ಬೆಳಗಾವಿ: ಹಿಂಡಲಗಾ ಜೈಲಿನ ವತಿಯಿಂದ ಜೈಲಿನ ಹಿತಾಸಕ್ತಿಯಲ್ಲಿ ಅಳವಡಿಸಿದ ಜಾಮರನಿಂದಾಗಿ ಜೈಲಿನ ಅಕ್ಕಪಕ್ಕದ ನಾಗರಿಕರಿಗೆ ನೆಟವರ್ಕ್ ಸಿಗದೇ ತೊಂದರೆ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೌದು, ಬೆಳಗಾವಿಯ ಹಿಂಡಲಗಾ ಜೈಲಿನ ಮೂಲಕ ಜಾಮರ್ ಅಳವಡಿಸಲಾಗಿದ್ದು, ಜೈಲಿನ ಅಕ್ಕಪಕ್ಕದ ಜನವಸತಿಯಲ್ಲಿಯೂ ನೆಟವರ್ಕ್ ಸಿಗದೇ ಜನರಿಗೆ ತೀವ್ರ ತೊಂದರೆಯುಂಟಾಗುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸಬೇಕೆಂದು ಈಗಾಗಲೇ ನಾಗರೀಕರು ಜೈಲಿನ ಆಡಳಿತಕ್ಕೆ ಮನವಿಯನ್ನು ಸಲ್ಲಿಸಿದ್ದು, ಜಾಮರನ ಮಿತಿಯನ್ನು ಕಡಿಮೆಗೊಳಿಸಬೇಕೆಂದು ಆಗ್ರಹಿಸಲಾಗಿದೆ. ಕಳೆದ 5 ದಿನಗಳಿಂದ ಹಿಂಡಲಗಾ ಗ್ರಾಮ …
Read More »ಲೋಕಾಯುಕ್ತ ಸ್ವತಂತ್ರ ಸಂಸ್ಥೆ…ಸಿಎಂ ಕಂಟ್ರೋಲನಲ್ಲಿ ಬರಲ್ಲ; ಡಿಸಿಎಂ ಡಿ.ಕೆ.ಶಿವಕುಮಾರ್.
ಬೆಂಗಳೂರು: ಮುಡಾ ವಿರುದ್ಧ ದೋಸ್ತಿ ಪಾದಯಾತ್ರೆ ರಾಜಕೀಯ ಪ್ರೇರಿತ ಎಂದು ಮೊದಲೇ ಹೇಳಿದ್ದೆ. ಲೋಕಾಯುಕ್ತ ಸಂಸ್ಥೆ ಸ್ವತಂತ್ರ್ಯವಾಗಿದ್ದು, ಮುಖ್ಯಮಂತ್ರಿಗಳ ನಿಯಂತ್ರಣದಲ್ಲಿರಲು ಸಾಧ್ಯವಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡಿದಾಗಲೇ ಬಿಜೆಪಿ ಮತ್ತು ಜೆ.ಡಿ.ಎಸ್. ಬಗ್ಗೆ ಇದು ರಾಜಕೀಯ ಪ್ರೇರಿತ ಎಂದು ಹೇಳಿದ್ದೆ. ಕ್ಲೇಮ್ ಕೇಳಿದಾಗ ನೀಡಿದ್ದಾರೆ. ಲೋಕಾಯುಕ್ತ ಒಂದು ಸ್ವತಂತ್ರ್ಯ ಸಂಸ್ಥೆ ಇಲ್ಲಿ ಯಾವುದೇ ಪ್ರಭಾವವಿಲ್ಲ. ಯಾವುದಾದರೂ ಕೇಸ್ ಹಾಕಲು ಎವಿಡೆನ್ಸ …
Read More »ಹು-ಧಾ ಕಮಿಷನರ್ ಕಾರ್ಯವನ್ನು ಮೆಚ್ಚಿ ಅಂತರ್ ರಾಜ್ಯದಿಂದ ಬಂದ ಅಭಿಮಾನಿ.
