Breaking News

ಸೀರಿಯಲ್ ಚಿತ್ರೀಕರಣಕ್ಕೆ ಕುತ್ತು ತಂದ ಕೊರೊನಾ.!

Spread the love

ಕೊರೊನಾ ಮಹಾಮಾರಿ ಯಾವ ವಲಯವನ್ನೂ ಬಿಡದೆ ಕಾಡುತ್ತಿದೆ. ಸ್ವಲ್ಪ ಯಾಮಾರಿದರೂ ಎಲ್ಲಿ ಸೋಂಕು ತಗುಲುತ್ತದೆಯೋ ಎಂಬ ಭಯ ಆವರಿಸಿಕೊಂಡಿದೆ. ಲಾಕ್‌ಡೌನ್ ಸಡಿಲದ ನಂತರ ಕೊರೊನಾ ಸೋಂಕು ತನ್ನ ಆರ್ಭಟವನ್ನು ಹೆಚ್ಚು ಮಾಡಿದೆ.

ಲಾಕ್‌ಡೌನ್‌ನಿಂದಾಗಿ ಸೀರಿಯಲ್ ಹಾಗು ಸಿನಿಮಾ ಶೂಟಿಂಗ್ ಸ್ಥಗಿತಗೊಳಿಸಲಾಗಿತ್ತು. ಆದರೆ ಲಾಕ್‌ಡೌನ್ ಸಡಿಲಿಕೆಯ ನಂತರ ಮತ್ತೆ ಶೂಟಿಂಗ್‌ಗೆ ಅನುಮತಿ ನೀಡಲಾಗಿತ್ತು. ಇದೀಗ ಶೂಟಿಂಗ್ ಸ್ಥಳಕ್ಕೂ ಕೊರೊನಾ ದಾಂಗುಡಿ ಇಟ್ಟಿದೆ.

ಹೌದು, ಇದು ಹೈದರಾಬಾದ್‌ನಲ್ಲಿ ನಡೆದಿರುವ ಘಟನೆ. ಇಲ್ಲಿನ ಸೀರಿಯಲ್ ನಟರೊಬ್ಬರಿಗೆ ಪಾಸಿಟಿವ್ ಆಗಿದೆ. ಹೀಗಾಗಿ ಆ ಧಾರಾವಾಹಿ ಶೂಟಿಂಗ್ ಸ್ಥಗಿತಗೊಳಿಸಲಾಗಿದೆ. ಇನ್ನು ಈ ಸೀರಿಯಲ್ ನಟ ಮತ್ತೆರಡು ಧಾರಾವಾಹಿಯಲ್ಲಿ ಪಾಲ್ಗೊಂಡಿದ್ದರಂತೆ ಹಾಗಾಗಿ ಆ ಧಾರಾವಾಹಿ ಶೂಟಿಂಗ್‌ಗಳನ್ನು ಸ್ಥಗಿತಗೊಳಿಸಿದ್ದು, ಎಲ್ಲರನ್ನೂ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.


Spread the love

About Laxminews 24x7

Check Also

ಯುದ್ಧದ ನಡುವೆಯೇ ಇರಾನ್‌ನಲ್ಲಿ ಭೂಕಂಪ

Spread the loveಟೆಹ್ರಾನ್‌: ಅಮೆರಿಕ-ಇಸ್ರೇಲ್‌ ಹಾಗೂ ಗಲ್ಫ್‌ ರಾಷ್ಟ್ರಗಳ ವಿರುದ್ಧ ಯುದ್ಧದ ನಡುವೆಯೇ ಇರಾನ್‌ನಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