Breaking News

Yearly Archives: 2020

ಸಾಗರ To ತಮಿಳುನಾಡು – 600 ಕಿ.ಮೀ ನಡೆದೇ ಹೊರಟ ಕಾರ್ಮಿಕರು

ಚಿಕ್ಕಮಗಳೂರು: ಕಳೆದ ಆರು ತಿಂಗಳ ಹಿಂದೆ ಕಟ್ಟಡ ನಿರ್ಮಾಣಕ್ಕೆಂದು ತಮಿಳುನಾಡಿನಿಂದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿಗೆ ಬಂದಿದ್ದ 5 ಕಾರ್ಮಿಕರು ನಡೆದುಕೊಂಡೇ ತಮಿಳುನಾಡಿನತ್ತ ಹೆಜ್ಜೆ ಹಾಕಿದ್ದಾರೆ. ಏಪ್ರಿಲ್ 14ರ ಬಳಿಕವೂ ಕೊರೊನಾ ಲಾಕ್‍ಡೌನ್ ಮುಂದುವರೆದ ಹಿನ್ನೆಲೆ ವಾಹನಗಳು ಸಿಗದ ಕಾರಣ ಐವರು ಕಾರ್ಮಿಕರು ತಮಿಳುನಾಡಿನತ್ತ ನಡೆದುಕೊಂಡೇ ಸಾಗುತ್ತಿದ್ದಾರೆ. ಸಾಗರದಿಂದ ತಮಿಳುನಾಡಿಗೆ ಸರಿಸುಮಾರು 600 ಕಿ.ಮೀ ಅಂತರವಿದೆ. ಇಲ್ಲಿ ಕೆಲಸವಿಲ್ಲ ಎಂದು ಊರು ನೆನಪಾಗಿ ನಡೆದೇ ಊರು ಸೇರಲು ಕಾರ್ಮಿಕರು ಹೊರಟಿದ್ದಾರೆ. …

Read More »

ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ ಮತ್ತು ಕಸ ಎಸೆದರೆ 1,000 ರೂಪಾಯಿ ದಂಡ

ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ ಮತ್ತು ಕಸ ಎಸೆದರೆ 1,000 ರೂಪಾಯಿ ದಂಡ ವಿಧಿಸಲಾಗುವುದು ಎಂದು ಬಿಬಿಎಂಪಿ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ದಿನೇ ದಿನೇ ಕೊರೊನಾ ವೈರಸ್ ಸೋಂಕು ಹರಡುತ್ತಿರುವುದು ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ ಹಾಗೂ ಕಸ ಎಸದರೆ ಅವರಿಗೆ ದಂಡ ಹಾಕುತ್ತೇವೆ ಎಂದು ಬಿಬಿಎಂಪಿ ತಿಳಿಸಿದೆ. ಮೊದಲ ಬಾರಿಗೆ ಸಾರ್ವಜನಿಕ ಸ್ಥಳದಲ್ಲಿ ಉಗುಳಿದರೆ ಅಥವಾ ಕಸ ಹಾಕಿದರೆ 1,000 ರೂಪಾಯಿ ದಂಡ ಹಾಕಲಾಗುತ್ತದೆ. ಆದರೆ …

Read More »

ಹುಬ್ಬಳ್ಳಿ-ಧಾರವಾಡದಲ್ಲಿ ಲಾಕ್‍ಡೌನ್ ಉಲ್ಲಂಘಿಸಿ ಕೆಲವೊಂದು ಮದ್ಯ ಮಾರಾಟಗಾರರು ಕದ್ದು ಮುಚ್ಚಿ ಮಾರಾಟ

ಹುಬ್ಬಳ್ಳಿ: ಅವಳಿ ನಗರ ಹುಬ್ಬಳ್ಳಿ-ಧಾರವಾಡದಲ್ಲಿ ಲಾಕ್‍ಡೌನ್ ಉಲ್ಲಂಘಿಸಿ ಕೆಲವೊಂದು ಮದ್ಯ ಮಾರಾಟಗಾರರು ಕದ್ದು ಮುಚ್ಚಿ ಮಾರಾಟ ಮಾಡುವುದು ಬೆಳಕಿಗೆ ಬಂದಿದೆ. ಕಳೆದ 25ದಿನಗಳಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ವಿವಿಧಕಡೆ ದಾಳಿ ನಡೆಸಿ 40 ಲಕ್ಷ ರೂ. ಮೌಲ್ಯದ ಮದ್ಯ ವಶಕ್ಕೆ ಪಡೆದಿದ್ದಾರೆ. ಮದ್ಯ ಮಾರಾಟಗಾರರು ತಮ್ಮ ಅಂಗಡಿ ಕಳ್ಳತನವಾಗಿದೆ ಎಂದು ಪ್ರತಿ ಬಿಂಬಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಯು, ನಿಮ್ಮ ಬಳಿ ಇರುವ ಮದ್ಯ ಮತ್ತು ಬೀಯರ್ …

