Breaking News

ಬ್ಯಾಂಕ್ ಎದುರೇ ಗುಂಡಿಕ್ಕಿ ಪತ್ನಿ ಕೊಲೆ | ಟೊಮ್ಯಾಟೋ ಕೊಳೆತಿದ್ದಕ್ಕೆ ಹಲ್ಲೆ ಮಾಡಿದ್ದ: ಕರಾಳ ಸತ್ಯ ಬಿಚ್ಚಿಟ್ಟ ಮೃತಳ ಸಹೋದರಿ

Spread the love

ಲಕ್ನೋ: ಇಲ್ಲಿನ ಬ್ಯಾಂಕ್‌ವೊಂದರ ಹೊರಗೆ ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಗುಂಡಿಟ್ಟು ಹತ್ಯೆ ಮಾಡಿ, ಬಳಿಕ ತನ್ನ ತಂಗಿಯನ್ನೂ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೊಂದಾಗಿಯೇ ಸ್ಫೋಟಕ ಮಾಹಿತಿಗಳು ಹೊರಬರುತ್ತಿವೆ.

ಮೃತ ಮಹಿಳೆಯ ಸಹೋದರಿ ಹಾಗೂ ಯೂಟ್ಯೂಬರ್ ಪ್ರಗ್ಯಾ ಮಿಶ್ರಾ ಅವರು ಪತಿ ಮಾನಸ್ ವಾಜಪೇಯಿ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಎಕ್ಸ್ (X) ಖಾತೆಯಲ್ಲಿ ಹಂಚಿಕೊಂಡ ಅವರು, ಮೃತ ಪತ್ನಿ ದಿವ್ಯಾ ಅನುಭವಿಸಿದ್ದ ದೌರ್ಜನ್ಯ ಮತ್ತು ಕಿರುಕುಳದ ಬಗ್ಗೆ ಬಹಿರಂಗಪಡಿಸಿದ್ದಾರೆ. ಒಂದು ಬಾರಿ ಆನ್‌ಲೈನ್‌ನಲ್ಲಿ ತರಿಸಿದ ಟೊಮ್ಯಾಟೋ ಕೊಳೆತುಹೋಗಿತ್ತು ಎಂಬ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿದ್ದ. ಒಮ್ಮೆ ಮಾನಸ್ ಮತ್ತು ಆತನ ತಂಗಿ ಸೇರಿ ದಿವ್ಯಾ ಅವರ ತಾಯಿಯ ಮೇಲೂ ಹಲ್ಲೆ ನಡೆಸಿದ್ದರು.

ಇನ್ನೂ ಮದುವೆಯ ರಾತ್ರಿಯೇ ಮಾನಸ್ ಮನೆಯ ಖರ್ಚು-ವೆಚ್ಚಗಳನ್ನು ಹಂಚಿಕೊಳ್ಳುವ ಪಟ್ಟಿಯನ್ನು ತಯಾರಿಸಿದ್ದ. ಆರಂಭದಲ್ಲಿ ದಿವ್ಯಾ ಅದಕ್ಕೆ ಒಪ್ಪಿಕೊಂಡಿದ್ದರು. ಆದರೆ ಕಳೆದ ಒಂದು ವರ್ಷದಿಂದ ದಿವ್ಯಾ ಮನೆಯ ಖರ್ಚಿಗೆ ಹಣ ನೀಡುವುದನ್ನು ನಿಲ್ಲಿಸಿದ್ದರು. ಇದೇ ಕಾರಣಕ್ಕಾಗಿ ಮಾನಸ್ ಆಕೆಯನ್ನು “ಮೋಸಗಾರ” ಎಂದು ಶಂಕಿಸುತ್ತಿದ್ದ ಎಂದು ಆರೋಪಿಸಿದ್ದಾರೆ.

ಪತಿ ಬದಲಾಗುವ ನಿರೀಕ್ಷೆಯಲ್ಲಿದ್ದ ದಿವ್ಯಾ:
ಈ ಎಲ್ಲಾ ತೊಂದರೆಗಳ ನಡುವೆಯೂ ದಿವ್ಯಾ ತಮ್ಮ ಪತಿ ಬದಲಾಗುತ್ತಾರೆ ಎಂದು ನಂಬಿದ್ದರು. ಅಲ್ಲದೇ ವ್ರತಕ್ಕಾಗಿ ಉಪವಾಸವಿದ್ದಾಗ ತನ್ನ ಕೈಯ ಮೇಲೆ ಮಾನಸ್ ಹೆಸರಿನ ಹಚ್ಚೆ ಕೂಡ ಹಾಕಿಸಿಕೊಂಡಿದ್ದರು. ತಮ್ಮ ಗಂಡನೊಂದಿಗೆ ಎಲ್ಲವೂ ಸರಿಹೋಗಬೇಕೆಂದು ಆಳವಾಗಿ ಬಯಸಿದ್ದರು. ಘಟನೆಗೆ ಕೆಲವು ದಿನಗಳ ಮೊದಲು ದಿವ್ಯಾ ಅವರು ಅಪಘಾತವೊಂದರಲ್ಲಿ ಕೈ ಹಾಗೂ ಕಾಲುಗಳಿಗೆ ಗಾಯ ಮಾಡಿಕೊಂಡಿದ್ದರು. ಇದರಿಂದ ಕುಂಟುತ್ತಾ ನಡೆಯುತ್ತಿದ್ದರು ಎಂದು ತಿಳಿಸಿದ್ದಾರೆ.

