Breaking News

IRCTC ನಿರ್ದೇಶಕರಾಗಿ ಆಯ್ಕೆಯಾದ ಸಚಿನ್ ಸಬ್ನಿಸ್ ಅವರಿಗೆ ಸನ್ಮಾನ

Spread the love

ಬೆಳಗಾವಿ: ಭಾರತೀಯ ರೈಲ್ವೆ ಪ್ರವಾಸೋದ್ಯಮ ನಿಗಮದ (IRCTC) ನಿರ್ದೇಶಕರಾಗಿ ಆಯ್ಕೆಯಾಗಿರುವ ಬೆಳಗಾವಿಯ ಹಿರಿಯ ಉದ್ಯಮಿ ಸಚಿನ್ ಸಬ್ನಿಸ್ ಅವರನ್ನು ಬೆಳಗಾಮ್ ಚೆಂಬರ್ ಆಫ್ ಕಾಮರ್ಸ್ ವತಿಯಿಂದ ಗುರುವಾರ ಸನ್ಮಾನಿಸಲಾಯಿತು.
ಚೆಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ಸ್ವಪ್ನಿಲ್ ಶಹ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿನ್ ಸಬ್ನಿಸ್ ಅವರನ್ನು ಅಭಿನಂದಿಸಿ, ಅವರ ಮುಂದಿನ ಜವಾಬ್ದಾರಿಯ ಯಶಸ್ವಿ ನಿರ್ವಹಣೆಗೆ ಶುಭ ಹಾರೈಸಲಾಯಿತು.
ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಉದ್ಯಮ, ವ್ಯಾಪಾರ ಹಾಗೂ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಸಚಿನ್ ಸಬ್ನಿಸ್ ಅವರ ಅನುಭವ ಮತ್ತು ಸೇವೆ ಮತ್ತಷ್ಟು ಸಹಕಾರಿಯಾಗಲಿದೆ ಎಂಬ ವಿಶ್ವಾಸವನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಲಾಯಿತು. IRCTCಯಂತಹ ಮಹತ್ವದ ಸಂಸ್ಥೆಯಲ್ಲಿ ನಿರ್ದೇಶಕರಾಗಿ ಆಯ್ಕೆಯಾಗಿರುವುದು ಬೆಳಗಾವಿಯ ಉದ್ಯಮ ಕ್ಷೇತ್ರಕ್ಕೂ ಹೆಮ್ಮೆಯ ಸಂಗತಿಯಾಗಿದೆ ಎಂದು ಪದಾಧಿಕಾರಿಗಳು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿನ್ ಸಬ್ನಿಸ್, ತಮ್ಮ ಮೇಲೆ ವಿಶ್ವಾಸವಿಟ್ಟು ಅಭಿನಂದಿಸಿದ ಚೆಂಬರ್ ಆಫ್ ಕಾಮರ್ಸ್‌ನ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಹೊಸ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಚೆಂಬರ್ ಆಫ್ ಕಾಮರ್ಸ್‌ನ ಹಿರಿಯ ಉಪಾಧ್ಯಕ್ಷ ಉದಯ ಜೋಶಿ, ಎರಡನೇ ಉಪಾಧ್ಯಕ್ಷ ರಾಜೇಂದ್ರ ಮುತಗೇಕರ್, ಕಾರ್ಯದರ್ಶಿ ಮನೋಜ ಮತ್ತಿಕೊಪ್ಪ, ಜಂಟಿ ಕಾರ್ಯದರ್ಶಿ ವಿನೀತ್ ಹರಕುಣಿ, ಖಜಾಂಚಿ ರಮೇಶ ಲದ್ದಡ, ಮ್ಯಾಗಜಿನ್ ಸಂಪಾದಕ ಎಂ.ಕೆ. ಹೆಗಡೆ, ವಿವಿಧ ಸಮಿತಿ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ಸುಧೀರ ಚೌಗಲೆ, ಸತೀಶ್ ಕುಲಕರ್ಣಿ, ವಿಜಯ ದರಗಶೆಟ್ಟಿ, ಬಸವರಾಜ ರಾಂಪುರೆ, ಅಶೋಕ ಕೋಳಿ, ರೋಹಿತ ಕಪಾಡಿಯಾ, ಅಪ್ಪಾಸಾಹೇಬ ಗುರವ, ಸಚಿನ್ ಹಂಗಿರಗೇಕರ, ಸಂದೀಪ ಬಾಗೇವಾಡಿ, ವೈಭವ ವೆರ್ಣೇಕರ ಮೊದಲಾದವರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅಮಾನತಿಗೆ ಸಚಿವ ಸಂಪುಟ ಶಿಫಾರಸು

Spread the loveಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿಯಲ್ಲಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