Read More »

ಊಟ ಸಿಗದೆ ಬಾಣಂತಿಯೊಬ್ಬರು ತನ್ನ ಹಸುಗೂಸಿಗೆ ಹೊಟ್ಟೆ ತುಂಬಾ ಹಾಲು ಕುಡಿಸಲು ಪರಿತಪ್ಪಿಸುತ್ತಿರುವಂತಹ ಸ್ಥಿತಿ ನಿರ್ಮಾಣ

ಚಿಕ್ಕಮಗಳೂರು: ಕೊರೊನಾ ಎಫೆಕ್ಟ್‍ನಿಂದ ಹೊಟ್ಟೆ ತುಂಬಾ ಊಟ ಸಿಗದೆ ಬಾಣಂತಿಯೊಬ್ಬರು ತನ್ನ ಹಸುಗೂಸಿಗೆ ಹೊಟ್ಟೆ ತುಂಬಾ ಹಾಲು ಕುಡಿಸಲು ಪರಿತಪ್ಪಿಸುತ್ತಿರುವಂತಹ ಸ್ಥಿತಿ ಚಿಕ್ಕಮಗಳೂರಿನಲ್ಲಿ ನಿರ್ಮಾಣವಾಗಿದೆ. ಹಣ್ಣು-ತರಕಾರಿ ಸೇರಿದಂತೆ ಪೌಷ್ಠಿಕ ಆಹಾರ ಸಿಗದೆ ಬಾಣಂತಿಯೂ ಸೊರಗಿದ್ದು, ಹಸುಗೂಸಿಗೆ ತಾಯಿಯ ಎದೆಹಾಲು ಕೂಡ ಸರಿಯಾಗಿ ಸಿಗುತ್ತಿಲ್ಲ. ನಗರದ ಹಿರೇಮಗಳೂರಿನ ರೈಲ್ವೆ ಬ್ರಿಡ್ಜ್ ಕೆಳಗೆ ಬಯಲಲ್ಲಿ ಶೆಡ್ ಹಾಕಿಕೊಂಡು ಬದುಕುತ್ತಿರುವ ನಿರಾಶ್ರಿತ ಕುಟುಂಬಗಳು ಶೋಚನಿಯ ಸ್ಥಿತಿ ತಲುಪಿವೆ. ಅಂದೇ ದುಡಿದು ಅಂದೇ ತಿನ್ನುತ್ತಿದ್ದ ಈ …

Read More »

ನಮಾಜ್, ಪೂಜೆ ಮನೆಯಲ್ಲೇ ಮಾಡಿ: ಸಲ್ಮಾನ್ ಖಾನ್

ನವದೆಹಲಿ: ಲಾಕ್‍ಡೌನ್ ಕುರಿತು ಬಾಲಿವುಡ್ ಭಾಯಿಜಾನ್ ಸಲ್ಮಾನ್ ಸಾಮಾಜಿಕ ಜಾಲತಾಣಗಳ ಮೂಲಕ ಆಗಾಗ ಎಚ್ಚರಿಸುತ್ತಿದ್ದು, ಸಾರ್ವಜನಿಕರು ಯಾವ ರೀತಿ ವರ್ತಿಸಬೇಕು ಎಂಬುದನ್ನು ಹೇಳುತ್ತಿದ್ದಾರೆ. ಈ ಕುರಿತು ಅವರದ್ದೇ ಉದಾಹರಣೆಯನ್ನು ನೀಡುತ್ತಿದ್ದು, ತಂದೆಯನ್ನು ನೋಡಲಿಕ್ಕಾಗದೆ ಪರಿತಪಿಸುತ್ತಿರುವ ಪರಿಯನ್ನು ಸಹ ವಿವರಿಸಿದ್ದಾರೆ. ಕೊರೊನಾ ವಾರಿಯರ್ಸ್ ನಮಗಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಗೌರವ ಕೊಡೋಣ, ಹಿಂದೂಸ್ಥಾನವನ್ನು ಕೊರೊನಾದಿಂದ ರಕ್ಷಿಸೋಣ ಎಂದು ಮನವಿ ಮಾಡಿದ್ದಾರೆ. ಹೌದು ಲಾಕ್‍ಡೌನ್ ಸಂದರ್ಭದಲ್ಲಿಯೂ ಹಗಲು ರಾತ್ರಿ ಎನ್ನದೆ ನಮಗಾಗಿ ದುಡಿಯುತ್ತಿರುವ …

