ಬೆಳಗಾವಿ: ಬೆಳಗಾವಿಯಲ್ಲಿರುವ ಶಿವಸೇನೆ ಕಚೇರಿಯನ್ನು ಬಂದ್ ಮಾಡುವಂತೆ ಆಗ್ರಹಿಸಿ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಸದಸ್ಯರು ಸೋಮವಾರ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಶಿವಸೇನೆ ಬೋರ್ಡ್ ಹೊಂದಿರೋ ವಾಹನವನ್ನು ಜಪ್ತಿ ಮಾಡಬೇಕು ಹಾಗೂ ನಗರದಲ್ಲಿರುವ ಶಿವಸೇನೆ ಕಚೇರಿಯನ್ನು ಕೂಡಲೇ ಬಂದ್ ಮಾಡುವಂತೆ ಒತ್ತಾಯಿಸಿದರು. ಮಹಾರಾಷ್ಟ್ರದಲ್ಲಿ ಕನ್ನಡ ನಾಮಫಲಕ ಹಾಕಲು, ಕನ್ನಡ ಸಂಘಟನೆಗಳು ಕಾರ್ಯನಿರ್ವಹಿಸಲು ಅವಕಾಶ ಕೊಡದೇ ಇರುವಾಗ, ನಿರಂತರವಾಗಿ ನಾಡವಿರೋಧಿ ಚಟುವಟಿಕೆ ನಡೆಸುವ ಶಿವಸೇನೆಗೆ ಬೆಳಗಾವಿಯಲ್ಲಿ ಕಚೇರಿ ಮುಂದುವರೆಸಲು ಅನುಮತಿ …
Read More »Monthly Archives: ಮಾರ್ಚ್ 2021
ಕಿತ್ತೂರು ಕರ್ನಾಟಕಕ್ಕೆ 371 ಜೆ ವಿಶೇಷ ಸ್ಥಾನ ನೀಡಿ : ಮಾಜಿ ಶಾಸಕ ಕೋನರೆಡ್ಡಿ ಆಗ್ರಹ
ಬೆಳಗಾವಿ : ಕಲ್ಯಾಣ ಕರ್ನಾಟಕದ ಭಾಗದ ಜಿಲ್ಲೆಗಳಿಗೆ ನೀಡಿರುವ ಸಂವಿಧಾನದ ಪರಿಚ್ಛೇದ 371 ಜೆ ತಿದ್ದುಪಡಿ ಮಾಡಿ ಮುಂಬೈ ಕರ್ನಾಟಕದ ಪ್ರದೇಶದ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ಕಲ್ಪಿಸುವಂತೆ ಮಾಜಿ ಶಾಸಕ ಎನ್.ಹೆಚ್. ಕೋನರೆಡ್ಡಿ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ವಿಭಾಗದ ಧಾರವಾಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಉತ್ತರ ಕನ್ನಡ, ಹಾವೇರಿ ಹಾಗೂ ಗದಗ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ಕಲ್ಪಿಸಿಕೊಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಡಾ. ನಂಜುಂಡಪ್ಪ ವರದಿ ಜಾರಿಯಾದರೂ …
Read More »ಹುಲಿಯೊಂದು ಹೆಬ್ಬಾವನ್ನ ಬೇಟೆಯಾಡುವ ಅಪರೂಪದ ದೃಶ್ ಕ್ಯಾಮರಾದಲ್ಲಿ ಸೆರೆ
ಮೈಸೂರು: ಹುಲಿಯೊಂದು ಹೆಬ್ಬಾವನ್ನ ಬೇಟೆಯಾಡುವ ಅಪರೂಪದ ದೃಶ್ಯ ನಾಗರಹೊಳೆಯ ಕಬಿನಿ ಭಾಗದಲ್ಲಿ ಸಫಾರಿ ಮಾಡುತ್ತಿದ್ದ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಾಮಾನ್ಯವಾಗಿ ಹೆಬ್ಬಾವುಗಳು ಆನೆ, ಸಿಂಹದಂತಹ ದೈತ್ಯ ಪ್ರಾಣಿಗಳನ್ನ ಸಲೀಸಾಗಿ ಬೇಟೆಯಾಡುತ್ತದೆ. ಹೆಬ್ಬಾವಿನ ಬಿಗಿ ಹಿಡಿತಕ್ಕೆ ಸಿಲುಕಿದ ಪ್ರಾಣಿಗಳು ಅಲ್ಲಿಂದ ಹೊರಬರಲಾಗದೇ ಅವುಗಳಿಗೆ ಆಹಾರವಾಗಿಬಿಡುತ್ತದೆ. ಆದರೆ ಇಲ್ಲಿ ಹುಲಿಯೊಂದು ತಾನೇ ಬಂದು ಮಲಗಿದ್ದ ಹೆಬ್ಬಾವನ್ನ ಬೇಟೆಯಾಡಿರೋದೆ ವಿಶೇಷ ಎನ್ನಲಾಗಿದೆ. ಈ ಹಿಂದೆ ಹಾವು ಮಲಗಿರುವುದನ್ನ ನೋಡಿ ಹುಲಿ ಹೆದರಿಕೊಂಡಿದ್ದ ವಿಡಿಯೋ ಸಾಮಾಜಿಕ …
Read More »ಪೊಲೀಸ್ ಮನೆಗೆ ಕನ್ನ.. ID ಕಾರ್ಡ್ ನೋಡಿ ಬೆಚ್ಚಿಬಿದ್ದು ಕಳ್ಳರು ಮಾಡಿದ್ದೇನು..?
