Breaking News
Home / ಜಿಲ್ಲೆ / ಬೆಳಗಾವಿ / ಒಟ್ಟು 9 ಮನೆಗಳಿಗೆ ತಲಾ 1 ಲಕ್ಷ ರೂ.ಗಳಂತೆ 9 ಲಕ್ಷ ರೂ. ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಧನಸಹಾಯ:ಹೆಬ್ಬಾಳಕರ್

ಒಟ್ಟು 9 ಮನೆಗಳಿಗೆ ತಲಾ 1 ಲಕ್ಷ ರೂ.ಗಳಂತೆ 9 ಲಕ್ಷ ರೂ. ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಧನಸಹಾಯ:ಹೆಬ್ಬಾಳಕರ್

Spread the love

ಬೆಳಗಾವಿ: ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯಲ್ಲಿ ಆಕಸ್ಮಿಕ ಬೆಂಕಿಯಿಂದ ಮನೆಗಳು ಸುಟ್ಟು ಆರ್ಥಿಕ ನಷ್ಟಕ್ಕೀಡಾಗಿದ್ದವರಿಗೆ  ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ ಮನವಿಗೆ ಸ್ಪಂದಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಟ್ಟು 9 ಮನೆಗಳಿಗೆ ತಲಾ 1 ಲಕ್ಷ ರೂ.ಗಳಂತೆ 9 ಲಕ್ಷ ರೂ. ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಧನಸಹಾಯ ಮಂಜೂರು ಮಾಡಿದ್ದಾರೆ

 ಹಲಗಾ, ಹಿರೇ ಬಾಗೇವಾಡಿ ಹಾಗೂ ಬಡಸ್ ಕೆ ಹೆಚ್ ಗ್ರಾಮಗಳಲ್ಲಿ ಆಕಸ್ಮಿಕವಾಗಿ ಬೆಂಕಿ ಅನಾಹುತ ಉಂಟಾಗಿತ್ತು. ಅನೇಕ ಮನೆಗಳು ಬೆಂಕಿಗೆ ಆಹುತಿಯಾಗಿರುವ ಹಿನ್ನೆಲೆಯಲ್ಲಿ ಸಂತ್ರಸ್ತರ ಕಷ್ಟಗಳಿಗೆ ಸ್ಪಂದಿಸಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಹಾನಿಗೀಡಾದ ಮನೆಗಳಿಗೆ ಪರಿಹಾರ ನೀಡುವ ಸಲುವಾಗಿ ಲಕ್ಷ್ಮಿ ಹೆಬ್ಬಾಳಕರ್ ಮನವಿ ಪತ್ರಗಳನ್ನು ಸಲ್ಲಿಸಿದ್ದರು.
ಹಲಗಾದ ಶಾಂತಿನಾಥ ಚಿಕ್ಕಪರಪ್ಪ ದೇಸಾಯಿ, ನಭಿರಾಜ ಪಾಯಪ್ಪ ಚಿಕ್ಕಪರಪ್ಪ, ವಸಂತ ಜಿನ್ನಪ್ಪ ಚಿಕ್ಕಪರಪ್ಪ, ಸುನೀಲ ಜಿನ್ನಪ್ಪ ದೇಸಾಯಿ, ಭರತೇಶ ದೆವಪ್ಪ ಚಿಕ್ಕಪರಪ್ಪ, ಹಿರೇಬಾಗೇವಾಡಿಯ ಶಿವರಾಯಪ್ಪ ಸಿದ್ದಲಿಂಗಪ್ಪ ಗಾಣಗಿ, ಗಜೇಂದ್ರನಾಥ ಗುರಪ್ಪ ಅಗಸಿಮನಿ, ಚಂದ್ರಪ್ಪ ಅಪ್ಪಯಪ್ಪ ಅಗಸಿಮನಿ, ಮಂಜುನಾಥ ಅಪ್ಪಯ್ಯಪ್ಪ ಅಗಸಿಮನಿ ಹಾಗೂ ಬಡಸ್ ಕೆಎಚ್ ನ ಮಾರುತಿ ರುದ್ರಪ್ಪ ಕರಡಿ ಇವರ ಮನೆಗಳು ಬೆಂಕಿಗೆ ಆಹುತಿಯಾಗಿದ್ದವು.
 ಅದರಂತೆಯೇ ಮುಖ್ಯಮಂತ್ರಿಗಳು 9 ಸಂತ್ರಸ್ತರಿಗೆ ಒಂದು ಲಕ್ಷ ರೂ. ಗಳ ಪರಿಹಾರದಂತೆ ಒಟ್ಟು 9 ಲಕ್ಷ ರೂ,ಗಳನ್ನು ಬಿಡುಗಡೆ ಮಾಡಲು ಸೂಚಿಸಿದ್ದಾರೆ. ಆದಷ್ಟು ಬೇಗ ಸಂತ್ರಸ್ತರಿಗೆ ಪರಿಹಾರದ ಚೆಕ್ ಗಳನ್ನು ಹಸ್ತಾಂತರಿಸುತ್ತೇನೆ ಎಂದು ಹೆಬ್ಬಾಳಕರ್ ತಿಳಿಸಿದ್ದಾರೆ.

Spread the love

About Laxminews 24x7

Check Also

ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಕ್ಕೆ ಚಾನ್ಸೇ ಇಲ್ಲ

Spread the love ಹಾವೇರಿ : ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಎಲ್ಲಾ ಪಕ್ಷದ ನಾಯಕರುಗಳು ಅಭ್ಯರ್ಥಿಗಳು ಪರಸ್ಪರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