ಸದ್ಯ ಆರೋಪಿ ತನ್ನ ಪತ್ನಿಯನ್ನು ಕೊಲೆ ಮಾಡಿದ ಸಿಸಿಟಿವಿ ದೃಶ್ಯ ಬಯಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಏನಿದು ಪ್ರಕರಣ?
ಉತ್ತರ ಪ್ರದೇಶದ  ಲಕ್ನೋದಲ್ಲಿ ಆ.20ರಂದು ಆಘಾತಕಾರಿ ದುರಂತ ನಡೆದಿದೆ. ಎಸ್‌ಬಿಐ ಬ್ಯಾಂಕ್ ಉದ್ಯೋಗಿಯೊಬ್ಬರು ಬ್ಯಾಂಕ್ ಎದುರಲ್ಲೇ ತನ್ನ ಪತ್ನಿಯನ್ನ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಬಳಿಕ ಮನೆಗೆ ತೆರಳಿ ಸಹೋದರಿಯನ್ನೂ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಲಕ್ನೋನ ಪ್ರತಿಷ್ಠಿತ ಗೋಮತಿ ನಗರ ಪ್ರದೇಶದಲ್ಲಿರುವ ಐಸಿಐಸಿಐ ಬ್ಯಾಂಕ್ ಶಾಖೆಯಲ್ಲಿ ಮಾನಸ್ ವಾಜಪೇಯಿಯ ಪತ್ನಿ ದಿವ್ಯಾ ಮಿಶ್ರಾ ಕೆಲಸ ಮಾಡುತ್ತಿದ್ದರು. ಘಟನೆ ನಡೆದ ದಿನ ಮಧ್ಯಾಹ್ನದ ವೇಳೆಗೆ ಮಾನಸ್ ಪತ್ನಿಗೆ ಕರೆ ಮಾಡಿ ಬ್ಯಾಂಕ್‌ನ ಹೊರಗೆ ಬರುವಂತೆ ತಿಳಿಸಿದ್ದ. ದಿವ್ಯಾ ಹೊರಗೆ ಬಂದ ಬಳಿಕ ಇಬ್ಬರೂ ಕೆಲ ನಿಮಿಷಗಳ ಕಾಲ ಮಾತನಾಡಿದ್ದಾರೆ. ಬಳಿಕ ಮಾನಸ್ ತನ್ನ ಬಳಿಯಿದ್ದ ಪಿಸ್ತೂಲ್‌ನಿಂದ ದಿವ್ಯಾಳ ಮೇಲೆ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದ. ಗಂಭೀರವಾಗಿ ಗಾಯಗೊಂಡಿದ್ದ ದಿವ್ಯಾಳನ್ನ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದರು.

ವಾಟ್ಸಪ್ ಸ್ಟೇಟಸ್‌ನಲ್ಲಿ ಮುಂದಿನ ಕೃತ್ಯದ ಸುಳಿವು
ಪತ್ನಿಯನ್ನು ಹತ್ಯೆ ಮಾಡಿದ ಬಳಿಕ ಮಾನಸ್ ತನ್ನ ಸಹೋದರಿಯನ್ನ ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಾಟ್ಸಪ್ ಸ್ಟೇಟಸ್‌ನಲ್ಲಿ ಬರೆದುಕೊಂಡಿದ್ದಾನೆ. ಈ ಮಾಹಿತಿ ಹೊರಬಂದ ಬಳಿಕ ಪೊಲೀಸರು ಆತನ ಮನೆಗೆ ತೆರಳಿದ್ದಾರೆ. ಬಾಗಿಲು ಒಡೆದು ಒಳ ಪ್ರವೇಶಿಸಿದಾಗ ಮಾನಸ್ ಮತ್ತು ಆತನ ಸಹೋದರಿ ಹಾಸಿಗೆಯ ಮೇಲೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಾನಸ್‌ನ ಎದೆ ಮೇಲೆ ಪಿಸ್ತೂಲ್ ಪತ್ತೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.


Spread the love

About Laxminews 24x7

Check Also

ಮಂಜಿನ ನಗರಿ ಮಡಿಕೇರಿ ದಸರಾಕ್ಕೆ 2 ಕೋಟಿ ಘೋಷಿಸಿದ ರಾಜ್ಯ ಸರ್ಕಾರ

Spread the loveಮಡಿಕೇರಿ: ಐತಿಹಾಸಿಕ ಮಡಿಕೇರಿ ದಸರಾ ಮಹೋತ್ಸವಕ್ಕೆ ರಾಜ್ಯ ಸರ್ಕಾರದಿಂದ 2 ಕೋಟಿ ರೂ. ಅನುದಾನ ಘೋಷಣೆಯಾಗಿದೆ. ಶಾಸಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