಗಳಲ್ಲಿ 10, 11 ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆ ಬರೆಯುವ …

Read More »

ಸಿಎಂ ಬದಲಾವಣೆ, ಬಿಜೆಪಿಯಲ್ಲಿ ಭಾರಿ ಸ್ಫೋಟದ ಸುಳಿವು ನೀಡಿದ ಯತ್ನಾಳ್

ವಿಜಯಪುರ: ಮೇ 2 ರೊಳಗೆ ಮುಖ್ಯಮಂತ್ರಿ ಬದಲಾವಣೆಯಾಗದಿದ್ದರೆ ಬಿಜೆಪಿಯಲ್ಲಿ ಭಾರಿ ಸ್ಪೋಟವಾಗಲಿದೆ ಎಂದು ಪಕ್ಷದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಈಶ್ವರಪ್ಪ ಪಕ್ಷದ ಹಿರಿಯ ನಾಯಕರು. ರಾಜ್ಯಾಧ್ಯಕ್ಷರಾಗಿ ಅನುಭವ ಹೊಂದಿದವರು. ರಾಜ್ಯದಲ್ಲಿ ಬಿಜೆಪಿ ಕಟ್ಟುವಲ್ಲಿ ಈಶ್ವರಪ್ಪನವರ ಶ್ರಮ ಇದೆ ಎಂದು ಹೇಳಿದ್ದಾರೆ. ಅಂಥವರು ಬೇಸತ್ತು ರಾಜ್ಯಪಾಲರಿಗೆ ದೂರು ನೀಡಿರುವುದು ತಪ್ಪಲ್ಲ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಮುಖ್ಯಮಂತ್ರಿಗೆ ಬುದ್ಧಿವಾದ …

Read More »

ರಾಬರ್ಟ್ , ಹೀರೋ ಬಳಿಕ ‘ಯುರತ್ನ’ನಿಗೂ ತಟ್ಟಿದ ಪೈರೆಸಿ ಬಿಸಿ..!

ಬೆಂಗಳೂರು: ನಿನ್ನೆ ಅಂದ್ರೆ ಏಪ್ರಿಲ್ 1ರಂದು ರಿಲೀಸ್ ಆಗಿ ಸಕ್ಸಸ್ ಫುಲ್ ಆಗಿ ಪ್ರದರ್ಶನ ಕಾಣ್ತಿರುವ ಯುವರತ್ನ ಸಿನಿಮಾಗೂ ಪೈರಸಿ ಬಿಸಿ ತಟ್ಟಿದೆ. ಹೌದು ಪೊಗರು, ಹೀರೋ, ರಾಬರ್ಟ್ ಸಿನಿಮಾಗಳ ನಂತರ ಇದೀಗ ಯುವರತ್ನ ಸಿನಿಮಾಗೂ ಪೈರೆಸಿ ಕಾಟ ಎದುರಾಗಿದೆ. ಸಿನಿಮಾ ತೆರೆಕಂಡ ಮೊದಲ ಮೊದಲ ದಿನವೇ ಚಿತ್ರ ಪೈರಸಿ ಆಗಿದ್ದು, ಟೆಲಿಗ್ರಾಂ ಸೇರಿದಂತೆ ಎಲ್ಲೆಡೆ ಯುವರತ್ನ ಚಿತ್ರ ಹರಿದಾಡುತ್ತಿದೆ. ಇತ್ತ ಪುನೀತ್ ಅಭಿಮಾನಿಗಳು ಪೈರಸಿ ವಿರುದ್ಧ ಧ್ವನಿಯೆತ್ತಿದ್ದು, ಟೆಲಿಗ್ರಾಂ …

Read More »

ಮಾರ್ಚ್​​ 31ರ ರಾತ್ರಿ ಗೊತ್ತಾಗಿದ್ರೂ ಸಿನಿಮಾ ಬಿಡುಗಡೆ​ ಮಾಡ್ತಿರ್ಲಿಲ್ಲ: ಅಪ್ಪು ​ಬೇಸರ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹವಾಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇಂದು ಕಟ್ಟುನಿಟ್ಟಿನ ನಿಯಮವಳಿಗಳನ್ನ ಬಿಡುಗಡೆ ಮಾಡಿದ್ದು, 8 ಜಿಲ್ಲೆಗಳ ಚಿತ್ರಮಂದಿರಗಳಲ್ಲಿ ಶೇ. 50%ರಷ್ಟು ಭರ್ತಿಗೆ ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ಬಿಡುಗಡೆಯಾದ ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅಭಿನಯದ ಯುವರತ್ನ ಚಿತ್ರಕ್ಕೆ ಭಾರೀ ಹೊಡೆತ ಬಿದ್ದಿದೆ. ಚಿತ್ರತಂಡ ಈ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದೆ. ಸರ್ಕಾರದ ಈ ನಿರ್ಧಾರದ ಬಗ್ಗೆ ಬೇಸರದಲ್ಲಿಯೇ ಮಾತನಾಡಿದ ಪುನೀತ್‌, ‘ಚಿತ್ರಮಂದಿರಗಳಲ್ಲಿ 50% ಸೀಟು …

