Breaking News

ಕ್ಲೈಮ್ಯಾಕ್ಸ್‌ ಹಂತಕ್ಕೆ ತಲುಪಿದ ಪಾದಯಾತ್ರೆ – ಬಳ್ಳಾರಿ ಜಿಲ್ಲೆಗೆ ಎಂಟ್ರಿ ಕೊಟ್ಟ ಬಿಜೆಪಿ ನಾಯಕರು

Spread the love

ಬಳ್ಳಾರಿ: ರಾಜ್ಯ ಸರ್ಕಾರದ ಭ್ರಷ್ಟಾಚಾರ ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ  ನೇತೃತ್ವದಲ್ಲಿ ರಾಯಚೂರು  ಜಿಲ್ಲೆಯ ಲಿಂಗಸಗೂರಿನಿಂದ  ಆರಂಭವಾದ ಬಳ್ಳಾರಿ ಚಲೋ  ಪಾದಯಾತ್ರೆ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ. ಪಾದಯಾತ್ರೆ ಇಂದು ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೆ ಎಂಟ್ರಿಕೊಟ್ಟಿದೆ. ಗುರುವಾರ ಸಂಜೆ ಬಳ್ಳಾರಿ ನಗರದ ಮುನ್ಸಿಪಲ್ ಮೈದಾನದಲ್ಲಿ ಬೃಹತ್ ಬಹಿರಂಗ ಸಮಾವೇಶ ನಡೆಯಲಿದ್ದು, 9ನೇ ದಿನವಾದ ಇಂದೂ 20 ಕಿಲೋಮೀಟರ್ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ ಬಿಜೆಪಿ ನಾಯಕರಿಗೆ ಮಾರ್ಗಮಧ್ಯೆ ಅಭಿಮಾನಿಗಳು, ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು.

ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹತ್ತಾರು ಬೇಡಿಕಗಳನ್ನ ಮುಂದಿಟ್ಟುಕೊಂಡು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ನಡೆಯುತ್ತಿರುವ ಬಳ್ಳಾರಿ ಚಲೋ ಪಾದಯಾತ್ರೆ ಕೊನೆಯ ಹಂತಕ್ಕೆ ತಲುಪಿದೆ. ಲಿಂಗಸುಗೂರಿನಿಂದ 170 ಕಿಲೋಮೀಟರ್ ಕ್ರಮಿಸಿದ ಪಾದಯಾತ್ರೆ ಇಂದು ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೆ ಪ್ರವೇಶಿಸಿದೆ.

ಪಾದಯಾತ್ರೆಯ ಮಾರ್ಗ ಮಧ್ಯದಲ್ಲೆಲ್ಲಾ ವಿಜಯೇಂದ್ರ ಸೇರಿದಂತೆ ಬಿಜೆಪಿ ನಾಯಕರಿಗೆ ಅಭಿಮಾನಿಗಳು, ಕಾರ್ಯಕರ್ತರು ಹೂಮಳೆ ಸುರಿಸಿ, ಹಾರಗಳನ್ನ ಹಾಕಿ ಅದ್ಧೂರಿಯಾಗಿ ಸ್ವಾಗತ ಕೋರಲಾಯಿತು. ಈ ಮೂಲಕ ಪಾದಯಾತ್ರೆಗೆ ಮತ್ತಷ್ಟು ಮೆರಗು ನೀಡಿದರು. 9ನೇ ದಿನವಾದ ಇಂದು ಸಂಡೂರು ವಿಧಾನಸಭಾ ಕ್ಷೇತ್ರದ ಕುಡತಿನಿಯಿಂದ ಆರಂಭವಾಗಿ ಬಳ್ಳಾರಿ ಜಿಲ್ಲೆಗೆ ಎಂಟ್ರಿ ಕೊಟ್ಟಿತು. ಇಂದು 20 ಕಿಲೋಮೀಟರ್ ಪಾದಯಾತ್ರೆ ನಡೆಸಿದ ಬಿಜೆಪಿ ನಾಯಕರು ಬಳ್ಳಾರಿಗೆ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಅದ್ಧೂರಿ ಸ್ವಾಗತ ಸಿಕ್ಕಿತು.

ಗುರುವಾರ ಬಳ್ಳಾರಿಯಲ್ಲಿ ಕೇಸರಿಪಡೆ ರಣಕಹಳೆ:
ಬಳ್ಳಾರಿ ನಗರಕ್ಕೆ ತಲುಪಲಿರುವ ಪಾದಯಾತ್ರೆ ನಗರದ ಅಲ್ಲಿಪುರ, ಸುಧಾ ಕ್ರಾಸ್, ರೆಡಿಯೋ ಪಾರ್ಕ್, ಕೌಲ್ ಬಜಾರ್, ಮೋತಿ ಸರ್ಕಲ್, ರಾಯಲ್ ಸರ್ಕಲ್ ಮೂಲಕ ಹಾದು ಕನಕದುರ್ಗಮ್ಮ ದೇವಸ್ಥಾನಕ್ಕೆ ಪಾದಯಾತ್ರೆ ಕೊನೆಗೊಳ್ಳಲಿದೆ. ಕನಕದುರ್ಗಮ್ಮ ದೇವಸ್ಥಾನಕ್ಕೆ ಪಾದಯಾತ್ರೆ ಕೊನೆಗೊಳಿಸುವ ಬಿಜೆಪಿ ನಾಯಕರು ನಾಳೆ ಬೆಳಗ್ಗೆ ಮತ್ತೆ ಕನಕದುರ್ಗಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಅಲ್ಲಿಂದ ವೇದಿಕೆ ಕಾರ್ಯಕ್ರಮದವರೆಗೂ ನಡೆದುಕೊಂಡೇ ಹೋಗಲಿರುವ ಬಿಜೆಪಿ ನಾಯಕರು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

