Breaking News

ಐವರು ನಿರ್ದೇಶಕರ ಒಂದು ಸಿನಿಮಾ ‘ಆದ್ದರಿಂದ’

Spread the love

ಒಟಿಟಿ ಸಮಯದಲ್ಲಿ ಅಂಥಾಲಜಿ ಸಿನಿಮಾಗಳು ಜನಪ್ರಿಯಗೊಳ್ಳುತ್ತಿವೆ. ಯಾವುದಾದರೂ ಒಂದು ವಿಷಯ ಆಧರಿಸಿ ಕೆಲವು ನಿರ್ದೇಶಕರು ಸೇರಿ ಅರ್ಧ ಗಂಟೆಯ ಸಿನಿಮಾ ಮಾಡುತ್ತಾರೆ. ಅದನ್ನು ಒಂದರಹಿಂದೊಂದರಂತೆ ಜೋಡಿಸಿ 2 ಅಥವಾ ಮೂರು ಗಂಟೆಯ ಸಿನಿಮಾ ರೀತಿಯಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಕನ್ನಡದಲ್ಲಿಯೂ ಈ ರೀತಿಯ ಪ್ರಯತ್ನಗಳು ಈಗಾಗಲೇ ಆಗಿವೆ. ಇದೀಗ ಇಂಥಹುದೇ ಮತ್ತೊಂದು ಪ್ರಯತ್ನ ಸದ್ದಿಲ್ಲದೆ ನಡೆಯುತ್ತಿದೆ. ಅದುವೇ ‘ಆದ್ದರಿಂದ’.

ಐದು ಜನ ಕನ್ನಡದ ಪ್ರತಿಭಾವಂತ ಸಿನಿಮಾ ನಿರ್ದೇಶಕರು ಒಟ್ಟಾಗಿ ಸಿನಿಮಾ ನಿರ್ದೇಶಕನ ಮಾಡುತ್ತಿದ್ದು ಸಿನಿಮಾಕ್ಕೆ ‘ಆದ್ದರಿಂದ’ ಎಂದು ಹೆಸರಿಡಲಾಗಿದೆ. ಯೋಗರಾಜ ಭಟ್, ಪವನ್ ಕುಮಾರ್, ಶಶಾಂಕ್, ಕೆ.ಎಂ.ಚೈತನ್ಯ, ಜಯತೀರ್ಥ ಅವರುಗಳು ‘ಆದ್ದರಿಂದ’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.

ಈಗಾಲಗೇ ನಿರ್ದೇಶಕ ಶಶಾಂಕ್, ಜಯತೀರ್ಥ, ಚೈತನ್ಯ, ಯೋಗರಾಜ್ ಭಟ್ ಅವರುಗಳು ತಮ್ಮ ಸಿನಿಮಾಗಳನ್ನು ಮುಗಿಸಿದ್ದಾರೆ. ಈ ನಾಲ್ಕು ಕತೆಗಳಿಗೆ ಹೊಂದಾಣಿಕೆ ಆಗುವಂಥಹಾ ಕತೆ ಹೆಣೆದು ಪವನ್ ಕುಮಾರ್ ತಮ್ಮ ಸಿನಿಮಾ ಮಾಡಲಿದ್ದಾರೆ. ಕೊನೆಗೆ ಐವರ ಸಿನಿಮಾವನ್ನು ಒಟ್ಟಿಗೆ ತೆರೆಗೆ ತರಲಾಗುತ್ತದೆ.

ಯೋಗರಾಜ್ ಭಟ್ ಅವರು ಇತ್ತೀಚೆಗಷ್ಟೆ ತಮ್ಮ ಸಿನಿಮಾದ ಚಿತ್ರೀಕರಣವನ್ನು ಮುಗಿಸಿದ್ದಾರೆ. ಯೋಗರಾಜ್ ಭಟ್ಟರ ಸಿನಿಮಾದಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇಗೌಡ ಮತ್ತು ದಿವ್ಯಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಚೈತನ್ಯ ನಿರ್ದೇಶಿಸಿರುವ ಸಿನಿಮಾದಲ್ಲಿ ‘ಆಪರೇಷನ್ ಅಲಮೇಲಮ್ಮ’ ಖ್ಯಾತಿಯ ರಿಷಿ, ವಂಶೀಧರ್, ಜೊತೆಗೆ ಹೊಸಬರಾದ ಪುನೀತ್, ಧನರಾಜ್ ಇನ್ನೂ ಕೆಲವರು ಇದ್ದಾರೆ.

ಎಲ್ಲ ಕತೆಗಳಿಗೂ ಒಂದು ಕಾರಣವಿರುತ್ತದೆ ಹಾಗಾಗಿ ನಮ್ಮೆಲ್ಲರ ಸಿನಿಮಾಕ್ಕೆ ‘ಆದ್ದರಿಂದ’ ಹೆಸರು ಚೆನ್ನಾಗಿ ಒಪ್ಪಿದ ಕಾರಣದಿಂದ ಸಿನಿಮಾಕ್ಕೆ ಇದೇ ಹೆಸರಿರಲಿ ಎಂದು ಎಲ್ಲರೂ ಒಪ್ಪಿಕೊಂಡೆವು ಎಂದಿದ್ದಾರೆ ಜಯತೀರ್ಥ.

ಸಿನಿಮಾವು ಎಫ್‌ಯುಸಿ ವೆಬ್‌ಸೈಟ್‌ನಲ್ಲಿ ಬಿಡುಗಡೆ ಆಗುತ್ತದೆಯೋ ಅಥವಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತದೆಯೋ ಕಾದು ನೋಡಬೇಕಿದೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