ಹು-ಧಾ ಪೊಲೀಸ್ ಕಮಿಷನರ್ ಕಾರ್ಯಕ್ಕೆ ಧಾರವಾಡ ಜಿಲ್ಲೆ ಜನೆತೆ ಮೆಚ್ಚುಗೆ ವ್ಯಕ್ತಪಡಿಸಿದರು ಅಷ್ಟೇ ಅಲ್ಲದೆ ಇದೀಗ ಹೊರ ರಾಜ್ಯದ ಜನರು ಕೂಡ ಹು-ಧಾ ಪೊಲೀಸ್ ಕಮಿಷನರ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಕಮಿಷನರ್ ಅವರನ್ನ ಭೇಟಿಯಾಗಿ ಅಭಿನಂದಿಸಿದ್ದಾರೆ. ಹು-ಧಾ ಅವಳಿನಗರಕ್ಕೆ ಕಮಿಷನರ್ ಆಗಿ ನೇಮಕ ಆಗಿದ್ದಾಗನಿಂದ ಕಮಿಷನ್ ಎನ್.ಶಶಿಕುಮಾರ ಅವರ ನೇತೃದಲ್ಲಿ ಅನೇಕ ಪ್ರಕರಣವನ್ನು ಬೇದಿಸಿದ್ದರು. ಹಾಗೂ ಅವಳಿ ನಗರದಲ್ಲಿ ಗಾಂಜಾ ಮಾರಾಟಕ್ಕೆ ಕಡಿವಾಣ ಹಾಕಿದರು. ಯುವತಿಯರನ್ನ ಚುಡಾಯಿಸಿಯುವ ಪುಂಡ …
Read More »ದುಷ್ಕರ್ಮಿಗಳು ಉದ್ಯಮಿಯನ್ನು ಅಪಹರಣ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ : ಸಿನಿಮೀಯ ರೀತಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯನ್ನು ದುಷ್ಕರ್ಮಿಗಳು ಅಪಹರಣ ಮಾಡಿರುವ ಘಟನೆ ಜಿಲ್ಲೆಯ ಮೂಡಲಗಿ ತಾಲೂಕಿನ ದಂಡಾಪುರ ಕ್ರಾಸ್ ಬಳಿ ನಡೆದಿದೆ. ರಾಜಾಪುರ ಗ್ರಾಮದ ನಿವಾಸಿ ಬಸವರಾಜ್ ಅಂಬಿ(48) ಅಪಹರಣಕ್ಕೆ ಒಳಗಾದ ಉದ್ಯಮಿ. ಫೆ.14 ರಂದು ರಾತ್ರಿ ಬಸವರಾಜ್ ಅವರನ್ನು ಅಪಹರಣ ಮಾಡಿದ್ದಾರೆ. ಅಪಹರಣದ ಬಳಿಕ ಬಸವರಾಜ್ ಪತ್ನಿಗೆ ಮಂಗಳವಾರ (ಫೆ.18) ತಡರಾತ್ರಿ ಕರೆ ಮಾಡಿರುವ ಕಿಡ್ನಾಪರ್ಸ್, ಬಸವರಾಜ್ ಅಂಬಿಯನ್ನು ಬಿಡಿಸಿಕೊಂಡು ಹೋಗಬೇಕು ಎಂದಿದ್ದರೆ, 5 ಕೋಟಿ ರೂ. …
Read More »ದಲಿತ ಸಮಾವೇಶ ಮಾಡಬೇಡಿ ಅಂತ ಹೈಕಮಾಂಡ್ ಹೇಳಿಲ್ಲ: ಸಚಿವ ಮುನಿಯಪ್ಪ
ಬೆಂಗಳೂರು: ದಲಿತ ಸಮಾವೇಶ ಮಾಡಬೇಡಿ ಅಂತ ಹೈಕಮಾಂಡ್ ಹೇಳಿಲ್ಲ ಎಂದು ಆಹಾರ ಇಲಾಖೆ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದ್ದಾರೆ. ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಿಂದೆಯೇ ಹೈಕಮಾಂಡ್ ಎಸ್‌ಸಿ, ಎಸ್‌ಟಿ ಸಮುದಾಯಗಳನ್ನು ಒಗ್ಗೂಡಿಸಿ ಅಂತ ಹೇಳಿತ್ತು. ಹೈಕಮಾಂಡ್ ಯಾವಾಗ ಸಮಾವೇಶ ಮಾಡಬೇಕೆಂದು ಹೇಳುತ್ತದೋ ಆವಾಗ ಸಮಾವೇಶವನ್ನು ಮಾಡುತ್ತೇವೆ ಎಂದರು. ನಾನೇನೂ ಹೈಕಮಾಂಡ್ ಭೇಟಿಯಾಗಲ್ಲ. ಸಮಾವೇಶ ಮಾಡಬೇಕು ಅಂತ ರಾಜಣ್ಣ, ಪರಮೇಶ್ವರ್ ಸೇರಿ ಹಲವರು ಮನವಿ ಮಾಡಿದ್ದಾರೆ. ಬೇರೆಯವರು ಹೇಳಿದ್ದನ್ನೇ ನಾನು …
Read More »ಕಲಬುರಗಿಯಲ್ಲಿ ಕಾರ್ಮಿಕನ ಮೃತದೇಹವನ್ನು ಎಳೆದೊಯ್ದ ಘಟನೆ ಸಂಬಂಧ ಎಸ್ಪಿ ಜೊತೆ ಮಾತನಾಡಿದ್ದೇನೆ. ಕೆಲವು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದರು.