Read More »

ಕೊರೊನಾ ವೈರಸ್ ನ ನಿಗೂಢ ರಹಸ್ಯವನ್ನು ಭೇದಿಸಲು ಮುಂದಾದ ಅಮೆರಿಕ

ವಾಷಿಂಗ್ಟನ್: ಕೊರೊನಾ ವೈರಸ್ ಚೀನಾದ ವುಹಾನ್ ನಗರದಲ್ಲಿ ಮೊದಲು ಕಾಣಿಸಿಕೊಂಡಿದೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ವುಹಾನ್ ನಲ್ಲಿ ಎಲ್ಲಿ ಎನ್ನುವುದು ಇನ್ನೂ ನಿಗೂಢವಾಗಿದೆ. ಈ ನಿಗೂಢ ರಹಸ್ಯವನ್ನು ಭೇದಿಸಲು ಅಮೆರಿಕ ಈಗ ಮುಂದಾಗಿದೆ. ಅಮೆರಿಕ ಸರ್ಕಾರ ಈ ವೈರಸ್ ಮೊದಲು ವುಹಾನ್ ನಲ್ಲಿರುವ ವೆಟ್ ಮಾರುಕಟ್ಟೆಯಿಂದ ಮನುಷ್ಯರಿಗೆ ಬಂದಿದೆಯೋ ಅಥವಾ ವುಹಾನ್ ವೈರಾಲಜಿ ಲ್ಯಾಬ್ ನಿಂದ ಸೋರಿಕೆ ಆಗಿದೆಯೋ ಎನ್ನುವುದರ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದೆ. ಈ …

Read More »

ಹಾಸನ: ನಾನು ಮಾಸ್ಕ್ ಹಾಕದೆ ಹೊರಗೆ ಹೋಗುತ್ತೇನೆ: ರೇವಣ್ಣ

ಹಾಸನ: ನಾನು ಮಾಸ್ಕ್ ಹಾಕದೆ ಹೊರಗೆ ಹೋಗುತ್ತೇನೆ. ಬೇಕಾದರೆ ನನ್ನನ್ನು ಬಂಧಿಸಲಿ. ಜೈಲಿನಲ್ಲಿ ಊಟನಾದರೂ ಸಿಗುತ್ತೆ ಎಂದು ಪ್ರಸ್ತುತ ಸ್ಥಿತಿಯ ಬಗ್ಗೆ ಮಾಜಿ ಸಚಿವ ರೇವಣ್ಣ ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ರೇವಣ್ಣ ಆಕ್ರೋಶ ಹೊರಹಾಕಿದ್ರು. ದೇಶದ ಪ್ರಧಾನಿ ಮತ್ತು ಸಿಎಂ ಹೇಳಿದ ಹಾಗೆ ಜನರು ಪಾಲಿಸಿದ್ದಾರೆ. ಅವರು ರಾಷ್ಟ್ರದ ದೊರೆ. ರಾಷ್ಟ್ರದ ದೊರೆ ಹೇಳಿದ ಹಾಗೆ ಕೇಳಿದ್ದೇವೆ. ದೀಪ …

Read More »

ನೀರಿನ‌ ಸದ್ಬಳಕೆಗೆ ಅಂತರ ರಾಜ್ಯ ನದಿ ಜೋಡಣೆ ಮಾಡಬೇಕಾದ ಅಗತ್ಯವಿದೆ.:ಸಚಿವ ರಮೇಶ್ ಜಾರಕಿಹೊಳಿ‌

ಬೆಂಗಳೂರು: ಮುಂದಿನ 30 ವರ್ಷಗಳ ನೀರಾವರಿ ‌ಯೋಜನೆಗಳ ಅನುಷ್ಠಾನ ದ ಉದ್ದೇಶದಿಂದ ಕರ್ನಾಟಕ ರಾಜ್ಯ ನೀರಾವರಿ ಆಯೋಗ ಸ್ಥಾಪನೆ ಕುರಿತಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡುವುದಾಗಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌ ತಿಳಿಸಿದ್ದಾರೆ. ರಾಜ್ಯ ಸರ್ಕಾರದ ನಿವೃತ್ತ ಕಾರ್ಯದರ್ಶಿ, ನೀರಾವರಿ ತಜ್ಞ ಕ್ಯಾ. ರಾಜಾರಾವ್ ಅವರೊಂದಿಗೆ ಕರ್ನಾಟಕ ರಾಜ್ಯದ ನೀರಾವರಿ ಯೋಜನೆಗಳ ಕುರಿತು ಬೆಂಗಳೂರಿನ ವಿಧಾನಸೌದ ಕಚೇರಿಯಲ್ಲಿ ಇಂದು ಚರ್ಚಿಸಿದ ಬಳಿಕ ಮಾತನಾಡಿದರು. ಕುಡಿಯುವ ನೀರು, ಅಂತರ್ಜಲ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ …

Read More »

ಮನೆ ಅಂಗಳದಲ್ಲೇ ಹೋಳೆಯಂತೆ ತುಂಬಿದ ಚರಂಡಿ ನೀರು.

