Breaking News

ಅಕ್ರಮ ಪಡಿತರ ಅಕ್ಕಿ ದಂಧೆಕೋರರಿಂದ ಮೂರು ಲಕ್ಷ ಲಂಚ ವಸೂಲಿ – ಬಳ್ಳಾರಿ ಎಸ್ಪಿ ಗನ್‌ಮ್ಯಾನ್ ಅರೆಸ್ಟ್

Spread the love

ಬಳ್ಳಾರಿ: ಅಕ್ರಮ ಪಡಿತರ ಅಕ್ಕಿ ದಂಧೆಕೋರರಿಂದ ಮೂರು ಲಕ್ಷ ರೂ. ಲಂಚ ಹಣ ವಸೂಲಿ ಮಾಡಿದ್ದಕ್ಕೆ ಬಳ್ಳಾರಿ ಎಸ್ಪಿ ಸುಮನ್ ಪನ್ನೇಕರ್  ಗನ್‌ಮ್ಯಾನ್ ಸೇರಿ ಮೂವರನ್ನು ಬಂಧಿಸಲಾಗಿದೆ.

ಅಕ್ರಮ ದಂಧೆಕೋರ ಶರಭಯ್ಯ ಎಂಬಾತ ಮೋಕಾ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರಿನನ್ವಯ ಬಳ್ಳಾರಿ ಎಸ್ಪಿ ಸುಮನ್ ಪನ್ನೇಕರ್ ಅವರ ಗನ್ ಮ್ಯಾನ್ ದೇವರಾಜ್ ಹಾಗೂ ಆತನ ಸಹಚರರ ವಿರುದ್ಧ ಪ್ರಕರಣ ದಾಖಲಾಗಿದೆ. ಸದ್ಯ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಪಡಿತರ ಅಕ್ಕಿ ತುಂಬಿಕೊಂಡು ಎರಡು ಲಾರಿಗಳ ಸಮೇತ ಆಂಧ್ರಪ್ರದೇಶಕ್ಕೆ ಹೊರಟಿದ್ದಾಗ ಅಡ್ಡಗಟ್ಟಿ ಎಸ್ಪಿ ಸ್ಕ್ವಾಡ್ ಅಂತ ಹೇಳಿ ಗನ್‌ಮ್ಯಾನ್ ದೇವರಾಜ್ 5 ಲಕ್ಷ ರೂ.ಗೆ ಡಿಮ್ಯಾಂಡ್ ಮಾಡಿದ್ದ. ಹಣ ನೀಡದಿದ್ದರೆ ಲಾರಿ ಸೀಜ್ ಮಾಡಿ, ಜೈಲಿಗೆ ಕಳಿಸುವುದಾಗಿ ಜೀವ ಬೆದರಿಕೆ ಹಾಕಿದ್ದ. ಕೊನೆಗೆ ಮೂರು ಲಕ್ಷ ರೂ.ಗೆ ಡೀಲ್ ಮಾಡಿ, ವಸೂಲಿ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅಕ್ಕಿ ದಂಧೆಯ ಬಗ್ಗೆ ಜಿಲ್ಲೆಯ ಪೋಲಿಸರು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದು, ನೂರಾರು ಕೇಸುಗಳು ದಾಖಲಾಗಿವೆ. ಇದರ ನಡುವೆ ಎಸ್ಪಿ ಸ್ಕ್ವಾಡ್ ಹೆಸರಿನಲ್ಲಿ ಎಸ್ಪಿ ಗನ್‌ಮ್ಯಾನ್ ದೇವರಾಜ್ ದಂಧೆಕೋರರಿಂದ ಹಣ ವಸೂಲಿಗೆ ಇಳಿದಿದ್ದ. ವಸೂಲಿ ಮಾಡಿರುವುದು ಖಚಿತವಾದ ಕೂಡಲೇ ಗನ್‌ಮ್ಯಾನ್ ಬಂಧಿಸಲು ಎಸ್ಪಿ ಸೂಚನೆ ನೀಡಿದ್ದರು.

ಸದ್ಯ ಗನ್‌ಮ್ಯಾನ್ ದೇವರಾಜ್‌ನನ್ನು ಪೊಲೀಸರು ಬಂಧಿಸಿದ್ದು, ಎಸ್ಪಿ ಸುಮನ್ ಪನ್ನೇಕರ್ ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ.


Spread the love

About Laxminews 24x7

Check Also

ವಿಧಾನ ಪರಿಷತ್‌ ಸಭಾಪತಿಯಾಗಿ ಸಲೀಂ ಅಹಮದ್ ಆಯ್ಕೆ

Spread the love ಬೆಂಗಳೂರು: ಬಸವರಾಜ ಹೊರಟ್ಟಿ ಅವರ ರಾಜೀನಾಮೆಯಿಂದ ತೆರವಾಗಿದ್ದ ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಇಂದು ಸಲೀಂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