ಧಾರವಾಡ: ಕಾರ್ಮಿಕನ ಮೃತದೇಹವನ್ನು ಎಳೆದೊಯ್ದಿರುವ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕೊಡ್ಲಾ ಗ್ರಾಮದ ಬಳಿಯ ಸಿಮೆಂಟ್ ಕಂಪನಿಯೊಂದರಲ್ಲಿ ನಡೆದಿದೆ. ಬಿಹಾರದ ಚಂದನಸಿಂಗ್ (35) ಮೃತ ಕಾರ್ಮಿಕ. ಕಾರ್ಮಿಕನನ್ನು ಎಳೆದೊಯ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆ ಸಂಬಂಧ ಆರು ಮಂದಿ ವಿರುದ್ಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಕಲಬುರಗಿ ಎಸ್ಪಿ ಆಡೂರು ಶ್ರೀನಿವಾಸಲು ತಿಳಿಸಿದ್ದಾರೆ. “ಕಾರ್ಮಿಕ ಮೃತಪಟ್ಟಿದ್ದು ಕಾರ್ಖಾನೆಯ ಒಳಗಡೆ ಅಲ್ಲವೇ ಅಲ್ಲ. ಕಾರ್ಮಿಕ ಬಹಿರ್ದೆಸೆಗೆಂದು …
Read More »ಯಲ್ಲಾಪುರ ಬಳಿ ಲಾರಿ ಡಿಕ್ಕಿ: ಕಾರಲ್ಲಿದ್ದ ಪತಿ – ಪತ್ನಿ ಮತ್ತು ಏಳು ತಿಂಗಳ ಮಗ ಸಾವು
ಕಾರವಾರ: ಲಾರಿ ಮತ್ತು ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿದ ಪರಿಣಾಮ ಕಾರಿನಲ್ಲಿ ಪತಿ, ಪತ್ನಿ ಮತ್ತು 7 ತಿಂಗಳ ಮಗ ಸೇರಿದಂತೆ ಮೂವರು ಸಾವನ್ನಪ್ಪಿದ ದಾರುಣ ಘಟನೆ ಯಲ್ಲಾಪುರದ ಅರೆಬೈಲ್ ಘಟ್ಟದ ಬಳಿ ಬುಧವಾರ ನಡೆದಿದೆ. ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೊಪ್ಪಳ ಮೂಲಕ ಶ್ರೀಕಾಂತ ರೆಡ್ಡಿ (37), ಅವರ ಪತ್ನಿ ಚೈತ್ರಾ ಆರ್(31) ಹಾಗೂ ಅವರ 7 ತಿಂಗಳ ಮಗು ಶ್ರೀಹಾನ್ ಅಪಘಾತದಲ್ಲಿ ಮೃತಟಪಟ್ಟವರು. ಕಾರು ಚಾಲಕ ಆರ್ ವೆಂಕಟೇಶ್ …
Read More »ಉಚಿತ ಕೃತಕ ಕಾಲು ಜೋಡಣೆಗೆ ಅರ್ಜಿ ಆಹ್ವಾನ: ಫೆ.25 ಕೊನೆಯ ದಿನ
ಬೆಳಗಾವಿ: ರಸ್ತೆ ಅಪಘಾತ ಇಲ್ಲವೇ ಗ್ಯಾಂಗ್ರೀನ್ ಸೇರಿ ಮತ್ತಿತ್ತರ ರೋಗಗಳಿಂದ ಕಾಲು ಕಳೆದುಕೊಂಡು, ಇನ್ನೇನು ನಮಗೆ ನಡೆಯೋಕೆ ಆಗೋದಿಲ್ಲ ಎಂದು ದುಃಖಿಸುತ್ತಿದ್ದಿರಾ..? ಹಾಗಾದರೆ, ಚಿಂತೆ ಬಿಡಿ ಜೈಪುರದ ಕೃತಕ ಕಾಲು ಎಲ್ಲರಂತೆ ನೀವು ಸ್ವತಂತ್ರವಾಗಿ ನಡೆದಾಡುವಂತೆ ಮಾಡುತ್ತದೆ. ಅದೂ ಸಂಪೂರ್ಣ ಉಚಿತವಾಗಿ. ಹೌದು, ಬೆಳಗಾವಿಯ ಲಯನ್ಸ್ ಕ್ಲಬ್ ಹಾಗೂ ಹುಬ್ಬಳ್ಳಿಯ ಮಹಾವೀರ ಲಿಂಬ್ ಸೆಂಟರ್ ಸಹಯೋಗದಲ್ಲಿ ಉಚಿತ ಕೃತಕ ಕಾಲು ಜೋಡಣೆಗೆ ಅರ್ಜಿ ಆಹ್ವಾನಿಸಲಾಗಿದೆ. ಇದು ಬೆಳಗಾವಿ ಜನತೆಗೆ ಒಂದು ಸುವರ್ಣಾವಕಾಶ. …
