Breaking News

ಮನೆಗೆಲಸದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಹೆಚ್‌.ಡಿ.ರೇವಣ್ಣಗೆ ಬಿಗ್ ರಿಲೀಫ್ ‌

ಬೆಂಗಳೂರು: ಮನೆಗೆಲಸದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಮಾಜಿ ಸಚಿವ, ಹಾಲಿ ಶಾಸಕ ಹೆಚ್‌.ಡಿ.ರೇವಣ್ಣ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬಿಗಿ ರಿಲೀಫ್ ನೀಡಿದೆ. ಪ್ರಕರಣ ಕುರಿತು ಸೋಮವಾರ ವಿಚಾರಣೆ ನಡೆಸಿದ 42ನೇ ಎಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ಕೆ.ಎನ್‌.ಶಿವಕುಮಾರ್‌ ಅವರು, ವಿಳಂಬವಾಗಿ ಪ್ರಕರಣ ದಾಖಲಿಸಲಾಗಿದೆ. ಹೀಗಾಗಿ ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್‌ 354 ಎ ಅಡಿ ಮಾಡಲಾದ ಆರೋಪವನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಆದೇಶಿಸಿದ್ದಾರೆ. …

Read More »

ಡೆತ್ ನೋಟ್ ಬರೆದಿಟ್ಟು ಕಿರುತೆರೆ ನಟಿಯೊಬ್ಬರು ಆತ್ಮಹತ್ಯೆ

ಬೆಂಗಳೂರು: ಡೆತ್ ನೋಟ್ ಬರೆದಿಟ್ಟು ಕಿರುತರೆ ನಟಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿ.28ರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನಂದಿನಿ (26) ಆತ್ಮಹತ್ಯೆ ಮಾಡಿಕೊಂಡವರು. ಮೈಲಸಂದ್ರದ ಇನ್ಸ್ಟಾ ಲಿವಿಂಗ್ ಪಿಜಿಯಲ್ಲಿ ಇವರು ವಾಸವಾಗಿದ್ದರು. ತಾಯಿ ನೀಡಿದ ದೂರಿನ ಮೇರೆಗೆ ಅಸಹಜ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ನಂದಿನಿ ಖಾಸಗಿ ಕನ್ನಡ ವಾಹಿನಿಯೊಂದರಲ್ಲಿ ‘ಗೌರಿ’ ಧಾರವಾಹಿ ಹಾಗೂ ನೆರೆಯ ತಮಿಳು ಭಾಷೆಯ ಸೀರಿಯಲ್​ನಲ್ಲಿ …

Read More »

ಬೆಳಗಾವಿಯಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ

ಬೆಳಗಾವಿಯಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ ದೇಶದ ಗಡಿ ದಾಟದಿದ್ದರೂ ವಿಶ್ವಮಾನವರೆನಿಕೊಂಡ ಕುವೆಂಪು; ಪ್ರೋಫೆಸರ್ ಕಾದ್ರೋಳ್ಳಿ ಬೆಳಗಾವಿಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನಾಚರಣೆ ಕುವೆಂಪು ವಿಚಾರಧಾರೆಗಳ ಕುರಿತು ಗಣ್ಯರ ಉಪನ್ಯಾಸ ಗಡಿ ದಾಟದಿದ್ದರೂ ವಿಶ್ವಮಾನವರಾದರು ಕುವೆಂಪು; ಪ್ರೋಫೆಸರ್ ಕಾದ್ರೋಳ್ಳಿ ಕುವೆಂಪು ಬಹುದೊಡ್ಡ ದಾರ್ಶನಿಕರು; ಉಪಾಯುಕ್ತ ತಳವಾರ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ‘ವಿಶ್ವಮಾನವ ದಿನ’ವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕುವೆಂಪು ಅವರ ಸಾಹಿತ್ಯ ಮತ್ತು ವೈಚಾರಿಕತೆ ಇಂದಿನ …

Read More »

