Breaking News

ಬೆಳಗಾವಿಯಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ

Spread the love

ಬೆಳಗಾವಿಯಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ
ದೇಶದ ಗಡಿ ದಾಟದಿದ್ದರೂ ವಿಶ್ವಮಾನವರೆನಿಕೊಂಡ ಕುವೆಂಪು; ಪ್ರೋಫೆಸರ್ ಕಾದ್ರೋಳ್ಳಿ
ಬೆಳಗಾವಿಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನಾಚರಣೆ
ಕುವೆಂಪು ವಿಚಾರಧಾರೆಗಳ ಕುರಿತು ಗಣ್ಯರ ಉಪನ್ಯಾಸ
ಗಡಿ ದಾಟದಿದ್ದರೂ ವಿಶ್ವಮಾನವರಾದರು ಕುವೆಂಪು; ಪ್ರೋಫೆಸರ್ ಕಾದ್ರೋಳ್ಳಿ
ಕುವೆಂಪು ಬಹುದೊಡ್ಡ ದಾರ್ಶನಿಕರು; ಉಪಾಯುಕ್ತ ತಳವಾರ
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ‘ವಿಶ್ವಮಾನವ ದಿನ’ವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕುವೆಂಪು ಅವರ ಸಾಹಿತ್ಯ ಮತ್ತು ವೈಚಾರಿಕತೆ ಇಂದಿನ ಸಮಾಜಕ್ಕೆ ದಾರಿದೀಪವಾಗಿದ್ದು, ಅವರ ವಿಶ್ವಮಾನವ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಗಣ್ಯರು ಕರೆ ನೀಡಿದರು.
ಈ ಕುರಿತು ಬೆಳಗಾವಿ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಬೆಳಗಾವಿಯ ಸಂಯುಕ್ತಾಶ್ರಯದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ವಿಶ್ವ ಮಾನವ ದಿನಾಚರಣೆ 2025ನ್ನು ಆಯೋಜಿಸಲಾಗಿತ್ತು.
ಮಹಾಪೌರ ಮಂಗೇಶ್ ಪವಾರ್, ಉಪಮಹಾಪೌರ ವಾಣಿ ಜೋಷಿ, ಆಡಳಿತ ಪಕ್ಷದ ನಾಯಕ ಹಣುಮಂತ ಕೊಂಗಾಲಿ, ಮಹಾನಗರ ಪಾಲಿಕೆ ಉಪಾಯುಕ್ತರಾದ ಉದಯಕುಮಾರ್ ತಳವಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ವಿದ್ಯಾವತಿ ಭಜಂತ್ರಿ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು. ಗಣ್ಯರ ಹಸ್ತದಿಂದ ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಈ ವೇಳೆ ಉಪನ್ಯಾಸಕರಾದ ಪ್ರೋಫೆಸರ್ ಕಾದ್ರೋಳ್ಳಿ ಅವರು ಈ ದೇಶದ ಗಡಿಯನ್ನು ದಾಟದೇ ವಿಶ್ವದಲ್ಲಿಯೇ ಒಬ್ಬನೇ ಒಬ್ಬ ವ್ಯಕ್ತಿ ವಿಶ್ವಮಾನವ ಎಂದು ಕರೆಯಲ್ಪಡುವ ವ್ಯಕ್ತಿ ಯಾರಾದರೂ ಇದ್ದರೆ ಅದು ಕುವೆಂಪು ಅವರು ಮಾತ್ರ. ಈ ಭೂ ಮಂಡಲದಲ್ಲಿ ಮನುಷ್ಯ ಜೀವಿಗಿಂತ ಇತರ ಜೀವಿಗಳಿಗೂ ಜೀವಿಸುವ ಅರ್ಹತೆಯನ್ನು ಪಡೆದುಕೊಂಡಿವೆ ಅನ್ನುವಂತಹ ವಿಚಾರ ಇದೆಯಲ್ಲ ಅದು ವಿಶ್ವಮಾನವತೆಯ ಸಂಕೇತ. ಇದನ್ನೇ ಕುವೆಂಪು ಅವರು ತಮ್ಮ ಸಾಹಿತ್ಯದಲ್ಲಿ ಹೇಳಿದ್ದಾರೆ ಎಂದರು.
ಇನ್ನು ಮಹಾನಗರ ಪಾಲಿಕೆಯ ಉಪಾಯುಕ್ತರಾದ ಉದಯಕುಮಾರ್ ತಳವಾರ ಅವರು
ಕುವೆಂಪು ಅವರು ಸಮಾಜದ ದಾರ್ಶನಿಕ ವ್ಯಕ್ತಿಗಳಾಗಿ ಅನೇಕ ಕವಿತೆಗಳನ್ನು ರಚಿಸಿದ್ದಾರೆ. ಈ ಒಂದು ಸಂದರ್ಭದಲ್ಲಿ ಅವರನ್ನು ನೆನಪಿಸಿಕೊಳ್ಳುವುದೇ ಒಂದು ನಮ್ಮ ದೊಡ್ಡ ಭಾಗ್ಯ. ಯಾರು ಬಿಎ, ಎಂ ಎ, ಪಿ.ಎಚ್.ಡಿ ಪದವಿಯನ್ನು ಪಡೆದುಕೊಳ್ಳುತ್ತಾರೋ ಅವರು ಕುವೆಂಪುರವರ ಬಗ್ಗೆ ತಿಳಿದುಕೊಳ್ಳುತ್ತಾರೆ. ಅವರು ಸಮಾಜಕ್ಕೆ ಅಪಾರವಾದಂತಹ ಕೊಡುಗೆಗಳನ್ನು ನೀಡುತ್ತಾರೆ ಎಂದರು. 
ಈ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಗಳು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು, ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಇನ್ನುಳಿದವರು ಉಪಸ್ಥಿತರಿದ್ದರು..

Spread the love

About Laxminews 24x7

Check Also

ರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ

Spread the loveರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ ಬೆಳಗಾವಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