Breaking News

ಸಭಾಪತಿ ಬಂದಾಗ ಬಾಗಿಲು ಹಾಕಿ, ಉಪಸಭಾಪತಿಯನ್ನು ಪೀಠದಲ್ಲಿ ಕೂರಿಸಿದ್ದೆ ಮಹಾಪರಾಧ; ಸಿದ್ದರಾಮಯ್ಯ

Spread the love

ಬೆಂಗಳೂರು; ಪರಿಷತ್​ನಲ್ಲಿ ಪ್ರಜಾಪ್ರಭುತ್ವ ಯಾವ ರೀತಿ ಕಗ್ಗೊಲೆ ಆಯ್ತು ಅಂತಾ ನಾನು ನೋಡಿದೆ. ಸಭಾಪತಿ ವಿದೇಶಕ್ಕೆ ಹೋದಾಗ, ಅನಾರೋಗ್ಯ ಇದ್ದಾಗ, ನನ್ನ ಗೈರು ಹಾಜರಿಯಲ್ಲಿ ಕೆಲಸ ಮಾಡಿ ಅಂತಾ ಉಪಸಭಾಪರಿಗೆ ಹೇಳ್ತಾರೆ. ರೂಲ್ಸ್ ಬುಕ್ ಕೂಡ ಮಾಡಿಕೊಂಡಿದ್ದೇವೆ. ರೂಲ್ಸ್ ಕಮಿಟಿ ರೂಲ್ಸ್ ಮಾಡಿರ್ತಾರೆ. ಈ ನಿಯಮಾವಳಿಗಳ ಚೌಕಟ್ಟಿನಲ್ಲಿ ಸಭಾಪತಿಗಳು ಸದನ ನಡೆಸುತ್ತಾರೆ. ಗುರುವಾರ 10ನೇ ತಾರೀಖು ಸಭಾಪತಿ ಸದನ ನಡೆಸಿದ್ದಾರೆ. ಕಾನೂನು ಸಚಿವರ ಆದೇಶದ ಮೇರೆಗೆ ಕೌನ್ಸಿಲ್‌ ಮೀಟಿಂಗ್ ಕರೆದು ಆ ಲೆಟರ್ ನಲ್ಲಿ ಡಿಸ್ಕಷನ್ ಮಾಡಿ ಆ ಮೂಲಕ ನೋ ಕಾನ್ಫರೆನ್ಸ್ ಮೋಶನ್ ಮೂ ಮಾಡುತ್ತಾರೆ. ಆದರೆ ಈ ರೀತಿಯಲ್ಲಿ ಮಾಡದೆ 15ನೇ ತಾರೀಖಿನಂದು ಪರಿಷತ್ ನಡೆಸಿ ಎಂದು ಇದೆ. ಆದರೆ ಇದು ಆರ್ಡರ್ ಪ್ರಕಾರ ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಪರಿಷತ್​ನಲ್ಲಿ ನಡೆದ ಹೈಡ್ರಾಮಾದ ಬಳಿಕ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ರಾಜ್ಯಪಾಲರ ಭೇಟಿಗೆ ತೆರಳಿದ ನಂತರ ತುರ್ತು ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ ಅವರು, ನೋಟಿಸ್ ನೀಡಿದ 14 ದಿನ ಆದ ನಂತರ 5 ದಿನಗಳ ಒಳಗೆ ಅವಿಶ್ವಾಸ ನಿರ್ಣಯ ಮಾಡಬೇಕು ಎಂದು ಇದೆ. ಆದರೆ ಎಲ್ಲಿ ಮಾಡಿದ್ದಾರೆ ಇದನ್ನೆಲ್ಲಾ. ಕೌಲ್ ಅಂಡ್ ಸೆಕ್ಟರ್ ಅವರ ಪ್ರಕಾರ ಕಾರಣಗಳನ್ನು ಅಟ್ಯಾಚ್ ಮಾಡಬೇಕು. ಆದರೆ ಯಾವುದನ್ನು ಅಟ್ಯಾಚ್ ಮಾಡಿಲ್ಲ, ಅದಕ್ಕೆ ಆರ್ಡರ್ ಪ್ರಕಾರ ಇಲ್ಲ ಅಂತ ರಿಜೆಕ್ಟ್ ಮಾಡಿದ್ದಾರೆ. ಚೇರ್ಮನ್ ಬರುವುದಕ್ಕೆ ಮುಂಚೆ ಬೆಲ್ ಆಗುತ್ತೆ. ಆ ನಂತರ ಮಾರ್ಷಲ್ ಸಭಾಪತಿ ಬಂದ್ರು ಅಂತ ಹೇಳುತ್ತಾರೆ. ಆ ನಂತರ ಅವರು ಬರುತ್ತಾರೆ. ಆದರೆ ಇದನ್ನು ಅವರು ಫಾಲೊ ಮಾಡಿಲ್ಲ.  ಚೇರ್ಮನ್ ಬರುವ ಬಾಗಿಲನ್ನು ಚಿಲಕ ಹಾಕಿಸಿದ್ದಾರೆ. ಸಭಾಪತಿ ಬರುವುದಕ್ಕೆ ಬಿಟ್ಟಿಲ್ಲ.  ಬೆಲ್ ಆಗುವಾಗ ಉಪಸಭಾಪತಿ ಕೂರಿಸಿದ್ದಾರೆ. ಇದು ಪ್ರಜಾಪ್ರಭುತ್ವನಾ, ಅಥವಾ ನರೇಂದ್ರ ಮೋದಿ ಪ್ರಜಾಪ್ರಭುತ್ವನಾ ಎಂದು ಪ್ರಶ್ನಿಸಿ, ಇದು ಅಸಂವಿಧಾನಿಕ, ಕಾನೂನು ವಿರುದ್ಧವಾದದ್ದು ಎಂದು ಗುಡುಗಿದರು.


Spread the love

About Laxminews 24x7

Check Also

ಭಗವದ್ಗೀತೆ ಜೀವನಕ್ಕೆ ಮಾರ್ಗದರ್ಶನ ಮಾಡುವ ಗ್ರಂಥ : ವಿನೋದ ದೇಶಪಾಂಡೆ

Spread the love ಬೆಳಗಾವಿ : ಭಗವದ್ಗೀತೆ ಪ್ರತಿಯೊಬ್ಬರ ಜೀವನಕ್ಕೆ, ಇಡೀ ಮಾನವ ಕುಲಕ್ಕೆ ಮಾರ್ಗದರ್ಶನ ಮಾಡುವ ಗ್ರಂಥ ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