Read More »

ಮೊಬೈಲ್‌ನಲ್ಲೇ ಕಾಲ ಕಳೆಯುತ್ತಿದ್ದ ಶಿಕ್ಷಕಿ ವಿರುದ್ದ ದೂರು ನೀಡಿದ 6ನೇ ತರಗತಿ ವಿದ್ಯಾರ್ಥಿನಿ.! ಮುಂದೆನಾಯ್ತು?

ತುಮಕೂರು/ ಮಧುಗಿರಿ: ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುವ ಬದಲು ಸದಾ ಕಾಲ ಮೊಬೈಲ್‌ನಲ್ಲೇ ಕಾಲ ಕಳೆಯುತ್ತಿದ್ದ ಶಿಕ್ಷಕಿ ವಿರುದ್ದ 6ನೇ ತರಗತಿ ವಿದ್ಯಾರ್ಥಿನಿ ದೂರು ನೀಡಿರುವ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಪುರವರದಲ್ಲಿ ನಡೆದಿದೆ. ಪುರವರ ಗ್ರಾಮದ ರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿಯ ವಿದ್ಯಾರ್ಥಿನಿ ವೈಷ್ಣವಿ . ಶಾಲೆಯ ಶಿಕ್ಷಕಿಯರು ತಮ್ಮ ಸಣ್ಣ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬಂದು ಅವರ ಲಾಲನೆ ಪಾಲನೆ ಮಾಡುವಂತೆ ವಿದ್ಯಾರ್ಥಿಗಳ …

Read More »

ಮುಖದ ಗುರುತಿಸುವಿಕೆ ವಿಫಲ: ತಿರುಪತಿಗೆ ಹೋಗಿ ಮುಡಿ ಕೊಟ್ಟಿದ್ದಕ್ಕೆ ಕೆಲಸ ಕಳೆದುಕೊಂಡ ಊಬರ್​​​ ಚಾಲಕ !

ಹೈದರಾಬಾದ್​​: ಊಬರ್​ ಕ್ಯಾಬ್​​ ಚಾಲಕನೋರ್ವ ತಿರುಪತಿಗೆ ಹೋಗಿ ಮುಡಿಕೊಟ್ಟಿದ್ದೇ ಈಗ ದೊಡ್ಡ ತಪ್ಪಾಗಿದ್ದು, ಮುಡಿಕೊಟ್ಟ ಕೊಟ್ಟ ಕಾರಣಕ್ಕೆ ಈಗ ಕೆಲಸವನ್ನು ಕಳೆದುಕೊಂಡು ದಿಕ್ಕು ತೋಚದೇ ಸುಮ್ಮನೆ ಆಗಿದ್ದಾರೆ. ಹೈದರಾಬಾದ್‌ನ ಊಬರ್​​ ಚಾಲಕ ಶ್ರೀಕಾಂತ್​​ ಎನ್ನುವವರು, ರುಪತಿಗೆ ಹೋಗಿ ಮುಡಿ ಕೊಟ್ಟಿದ್ದಾರೆ. ಅಲ್ಲಿಂದ ಬಂದು ಕೆಲಸಕ್ಕೆ ಮರಳಿ ಬಂದ ವೇಳೆಯಲ್ಲಿ ಉಬರ್‌ ನಿಯಮದಂತೆ ಸೆಲ್ಫಿ ತೆಗೆದು ಲಾಗ್‌ ಇನ್‌ ಆಗಲು ಯತ್ನಿಸಿದ್ದಾರೆ, ಆದರೆ ನಾಲ್ಕು ವಿಫಲ ಯತ್ನಗಳಬಳಿಕ ಅವರ ಖಾತೆ ರದ್ದಾಗಿದೆ …

Read More »