ಹೊಸ ವರ್ಷದಾಚರಣೆ ವೇಳೆ ಯಾವುದೇ ಅಹಿತಕರ ಘಟನೆಗೆ ಆಸ್ಪದ ಸಿಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ; ಸಿಎಂ ಸಿದ್ಧರಾಮಯ್ಯ

ಹೊಸ ವರ್ಷದಾಚರಣೆ ವೇಳೆ ಯಾವುದೇ ಅಹಿತಕರ ಘಟನೆಗೆ ಆಸ್ಪದ ಸಿಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ; ಸಿಎಂ ಸಿದ್ಧರಾಮಯ್ಯ ಹೊಸ ವರ್ಷದಾಚರಣೆ ಹಿನ್ನೆಲೆ ಸಿಎಂ ಸಿದ್ಧರಾಮಯ್ಯನವರ ನೇತೃತ್ವದಲ್ಲಿ ಸಭೆ ಯಾವುದೇ ಅಹಿತಕರ ಘಟನೆಗೆ ಆಸ್ಪದ ಸಿಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಅಧಿಕಾರಿಗಳಿಗೆ ಸಿಎಂ ಸಿದ್ಧರಾಮಯ್ಯ ಸೂಚನೆ ಹೊಸ ವರ್ಷಾಚರಣೆ ವೇಳೆ ಬೆಂಗಳೂರು ಮಹಾನಗರದಲ್ಲಿ ಅಹಿತಕರ ಘಟನೆಗಳಿಗೆ ಆಸ್ಪದವಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸ್ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. …

Read More »

ನವದೆಹಲಿಯ ಬುದ್ಧಿಮಾಂಧ್ಯ ಮಕ್ಕಳ ಚಯನೀತ ತಂಡಕ್ಕೆ 14ನೇ ಪ್ರೇರಣಾ ಪುರಸ್ಕಾರ ಪ್ರದಾನ

ಚಿಕ್ಕೋಡಿ-“ಭಾವನೆಗಳಿಂದ ಭಾರತವಾಗಿದೆ ಎಂಬುವುದಕ್ಕೆ ಜಗತ್ತಿನಲ್ಲಿ ಭಾರತೀಯರು ನೇತೃತ್ವ, ಕರ್ತೃತ್ವ ಹಾಗೂ ಮಾತೃತ್ವಕ್ಕೆ ಹೆಚ್ಚಿನ ಮಾನ್ಯತೆ ನೀಡಿರುವುದೇ ಇದಕ್ಕೆ ನಿದರ್ಶನವಾಗಿದೆ” ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ತಾಲ್ಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಜೊಲ್ಲೆ ಗ್ರುಪ್ ಆಯೋಜಿಸಿದ 14ನೇ ಪ್ರೇರಣಾ ಉತ್ಸವದಲ್ಲಿ ಭಾನುವಾರ ಭಾಗಿಯಾಗಿ 2025ನೇ ಸಾಲಿನ ಪ್ರೇರಣಾ ಪುರಸ್ಕಾರವನ್ನು ಸಾಧಕರಿಗೆ ಪ್ರದಾನ ಮಾಡಿ ಮಾತನಾಡುತ್ತಾ, “ನೊಂದವರಿಗೆ,ಬೆಂದವರಿಗೆ ಬಂಧುವಾಗಿ ನಿಲ್ಲುವಂತಹದು ಧರ್ಮವಾಗಿದೆ. ಹುಟ್ಟುಹಬ್ಬಗಳು ಉತ್ಸವಗಳಾಗಬೇಕು. ಎಲ್ಲರಿಗೂ ಪ್ರೇರಣೆಯಾಗಬೇಕು. ಅಂತಹ ಪ್ರೇರಣೆ …

Read More »

ಸರದಾರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಚೆಸ್ ಪಾರ್ಕ್: ಶಾಸಕ ಆಸೀಫ್ ಸೇಠ

