Breaking News

ವಾಲ್ಮೀಕಿ ನಿಗಮ ಹಗರಣದಲ್ಲಿ ನಾಗೇಂದ್ರ ಪಾತ್ರವಿಲ್ಲ – ಸಿಎಂ ರಾಜಕೀಯ ಕಾರ್ಯದರ್ಶಿ ಪೊನ್ನಣ್ಣ ಸಮರ್ಥನೆ

Spread the love

ಮಡಿಕೇರಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ 8 ಎಫ್‌ಐಆರ್‌ಗಳ ತನಿಖೆ ಪೂರ್ಣಗೊಂಡಿದ್ದು, ಸಿಐಡಿ ಚಾರ್ಜ್‌ಶೀಟ್ ಸಲ್ಲಿಸಿದೆ ಎಂದು ಶಾಸಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎ.ಎಸ್ ಪೊನ್ನಣ್ಣ ತಿಳಿಸಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಸಿಐಡಿ ತನಿಖೆಯಲ್ಲಿ  ಸಚಿವ ನಾಗೇಂದ್ರ ಅವರ ಪಾತ್ರಕ್ಕೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ನಿಗಮದ ಹಣ ಬೇರೆ ಖಾತೆಗಳಿಗೆ ವರ್ಗಾವಣೆಯಾಗಿರುವುದು, ಹಣದ ದುರುಪಯೋಗ, ನಂತರ ಹಣ ವಾಪಸ್ ಪಡೆಯಲಾಗಿರುವ ಕುರಿತು ತನಿಖೆ ನಡೆದಿದೆ. ವಾಪಸ್ ಪಡೆದ ಹಣಕ್ಕೂ ನಾಗೇಂದ್ರ ಅವರಿಗೂ ಯಾವುದೇ ಸಂಬಂಧ ಇಲ್ಲ ಎಂದು ಅವರು ಹೇಳಿದ್ದಾರೆ.

ನಿಗಮದ ಯಾವುದೇ ಫೈಲ್‌ಗಳಲ್ಲಿ ಅಥವಾ ಹಣ ವರ್ಗಾವಣೆಯ ನಿರ್ಧಾರಗಳಲ್ಲಿ ಸಚಿವರ ಪಾತ್ರವಿದೆ ಎಂಬುದಕ್ಕೆ ಸಾಕ್ಷ್ಯ ದೊರೆತಿಲ್ಲ. ತನಿಖೆ ಕೂಡ ಪೂರ್ಣಗೊಂಡಿರುವ ಹಿನ್ನೆಲೆ ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದಿದ್ದಾರೆ.

ಇದೇ ವೇಳೆ ಇ.ಡಿ. ಮತ್ತು ಸಿಬಿಐ ತನಿಖೆಗಳ ಕುರಿತು ಪ್ರತಿಕ್ರಿಯಿಸಿದ ಪೊನ್ನಣ್ಣ, ಕೇಂದ್ರ ತನಿಖಾ ಸಂಸ್ಥೆಗಳ ತನಿಖೆಗಳು ರಾಜಕೀಯ ಪ್ರೇರಿತವಾಗಿವೆ. ತನಿಖೆಯಲ್ಲಿ ನಾಗೇಂದ್ರ ಅವರ ಪಾತ್ರವಿಲ್ಲ ಎಂಬುದು ಸಿಐಡಿ ಚಾರ್ಜ್‌ಶೀಟ್‌ನಲ್ಲಿ ಸ್ಪಷ್ಟವಾಗಿದೆ. ತಪ್ಪಿತಸ್ಥರಾಗಿದ್ದರೆ ನ್ಯಾಯಾಲಯ ತೀರ್ಮಾನಿಸಲಿ. ಆದರೆ ತನಿಖೆಯಿಂದ ಮುಕ್ತರಾದ ಬಳಿಕ ಅವರು ಏಕೆ ರಾಜೀನಾಮೆ ನೀಡಬೇಕು? ಎಂದು ಪ್ರಶ್ನಿಸಿದ್ದಾರೆ.


Spread the love

About Laxminews 24x7

Check Also

ತೊಂದರೆ ಆದ್ರೆ ಮಾತ್ರ ಕಾಯ್ದೆ ತೋರಿಸುತ್ತೀರಿ, ಅವಘಡ ಆಗಿದ್ರೆ ಯಾರು ಹೊಣೆ? – ದೇವಿಗೆರೆಯಲ್ಲಿ ಗಣೇಶ ವಿಸರ್ಜನೆಗೆ ಡಿಸಿ ಅಸಮಾಧಾನ

Spread the loveಹಾಸನ: ದೇವಿಗೆರೆಯಲ್ಲಿ ಗಣೇಶ ವಿಸರ್ಜನೆ  ವೇಳೆ ಯಾವುದಾದರೂ ಅವಘಡ ಸಂಭವಿಸಿದ್ದರೆ ಜಿಲ್ಲಾಡಳಿತ ಸಮಸ್ಯೆಗೆ ಸಿಲುಕುತ್ತಿತ್ತು. ಅದರ ಹೊಣೆಯನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