ಚಿತ್ರದುರ್ಗ: ಮನೆಗಳ್ಳತನ ಮಾಡಿದ ಖದೀಮರು ಪೊಲೀಸರ ಮನೆ ಎಂದು ತಿಳಿದು ಕದ್ದ ವಸ್ತುಗಳನ್ನು ವಾಪಾಸ್ ಬಿಟ್ಟು ಹೋಗಿರುವ ಘಟನೆ ಚಿತ್ರದುರ್ಗದ ಬಸವೇಶ್ವರ ನಗರದಲ್ಲಿ ನಡೆದಿದೆ. ಮಾರ್ಚ್ 13ರ ರಾತ್ರಿ ಎಸ್ಪಿ ಕಚೇರಿಯ ಸಿಪಿಐ ಮೃತ್ಯುಂಜಯ ಅವರ ಮನೆಗೆ ಕನ್ನ ಹಾಕಿದ ಕಳ್ಳರು ಮನೆಯಲ್ಲಿದ್ದ ₹88 ಸಾವಿರ ಮೌಲ್ಯದ ಪಿಸ್ತೂಲ್, ₹7 ಲಕ್ಷ ಮೌಲ್ಯದ 266 ಗ್ರಾಂ ಬಂಗಾರ, ₹1.27 ಲಕ್ಷ ಮೌಲ್ಯದ 2 ಕೆಜಿ 450 ಗ್ರಾಂ ತೂಕದ ಬೆಳ್ಳಿ, …
Read More »ಶಂಕಿತ ಆರೋಪಿಯ ವಾಯ್ಸ್ ಸ್ಯಾಂಪಲ್ ಪಡೆದು ಎಫ್ ಎಸ್ ಎಲ್ ಗೆ ರವಾನೆ :ಇಂದು ವರದಿ ಸಾಧ್ಯತೆ
ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನ ವ್ಯಕ್ತಿಯ ವಾಯ್ಸ್ ಸ್ಯಾಂಪಲ್ ಅನ್ನು ಎಫ್ಎಸ್ಎಲ್ಗೆ ಕಳುಹಿಸಲಾಗಿದ್ದು, ಇಂದು ವರದಿ ಹೊರ ಬೀಳುವ ನಿರೀಕ್ಷೆಯಿದೆ. ಒಂದು ವೇಳೆ ಸಿಡಿಯಲ್ಲಿರುವ ಧ್ವನಿಗೂ ಮತ್ತು ನೀಡಿರುವ ಧ್ವನಿಗೂ ಹೊಲಿಕೆ ಕಂಡು ಬಂದರೆ ಎಸ್‌ಐಟಿ ಬಂಧಿಸುವ ಸಾಧ್ಯತೆಯಿದೆ. ವಿಡಿಯೋದಲ್ಲಿನ ಹಿನ್ನೆಲೆ ಧ್ವನಿ ಚಿಕ್ಕಮಗಳೂರಿನ ವ್ಯಕ್ತಿಯದ್ದು ಎಂಬ ಶಂಕೆ ವ್ಯಕ್ತವಾದ ಬೆನ್ನಲ್ಲೆ ಎಸ್‌ಐಟಿ ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ಬಳಿಕ ಆತನ …
Read More »CD ಪ್ರಕರಣ; ನೆರೆಯ 3 ರಾಜ್ಯಗಳಲ್ಲಿ ಆರೋಪಿಗಳ ಓಡಾಟ ಪತ್ತೆ ಹಚ್ಚಿದ SIT
