Breaking News
Home / ಜಿಲ್ಲೆ / ಬೆಳಗಾವಿ / ಗೋಕಾಕ / ಸರಕಾರದ ನಿಯಮಗಳನ್ನು ಕೋವಿಡ್ 19 ಬಗ್ಗೆ ಜನರಿಗೆ ತಲುಪಿಸುವಲ್ಲಿ ಪತ್ರಕರ್ತರ ಪಾತ್ರ ಮಹತ್ವದಾಗಿದೆ : ಡಾ.ಜಗದೀಶ ಜಿಂಗಿ

ಸರಕಾರದ ನಿಯಮಗಳನ್ನು ಕೋವಿಡ್ 19 ಬಗ್ಗೆ ಜನರಿಗೆ ತಲುಪಿಸುವಲ್ಲಿ ಪತ್ರಕರ್ತರ ಪಾತ್ರ ಮಹತ್ವದಾಗಿದೆ : ಡಾ.ಜಗದೀಶ ಜಿಂಗಿ

Spread the love

ಗೋಕಾಕ :ಕೊರೋನಾ ವೈರಸ್ ಹರಡದಂತೆ ತಡೆಗಟ್ಟಲು ಸರಕಾರದ ನಿಯಮಗಳನ್ನು ಜನರಿಗೆ ತಲುಪಿಸುವಲ್ಲಿ ಪತ್ರಕರ್ತರ ಪಾತ್ರ ಮಹತ್ವದಾಗಿದೆ ಎಂದು ತಾಲೂಕಾ ವೈದ್ಯಾಧಿಕಾರಿ ಡಾ.ಜಗದೀಶ ಜಿಂಗಿ ಹೇಳಿದರು.

ಬುಧವಾರದಂದು ನಗರದ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಆಶಾ ಕಾರ್ಯಕರ್ತಯರಿಗೆ ಹಾಗೂ ಪತ್ರಕರ್ತರಿಗೆ ರೋಗ ನಿರೋಧ ಶಕ್ತಿ ಹೆಚ್ಚಿಸುವ ಚವನಪ್ರಾಶ್ ವಿತರಿಸಿ ಅವರು ಮಾತನಾಡಿದರು.

ಆಶಾ ಕಾರ್ಯಕರ್ಯರು , ಪೊಲೀಸರಂತೆ ಜೀವದ ಹಂಗು ತೊರೆದು ಪತ್ರಕರ್ತರು ಸಹ ಕೊರೋನಾ ವೈರಸ್ ಹರದಂತೆ ಜನರಲ್ಲಿ ಜಾಗೃತಿ ಮೂಡಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಇವರ ಕಾರ್ಯವನ್ನು ಶ್ಲಾಘಿಸಿದ ಅವರು ಜನತೆಯು ಧೈರ್ಯದಿಂದ ಈ ರೋಗವನ್ನು ಎದುರಿಸಿ ನಿಮ್ಮೊಂದಿಗೆ ಆರೋಗ್ಯ ಇಲಾಖೆಯು ಸದ್ದಾ ಇದ್ದು ತಕ್ಷಣ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತದೆ. ಜನತೆ ಗೊಂದಲಕ್ಕೆ ಒಳಗಾಗದೆ ಸರಕಾರದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಾಮಾಜಿಕ ಅಂತರದೊಂದಿಗೆ ಮಾಸ್ಕ ಧರಿಸಬೇಕು.
ಕೋರೋನಾ ಸೋಂಕಿತರನ್ನು ಅಶ್ಪೃರಷ್ಯರಂತೆ ಕಾಣದೆ ಅವರಲ್ಲಿ ಆತ್ಮಸ್ಥೈರ್ಯ ತುಂಬುವಂತ ಕಾರ್ಯ ಮಾಡಬೇಕು.
ಕೊರೋನಾ ಲಕ್ಷಣಗಳು ಕಂಡು ಬಂದರೆ ಈಗ ಸರಕಾರ ಹೊಸ ನಿಯಮದಂತೆ ಮನೆಯಲ್ಲೇ ಚಿಕಿತ್ಸೆ ಮಾಡಲಾಗುತ್ತಿದೆ. ಅವಶ್ಯಕತೆ ಬಿದ್ದರೆ ಮಾತ್ರ ಜಿಲ್ಲಾಸ್ಪತ್ರೆಗೆ ಕಳುಹಿಸಕೊಡಲಾಗುವದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಾ.ಪ್ರೀತಿ ವಣ್ಣೂರ , ಡಾ.ಬಿ.ಬಿ.ಕೋಣಿ , ಡಾ.ಸರೋಜನಿ ಮಾವರಕರ ಉಪಸ್ಥಿತರಿದ್ದರು


Spread the love

About Laxminews 24x7

Check Also

ಗೋಕಾಕ: ಮಾರ್ಚ್ 28ರಂದು ಕಾಂಗ್ರೆಸ್ ಕಾರ್ಯಕರ್ತರ ಸಭೆ

Spread the loveಗೋಕಾಕ: ಬೆಳಗಾವಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾರ್ಚ್ 28ರಂದು ಬೆಳಿಗ್ಗೆ 11 ಗಂಟೆಗೆ ನಗರದ ಮಹಾಲಕ್ಷ್ಮಿ ಸಭಾಭವನದಲ್ಲಿ ಗೋಕಾಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