Read More »ಯಲ್ಲಮ್ಮಾ ದೇವಸ್ಥಾನ ಪ್ರಾಧಿಕಾರ ಹಾಗೂ ಮಂಡಳಿ ವತಿಯಿಂದ ಸಭೆ
ಇಂದು ಸಂಜೆ ಸವದತ್ತಿ ತಾಲೂಕು ಪಂಚಾಯತ್ ಸಭಾಭವನದಲ್ಲಿ ಮಾನ್ಯ ಸವದತ್ತಿ ಮತಕ್ಷೇತ್ರದ ಶಾಸಕರ ಘನ ಉಪಸ್ಥಿತಿಯಲ್ಲಿ ಉಗರಗೋಳ ಗ್ರಾಮ ಪಂಚಾಯತಿ ಸದಸ್ಯರೊಂದಿಗೆ / ಗ್ರಾಮಸ್ಥರೊಂದಿಗೆ ಶ್ರೀ ರೇಣುಕಾ ಯಲ್ಲಮ್ಮಾ ದೇವಸ್ಥಾನ ಪ್ರಾಧಿಕಾರ ಹಾಗೂ ಮಂಡಳಿ ವತಿಯಿಂದ ಕೈಗೊಳ್ಳಲಾಗುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಹಾಗೂ ಜಮೀನಿನ ವಿಷಯದ ಕುರಿತು ಸಭೆ ಜರುಗಿಸಿ ಚರ್ಚಿಸಲಾಯಿತು. ಜಿಲ್ಲಾಧಿಕಾರಿ ಯವರ ಜೊತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು …
Read More »ಬೆಳಗಾವಿ ಗ್ರಾಮೀಣ ಕ್ಷೇತ್ರದ ತುರಮುರಿ ಗ್ರಾಮದಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ನೂತನ ಮೂರ್ತಿಯ ಪ್ರತಿಷ್ಟಾಪನೆಯ ಕಾರ್ಯಕ್ರಮ
ಬೆಳಗಾವಿ ಗ್ರಾಮೀಣ ಕ್ಷೇತ್ರದ ತುರಮುರಿ ಗ್ರಾಮದಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ನೂತನ ಮೂರ್ತಿಯ ಪ್ರತಿಷ್ಟಾಪನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. ಶಿವಾಜಿ ಮಹಾರಾಜರ ಜಯಂತಿಯ ಪ್ರಯುಕ್ತವಾಗಿ ಮೂರ್ತಿಯನ್ನು ಅನಾವರಣಗೊಳಿಸಲಾಗಿದೆ. ಕ್ಷೇತ್ರದ ಎಲ್ಲ ಗ್ರಾಮಗಳ, ಸರ್ವ ಜನಾಂಗಗಳ ಹಿತ ದೃಷ್ಟಿಯಿಂದ ಎಲ್ಲ ಮಹನೀಯರ ಮೂರ್ತಿಗಳ ಪ್ರತಿಷ್ಟಾಪನೆಗೆ ಮಹತ್ವ ನೀಡಲಾಗುತ್ತಿದೆ. ಬರುವ ದಿನಗಳಲ್ಲಿ ಕ್ಷೇತ್ರದಲ್ಲಿ ಮತ್ತಷ್ಟು ಮಹನೀಯರ ಮೂರ್ತಿಗಳು ತಲೆ ಎತ್ತಲಿವೆ. ಈ ಸಂದರ್ಭದಲ್ಲಿ ಯುವರಾಜಣ್ಣ ಕದಂ, ಜಯವಂತ ಬಾಳೇಕುಂದ್ರಿ, ಯುವ ಕಾಂಗ್ರೆಸ್ ಮುಖಂಡ …
Read More »
Laxmi News 24×7