ಬೆಂಗಳೂರು: ಮಾಜಿ ಸಚಿವರ CD ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್ಪಿನ್ಗಳಿಗಾಗಿ ಎಸ್‌ಐಟಿ ಅಧಿಕಾರಿಗಳು ಶೋಧಕಾರ್ಯ ಆರಂಭಿಸಿದ್ದಾರೆ. ಸದ್ಯ ಆರೋಪಿಗಳು ಮೊಬೈಲ್ ಸ್ವಿಚ್ಆಫ್ ಮಾಡಿಕೊಂಡು ತಲೆ ಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಇಬ್ಬರು ಕಿಂಗ್ಪಿನ್ಗಳು ಒಟ್ಟಿಗೆ ಇರುವ ಬಗ್ಗೆ ಅಧಿಕಾರಿಗಳ ತನಿಖೆ ವೇಳೆ ಗೊತ್ತಾಗಿದೆ. ಸಿಡಿ ಲೀಕ್ ಮಾಡಿದ ಪ್ರಮುಖ ಕಿಂಗ್ಪಿನ್ ಹಾಗೂ ರಷ್ಯಾ ವೆಬ್ ಸೈಟ್ ಮೂಲಕ ವಿಡಿಯೋ ಅಪ್ಲೋಡ್ ಮಾಡಿದ್ದ ಹ್ಯಾಕರ್ ಇಬ್ಬರು, ಸಿಡಿ ರಿಲೀಸ್ ಆದ ಬೆನ್ನಲ್ಲೇ ಮೊಬೈಲ್ ಸ್ವಿಚ್ಆಫ್ …
Read More »ಸಿಡಿ ಪ್ರಕರಣ ತನಿಖೆಯಾದರೆ ಪ್ರೊಡ್ಯೂಸರ್, ಡೈರೆಕ್ಟರ್ ಯಾರೆಂದು ಗೊತ್ತಾಗುತ್ತದೆ: ಸಿಟಿ ರವಿ
ಚಿಕ್ಕಮಗಳೂರು: ರಮೇಶ್ ಜಾರಕಿಹೋಳಿ ಸಿಡಿ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಹೆಸರು ಯಾಕೆ ತಳುಕು ಹಾಕಲಾಗಿದೆ ಎನ್ನುವುದು ನನಗೆ ತಿಳಿದಿಲ್ಲ. ಪ್ರಕರಣದ ತನಿಖೆಯಾದರೆ ಪ್ರೊಡ್ಯೂಸರ್, ಡೈರೆಕ್ಟರ್ ಯಾರೆಂದು ಗೊತ್ತಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಿಟಿ ರವಿ “ಹಿಂದೆಲ್ಲಾ ಮೌಲ್ಯಾಧಾರಿತ ರಾಜಕೀಯದ ಚರ್ಚೆಯಾಗುತ್ತಿತ್ತು. ಈಗ ಸಿಡಿ ಆಧಾರಿತ ರಾಜಕೀಯದ ಚರ್ಚೆ ಆಗುತ್ತಿದೆ.” ಎಂದರು. “ಮೌಲ್ಯಾಧಾರಿತ ರಾಜಕೀಯವೋ, ಸಿಡಿ ಆಧಾರಿತ ರಾಜಕೀಯವೋ …
Read More »ಸಚಿವರಿಗೆ ಬಿಸಿಮುಟ್ಟಿಸಿದ ಸಿಎಂB.S.Y.