ಚೆಸ್ ಪಾರ್ಕ್ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ಸರದಾರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಚೆಸ್ ಪಾರ್ಕ್: ಶಾಸಕ ಆಸೀಫ್ ಸೇಠ ಬೆಳಗಾವಿಯ ಸರದಾರ ಪ್ರೌಢಶಾಲೆಯ ಮುಖ್ಯದ್ವಾರದ ಎಡಭಾಗದಲ್ಲಿರುವ ಹಳೆಯ ಶಿಥಿಲಾವಸ್ಥೆಯ ಕೊಠಡಿಯ ಜಾಗವನ್ನು ಸೋಮವಾರ ಪರಿಶೀಲಿಸಿ, ನಂತರ ಶಾಲೆಯ ಸಭಾಂಗಣದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು. ಬೆಳಗಾವಿ ನಗರದ ಎಲ್ಲ ಶಾಲೆಯ ವಿದ್ಯಾರ್ಥಿಗಳಿಗೆ ವಿದ್ಯಾಬ್ಯಾಸ ಹಾಗೂ ಚೆಸ್, ಕೇರಮ್ ಒಳಾಂಗಣ ಆಟಗಳನ್ನು ಆಡುವ ಮೂಲಕ ಬಿಡುವಿನ ವೇಳೆಯನ್ನು ಸದುಪಯೋಗ …

Read More »

ಬೆಳಗಾವಿ ಜಿಲ್ಲಾಧಿಕಾರಿಗಳಿಂದ ಸಂಸದರ ಯಾವುದೇ ಹಕ್ಕುಚ್ಯುತಿ ಉಲ್ಲಂಘಣೆ ಆಗಿಲ್ಲವೆಂದು ಸಮಗ್ರ ವಿಷಯದ ಕುರಿತು ವಿವರ ನೀಡಿ, ವಿಶೇಷ ಅಧಿಕಾರ ಕ್ರಮ ಕೈಗೊಳ್ಳಬಾರದೆಂದು ಮನವಿ ನೀಡಿ ಆಗ್ರಹಿಸಿದರು.

ಬೆಳಗಾವಿ: ಬೆಳಗಾವಿ ಜಿಲ್ಲಾಧಿಕಾರಿಗಳ ವಿರುದ್ಧ ಮಹಾರಾಷ್ಟ್ರ ಸಂಸದ ಧೈರ್ಯಶೀಲ್ ಮಾನೆ ಅವರು ಲೋಕಸಭಾ ಸ್ಪೀಕರ್ ಅವರಿಗೆ ದೂರು ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ನವದೆಹಲಿಯಲ್ಲಿ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಮಾನ್ಯ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ ಬೆಳಗಾವಿ ಜಿಲ್ಲಾಧಿಕಾರಿಗಳಿಂದ ಸಂಸದರ ಯಾವುದೇ ಹಕ್ಕುಚ್ಯುತಿ ಉಲ್ಲಂಘಣೆ ಆಗಿಲ್ಲವೆಂದು ಸಮಗ್ರ ವಿಷಯದ ಕುರಿತು ವಿವರ ನೀಡಿ, ವಿಶೇಷ ಅಧಿಕಾರ ಕ್ರಮ ಕೈಗೊಳ್ಳಬಾರದೆಂದು ಮನವಿ ನೀಡಿ ಆಗ್ರಹಿಸಿದರು. ಸೋಮವಾರ …

Read More »

ಲಿಂಗಾಯತ ಸಮಾಜದ ಮುಖಂಡ ಬಸವರಾಜ ಜೇವರ್ಗಿ ನಿಧನ

ಲಿಂಗಾಯತ ಸಮಾಜದ ಮುಖಂಡ ಬಸವರಾಜ ಜೇವರ್ಗಿ ನಿಧನ ಲಿಂಗಾಯತ ಸಮಾಜದ ಮುಖಂಡರು, ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿಯವರ ಆಪ್ತರಾದ ಬಸವರಾಜ ಗ. ಜೇವರ್ಗಿ ಅವರು ಇಂದು ಮಧ್ಯಾಹ್ನ ನಿಧನರಾಗಿದ್ದಾರೆ. ಗೋಕಾಕನ ಗುರುವಾರ ಪೇಟೆಯ ನಿವಾಸಿಯಾಗಿರುವ ಬಸವರಾಜ ಗ. ಜೇವರ್ಗಿ ಅವರಿಗೆ ಭಾನುವಾರ ರಾತ್ರಿ ಎದೆನೋವಿನ ಲಕ್ಷಣ ಕಂಡಾಗ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸೋಮವಾರ ಮಧ್ಯಾಹ್ನ ಲಘು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ತಾಯಿ, …

