Breaking News

S.S.L.C.  ಪರೀಕ್ಷೆ ಮುಗಿಸಿ‌ ಬೈಕ್​ನಲ್ಲಿ ತಮ್ಮೂರಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳಿಗೆ ಲಾರಿ ಡಿಕ್ಕಿ

Spread the love

ಗದಗ: ಎಸ್ಎಸ್ಎಲ್ ಸಿ  ಪರೀಕ್ಷೆ ಮುಗಿಸಿ‌ ಬೈಕ್​ನಲ್ಲಿ ತಮ್ಮೂರಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳಿಗೆ ಲಾರಿ ಡಿಕ್ಕಿಯಾಗಿ ಮೂವರು ಗಂಭೀರ ಗಾಯವಾಗಿರುವ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಬಾಗೇವಾಡಿ ಗ್ರಾಮದ ಬಳಿ  ಸಂಭವಿಸಿದೆ.

ಸಿದ್ದಪ್ಪ ತಳವಾರ, ಈರಣ್ಣ ಬಡಿಗೇರ ಹಾಗೂ ಮೈಲಾರಿ ಯಳವತ್ತಿ ಎಂಬ  ವಿದ್ಯಾರ್ಥಿಗಳಿಗೆ ಗಂಭೀರ ಗಾಯವಾಗಿದ್ದು, ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಎಸ್ಎಸ್ಎಲ್ ಸಿ  ಪರೀಕ್ಷೆ ನಿಮಿತ್ತ ಪಕ್ಕದ ಕಲಕೇರಿ‌ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಮುಗಿಸಿದ ಮೂವರು ವಿದ್ಯಾರ್ಥಿಗಳು ಬೈಕ್​ನಲ್ಲಿ ತಮ್ಮೂರಿಗೆ ತೆರಳುವ ವೇಳೆ ಈ ಅಪಘಾತವಾಗಿದೆ.

ಮುಂಡರಗಿ ಮಾರ್ಗವಾಗಿ ಹೋಗುತ್ತಿದ್ದ ಲಾರಿ, ಟಿಪ್ಪರ್ ಓವರ್​ಟೇಕ್ ಮಾಡಲು ಹೋಗಿ ಈ ಅಪಘಾತ ಸಂಭವಿಸಿದೆ. ರಸ್ತೆ ಬದಿಯಲ್ಲಿ ನಿಂತಿದ್ದ ವೈದ್ಯರೊಬ್ಬರ ವಾಹನಕ್ಕೂ ಲಾರಿ ಡಿಕ್ಕಿ ಹೊಡೆದಿಯಿತು ಎಂದು ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸದ್ಯ ಮೂವರು ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದ್ದು ಮುಂಡರಗಿ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ‌ ಬಳಿಕ ಗದಗನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಮುಂಡರಗಿ ಪೊಲಿಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ಜರುಗಿದೆ.


Spread the love

About Laxminews 24x7

Check Also

ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗೆ ಕಾರ್ಯಾಗಾರ, ಶೈಕ್ಷಣಿಕ ಸಮಾವೇಶ

Spread the loveಗದಗ: ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ, ರಾಜ್ಯ ಘಟಕ, ಗದಗ ಜಿಲ್ಲಾ ಘಟಕ ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