ಬೆಂಗಳೂರು: ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿಯೇ ಸಚಿವರೊಂದಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಹತ್ವದ ಅನೌಪಚಾರಿಕ ಸಭೆ ನಡೆಸಿದರು. ಸಂಪುಟ ಸಭೆಯಲ್ಲಿ ಚರ್ಚಿಸುವ ಹೊರತಾಗಿ ಇತರ ಪ್ರಾಮುಖ್ಯ ವಿಚಾರಗಳನ್ನು ತುರ್ತಾಗಿ ಚರ್ಚಿಸುವ ಉದ್ದೇಶದಿಂದ ಸಭೆ ಕರೆದಿದ್ದರು ಎಂದು ಮೂಲಗಳು ತಿಳಿಸಿದೆ. ಈವರೆಗೂ ಸರ್ಕಾರದ ಕಡೆಯಿಂದ ಸಭೆಯ ಅಧಿಕೃತ ಮಾಹಿತಿ ಹೊರಬಂದಿಲ್ಲ. ಸದನದಲ್ಲಿ ಸಚಿವರ ನಡವಳಿಕೆಗಳ ಕುರಿತು ಸಿಎಂ ಬುದ್ಧಿವಾದ ಹೇಳಿದರೆ ಎಂದು ತಿಳಿದುಬಂದಿದೆ. ಕಲಾಪದಲ್ಲಿ ಪ್ರತಿಪಕ್ಷದಿಂದ ದಾಳಿ ನಡೆಯುವಾಗ ಸದನದಲ್ಲಿ ಒಂದಿಬ್ಬರು …
Read More »ಯಡಿಯೂರಪ್ಪನವರ ಸರಕಾರ ಅಧಿಕಾರಕ್ಕೆ ಬರಲು ಪ್ರಮುಖ ಕಾರಣವಾಗಿದ್ದ ರಮೇಶ್ ಜಾರಕಿಹೊಳಿ, ಸದ್ಯ ರಾಜಕೀಯದಲ್ಲಿ ಹಿನ್ನಡೆ ಅನುಭವಿಸುತ್ತಿರಲು ಕಾರಣ ಏನು?
ರಾಜಕೀಯದಲ್ಲಿ ಒಬ್ಬರ ವಿರುದ್ದ ಇನ್ನೊಬ್ಬರು ಕತ್ತಿ ಮಸೆಯುವುದು ನೋಡಿದ್ದೇವೆ, ತಂತ್ರ ಷಡ್ಯಂತ್ರ ರೂಪಿಸುವುದು ಇದ್ದಿದ್ದೇ. ಇದಕ್ಕೆ ರಾಜ್ಯದ ಯಾವ ಪಕ್ಷವೂ ಹೊರತಾಗಿಲ್ಲ. ಜಾರಕಿಹೊಳಿ ಸಿಡಿ ಪ್ರಕರಣದ ಸತ್ಯಾಸತ್ಯತೆಯನ್ನು ಅರಿಯಲು ಸರಕಾರ ವಿಶೇಷ ತನಿಖಾ ದಳವನ್ನು ರಚಿಸಿದೆ. ತನಿಖೆ ವೇಗವನ್ನು ಪಡೆದುಕೊಳ್ಳುತ್ತಿದ್ದು ಪೊಲೀಸರು ಹಲವು ಆಯಾಮಗಳಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿರುವುದರಿಂದ, ಬಿಜೆಪಿ ಮತ್ತು ಕಾಂಗ್ರೆಸ್ ಈ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆಯನ್ನು ಇಡುತ್ತಿವೆ. ಯಡಿಯೂರಪ್ಪನವರ ಸರಕಾರ ಅಧಿಕಾರಕ್ಕೆ …
Read More »ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾದ ಶಿವರಾಜ್ ಕುಮಾರ್
ಬೆಂಗಳೂರು: ಸ್ಯಾಂಡಲ್ ವುಡ್ ನಟ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಸೋಮವಾರ ಭೇಟಿಯಾಗಿ ಮಾತುಕತೆ ನಡೆಸಿದರು. ಡಿ ಕೆ ಶಿವಕುಮಾರ್ ಅವರ ಸದಾಶಿವನಗರದ ನಿವಾಸದಲ್ಲಿ ಇಂದು ಬೆಳಗ್ಗೆ ಶಿವರಾಜ್ ಕುಮಾರ್ ಭೇಟಿಯಾದರು. ಜೆಡಿಎಸ್ ನಲ್ಲಿದ್ದ ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಯಾದ ಬೆನ್ನಲ್ಲೇ ಅವರ ಸಹೋದರಿ, ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಕೂಡಾ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎನ್ನುವ ಸುದ್ದಿಗಳ ನಡುವೆ …
Read More »