Breaking News

ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಇಟ್ಟು ವಿಡಿಯೋ ಚಿತ್ರೀಕರಣ- ಸಿಕ್ಕಿಬಿದ್ದ ಆರೋಪಿ

Spread the love

ಮುಂಬೈ: ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಇಟ್ಟು ಮಹಿಳೆಯೋರ್ವಳ ವಿಡಿಯೋ ಚಿತ್ರೀಕರಣಕ್ಕೆ ಯತ್ನಿಸಿದ್ದ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಪ್ರಶಾಂತ್ ಸಿಂಗ್ (39) ಬಂಧಿತ ಆರೋಪಿ. ಮುಂಬೈನ ಅಗ್ರಿಪಾಡಾ ಪ್ರದೇಶದ ಸಾರ್ವಜನಿಕ ಶೌಚಾಲಯದಲ್ಲಿ ಬುಧವಾರ ಘಟನೆ ನಡೆದಿದ್ದು, ಗುರುವಾರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮಹಿಳೆ ಬುಧವಾರ ಮಧ್ಯಾಹ್ನ ಸಾರ್ವಜನಿಕ ಶೌಚಾಲಯಕ್ಕೆ ಹೋಗಿದ್ದರು. ಈ ವೇಳೆ ಪಕ್ಕದ ಶೌಚಾಲಯದಲ್ಲಿದ್ದ ಪ್ರಶಾಂತ್ ಸಿಂಗ್ ತನ್ನ ಮೊಬೈಲ್ ಅನ್ನು ಶೌಚಾಲಯದ ಕಿಟಕಿಯ ಬಳಿ ಇಟ್ಟಿದ್ದ. ಆದರೆ ಮಹಿಳೆ ಮೊಬೈಲ್ ಅನ್ನು ಗುರುತಿಸಿ ಗಾಬರಿಗೊಂಡಿದ್ದರು. ತಕ್ಷಣವೇ ಮೊಬೈಲ್ ಕಿತ್ತುಕೊಂಡು ಅಲ್ಲಿಂದ ಹೊರ ಬಂದರು.

ಮೊಬೈಲ್ ಕಿತ್ತುಕೊಳ್ಳುತ್ತಿದ್ದಂತೆ ಪಕ್ಕದ ಶೌಚಾಲಯದಲ್ಲಿ ಅಡಗಿಕೊಂಡಿದ್ದ ಪ್ರಶಾಂತ್ ಸಿಂಗ್ ಹೊರಗೆ ಬಂದು ಮೊಬೈಲ್ ಕೊಡುವಂತೆ ಮಹಿಳೆಗೆ ಒತ್ತಾಯಿಸಿದ್ದ. ಆದರೆ ಅವರು ಘಟನೆ ಬಗ್ಗೆ ತನ್ನ ಸಹೋದರ ಮತ್ತು ಪ್ರದೇಶದ ಇತರ ನಿವಾಸಿಗಳಿಗೆ ತಿಳಿಸಿದ್ದರು. ಈ ವೇಳೆ ಫೋನ್‍ನಲ್ಲಿ ಮಹಿಳೆ ವಿಡಿಯೋ ಕೂಡ ಸಿಕ್ಕಿದೆ. ತಕ್ಷಣವೇ ಮೊಬೈಲ್ ಪೊಲೀಸರಿಗೆ ಒಪ್ಪಿಸಿ ದೂರು ನೀಡಿದ್ದರು.


Spread the love

About Laxminews 24x7

Check Also

ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ

Spread the loveಬೆಂಗಳೂರು: ರಾಮ ಮಂದಿರ ದೇಣಿಗೆ ಹಗರಣವನ್ನು ಬಿಜೆಪಿ ಮುಚ್ಚಿ ಹಾಕೋಕೆ ಪ್ರಯತ್ನ ಮಾಡ್ತಿದೆ ಅಂತ ಗೃಹ ಸಚಿವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