Read More »

ಧಾರವಾಡದಲ್ಲಿ ಬೀದಿಗೆ ಇಳಿದ ಮೆಕ್ಕೆ ಜೋಳ ಬೆಳೆದ ರೈತರು .

ಧಾರವಾಡದಲ್ಲಿ ಬೀದಿಗೆ ಇಳಿದ ಮೆಕ್ಕೆ ಜೋಳ ಬೆಳೆದ ರೈತರು …….ಮುಗಿಯದ ಗೋವಿನ ಜೋಳ ಖರೀದಿ ಕೇಂದ್ರದ ಸಮಸ್ಯೆ, ಮತ್ತೆ ಪ್ರತಿಭಟನೆಗಿಳಿದ ರೈತರು. : ಸರ್ಕಾರಿ ಖರೀದಿ ಕೇಂದ್ರ ತೆರೆದು ಬೆಂಬಲ ಬೆಲೆಯಡಿ ಗೋವಿನ ಜೋಳ ಖರೀದಿ ಮಾಡಬೇಕು ಎಂದು ರೈತರು ಆಗ್ರಹಿಸುತ್ತಲೇ ಇದ್ದಾರೆ. ಆದರೆ, ಸರ್ಕಾರ ಖರೀದಿ ಕೇಂದ್ರ ತೆರೆಯದೇ ಕೆಎಂಎಫ್ ಹಾಗೂ ಸಕ್ಕರೆ ಕಾರ್ಖಾನೆಗಳ ಮೂಲಕ ಗೋವಿನ ಜೋಳ ಖರೀದಿ ಮಾಡುತ್ತಿದೆ. ಕೆಎಂಎಫ್ ಹಾಗೂ ಸಕ್ಕರೆ ಕಾರ್ಖಾನೆಗಳಲ್ಲಿ ಕಡಿಮೆ …

Read More »

ಧಾರವಾಡ ಹೊರವಲಯದ ರಾ.ಹೆದ್ದಾರಿ ಯರಿಕೊಪ್ಪದ ಮಿಶ್ರಾ ಸ್ವಟ್ಸ್ ಬಳಿ ಭೀಕರ ರಸ್ತೆ ಅಪಘಾತ……ಲಾರಿ ಚಕ್ರದಡಿ ಸಿಲುಕ್ಕಿ ಬೈಕ್ ಸವಾರರಿಬ್ಬರು ದಾರುಣ ಸಾವು

ಧಾರವಾಡ ಹೊರವಲಯದ ರಾ.ಹೆದ್ದಾರಿ ಯರಿಕೊಪ್ಪದ ಮಿಶ್ರಾ ಸ್ವಟ್ಸ್ ಬಳಿ ಭೀಕರ ರಸ್ತೆ ಅಪಘಾತ……ಲಾರಿ ಚಕ್ರದಡಿ ಸಿಲುಕ್ಕಿ ಬೈಕ್ ಸವಾರರಿಬ್ಬರು ದಾರುಣ ಸಾವು : ಲಾರಿ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಗೂಡ್ಸ್ ವಾಹನದ ಚಕ್ರದಡಿ ಸಿಲುಕಿ ಬೈಕ್ ಸಾವರರಿಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಭಾನುವಾರ ತಡ ಸಂಜೆ ಧಾರವಾಡ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಯರಿಕೊಪ್ಪ ಬಳಿ ಮಿಶ್ರಾಪೇಡಾ ಮುಂಭಾಗದಲ್ಲಿ ನಡೆದಿದೆ. ಧಾರವಾಡದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಯರಿಕೊಪ್ಪದ …

Read More »