ಇನ್ನು ಪಾದಯಾತ್ರೆಯ ಮಾರ್ಗಮಧ್ಯೆ ವಿಜಯೇಂದ್ರ, ಕುಡತಿನಿ ಭೂ ಸಂತ್ರಸ್ತರ ಭೇಟಿ ಮಾಡಿ ಸಮಸ್ಯೆ ಆಲಿಸಿದ್ರು. ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸರ್ಕಾರ ನಮ್ಮ ಹೋರಾಟಕ್ಕೆ ಮಣಿದಿದೆ. ಬಿಡದಿ ಪ್ರಾಜೆಕ್ಟ್ ಬದಿಗಿಟ್ಟು ಸಿಎಂ ಬಡವರ ಬಗ್ಗೆ ಮಾತಾಡುವ ಪರಿಸ್ಥಿತಿಗೆ ಬಂದಿದ್ದಾರೆ. ಸಿಎಂ ಅವರು ಕುರ್ಚಿಯಿಂದ ಇಳಿದು ಈರುಳ್ಳಿಮೂಟೆ ಮೇಲೆ ಕೂತು ಕಾರ್ಮಿಕರ ಜೊತೆ ಸಂವಾದ ಮಾಡಿದ್ದಾರೆ. ಇವೆಲ್ಲವೂ ನಮ್ಮ ಹೋರಾಟದ ಪರಿಣಾಮ ಎಂದು ಟೀಕಾಪ್ರಹಾರ ಮಾಡಿದ್ರು.

ಬಳ್ಳಾರಿಗೆ ಪಾದಯಾತ್ರೆ ತಲುಪಲು ಕ್ಷಣಗಣನೆ ಇರುವಂತೆಯೇ ಸರ್ಕಾರ ನಮ್ಮ ಪಾದಯಾತ್ರೆಗೆ ತೊಂದರೆ ಕೊಡಲು ಶುರು ಮಾಡಿದೆ ಎಂದು ಬಿಜೆಪಿ ನಾಯಕರು ಕಿಡಿ ಕಾರಿದ್ದಾರೆ. ನಿನ್ನೆವರೆಗೂ ಪಾದಯಾತ್ರೆಯ ಬಹಿರಂಗ ಸಮಾವೇಶಕ್ಕೆ ಸ್ಥಳ ನೀಡಲು ಜಿಲ್ಲಾಡಳಿತ ಸತಾಯಿಸಿತ್ತು. ಇದಕ್ಕೆಲ್ಲಾ ಸರ್ಕಾರದ ಕುಮ್ಮಕ್ಕೇ ಕಾರಣ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದರು. ಆ ಬಳಿಕ ಕೆಲವು ಷರತ್ತುಗಳನ್ನ ಹಾಕಿ ಬಿಜೆಪಿ ನಾಯಕರು ಕೇಳಿದ್ದ ಮುನ್ಸಿಪಲ್ ಮೈದಾನವನ್ನೇ ಸಮಾವೇಶಕ್ಕೆ ಕೊಡಲಾಯಿತು. ಮತ್ತೊಂದೆಡೆ ಪಾದಯಾತ್ರೆ ಹಿನ್ನೆಲೆ ಬಳ್ಳಾರಿಯಲ್ಲಿ ಹಾಕಿದ್ದ ಬ್ಯಾನರ್ ಗಳನ್ನ ಮಹಾನಗರ ಪಾಲಿಕೆ ಸಿಬ್ಬಂದಿ ತೆರವು ಮಾಡಿದರು. ಇಂದು ಮತ್ತೇ ಬಿಜೆಪಿ ಬಾವುಟಗಳನ್ನೂ ತೆರವು ಮಾಡಲಾಗಿದೆ.

ಲಿಂಗಸಗೂರಿನಿಂದ ಪಾದಯಾತ್ರೆ ಆರಂಭಿಸಿರುವ ವಿಜಯೇಂದ್ರ ಮಾರ್ಗಮಧ್ಯದಲ್ಲಿ ಎಲ್ಲಾ ಕಡೆಗಳಲ್ಲೂ ನೊಂದ ಜನರ ಧ್ವನಿಯಾಗಿ, ಸಮಸ್ಯೆಗಳನ್ನ ಆಲಿಸುವ ಕೆಲಸ ಮಾಡಿದರು. ಪಾದಯಾತ್ರೆ ಅಂತಿಮ ಹಂತಕ್ಕೆ ಬಂದಿದ್ದು, ನಾಳೆ ಸಂಜೆ ಬಹಿರಂಗ ಸಮಾವೇಶ ನಡೆಯಲಿದೆ.


Spread the love

About Laxminews 24x7

Check Also

ತಮಿಳುನಾಡಿಗೆ ನೀರು ಹರಿಸುವ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ

Spread the loveಬೆಂಗಳೂರು: ತಮಿಳುನಾಡಿಗೆ ಪ್ರತಿದಿನ 6 ಸಾವಿರ ಕ್ಯೂಸೆಕ್ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ  …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