ಮನೆ ಅಂಗಳದಲ್ಲೇ ಹೋಳೆಯಂತೆ ತುಂಬಿದ ಚರಂಡಿ ನೀರು. ಗಬ್ಬು ನಾತಕ್ಕೆ ಗ್ರಾ.ಪಂ.ನಾಕರ ರೊಚ್ಚಿಗೆದ್ದ ಗ್ರಾಮಸ್ಥರು. ರೋಗಕ್ಕೆ ಕೈ ಬೀಸಿ ಕರೆಯುತ್ತೀರುವ ಗ್ರಾ.ಪಂ ಅಧಿಕಾರಿ.  ರೋಗಕ್ಕೆ ಕೈ ಬೀಸಿ ಕರೆಯುತ್ತೀರುವ ಗ್ರಾ.ಪಂ ಅಧಿಕಾರಿ. ಪಿಡಿಒ ನಿರ್ಲಕ್ಷ್ಯಕ್ಕೆ ಗ್ರಾಮದಲ್ಲಿ ಹೋಳೆ ಹರಿದ ಚರಂಡಿ ನೀರು. ಸೊಳ್ಳೆ, ನೊಣ,ತಿಗಣಿ ಕಾಟಕ್ಕೆ ಗ್ರಾಮಸ್ಥರಿಗಿಲ್ಲ ನಿದ್ದೆ. ಯಾದಗೀರಿ ಜಿಲ್ಲೆಯ ಎಮ್ ಹೊಸಳ್ಳಿ ಗ್ರಾಮದಲ್ಲಿ ದುರ್ನಾತ. ಭಯಾನಕ ಕರೋನ ರೋಗಕ್ಕೆ ಭಯಪಟ್ಟ ಗ್ರಾಮಸ್ಥರು. ಮನೆಗೆ ನುಗ್ಗಿದ ಚರಂಡಿ ನೀರು …

Read More »

ಮಕ್ಕಳ‌ ಕಲಿಕೆಗಾಗಿ ಶಿಕ್ಷಣ ಇಲಾಖೆ ಹೊರ ತಂದಿರುವ ನೂತನ‌ ಯೂಟ್ಯೂಬ್ ಚಾನಲ್ ಮಕ್ಕಳ ವಾಣಿ

ಬೆಂಗಳೂರು, ಏ.16- ದೀರ್ಘಾವಧಿಗೆ ರಜೆ ಇರುವ ಸಂದರ್ಭದಲ್ಲಿ ಮಕ್ಕಳ ಹಿತದೃಷ್ಟಿಯಿಂದ ಯೂಟ್ಯೂಬ್ ಚಾನೆಲ್ ಪ್ರಾರಂಭಿರುವುದು ಅತ್ಯಂತ ಸಕಾಲಿಕ ಹಾಗೂ ಸಮಂಜಸವಾಗಿದೆ ಎಂದು ಮುಖ್ಯಂಮಂತ್ರಿ ಬಿ.ಎಸ್.ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು. ಮಕ್ಕಳ‌ ಕಲಿಕೆಗಾಗಿ ಶಿಕ್ಷಣ ಇಲಾಖೆ ಹೊರ ತಂದಿರುವ ನೂತನ‌ ಯೂಟ್ಯೂಬ್ ಚಾನಲ್ ಮಕ್ಕಳ ವಾಣಿ: ನಲಿಯೋಣ, ಕಲಿಯೋಣ ಅನ್ನು ಉದ್ಘಾಟನೆ ಮಾಡಿ ಮಾತನಾಡಿದ ಮುಖ್ಯಂಮಂತ್ರಿ, ತಂತ್ರಜ್ಞಾನದ ಸದ್ಬಳಕಗೆ‌ ಇದು ಅತ್ಯುತ್ತಮ ಉದಾಹರಣೆಯಾಗಿದೆ ಎಂದರು. ಚಾನಲ್ ಆರಂಭಿಸಿರುವುದಕ್ಕೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ …

Read More »