Breaking News

ಆಸ್ತಿ ವಿವಾದಕ್ಕೆ ಬೆಳಗಾವಿ ಅಂಬೇವಾಡಿ ಗ್ರಾಮದಲ್ಲಿ ಫೈರಿಂಗ್

Spread the love

ಬೆಳಗಾವಿ:ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸೋದರ ಮಾವನೇ ತನ್ನ ಅಳಿಯನ ಮೇಲೆ ಫೈರಿಂಗ್ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ  ಅಂಬೇವಾಡಿ ಗ್ರಾಮದಲ್ಲಿ ನಡೆದಿದೆ.

ಅಮಿತ್ ಪಾವಲೆ (35) ಎಂಬಾತನ  ಬಲಗೈ ಭುಜಕ್ಕೆ ಗುಂಡು ತಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ.


ಅಂಬೇವಾಡಿ ಗ್ರಾಮದಲ್ಲಿ ನೆಲೆಸಿರುವ ಕಾತ್ಸು ತರಳೆ (47) ಎಂಬಾತನಿಂದ ಕೃತ್ಯ ನಡೆದಿದೆ.
ಗಾಯಗೊಂಡಿರುವ ಅಮಿತ್ ಎಂಬಾತ ಕಾತ್ಸು ಸಹೋದರಿ ಪುತ್ರನಾಗಿದ್ದಾನೆ.
ಎರಡು ಕುಟುಂಬ ನಡುವಿನ ಜಮೀನು ವಿವಾದ ಕೋರ್ಟ್ ಅಲ್ಲಿಇತ್ತೀಚಿಗೆ ಇತ್ಯರ್ಥಗೊಂಡಿತ್ತು. ಅಮಿತ್ ಪಾವಲೆ ಪರವಾಗಿ ಜಮೀನು ವಿವಾದ ಕುರಿತು ತೀರ್ಪು ಬಂದಿತ್ತು.
ಇದರಿಂದ ಕುಪಿತಗೊಂಡ ಕಾತ್ಸು ತರಳೆ ಸಹೋದರಿ ಪುತ್ರ ಅಮಿತ್ ಮೇಲೆ ಫೈರಿಂಗ್ ಮಾಡಿ ಪರಾರಿಯಾಗಿದ್ದಾನೆ. ಗಾಯಗೊಂಡಿರುವ ಅಮಿತ್ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ‌ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳಗಾವಿ ಗ್ರಾಮೀಣ‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??


Spread the love

About Laxminews 24x7

Check Also

ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನದ ಪೂರ್ವಭಾವಿ ಸಭೆ

Spread the loveಬೆಳಗಾವಿ: ನವದೆಹಲಿಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನಕ್ಕಾಗಿ ಬೆಳಗಾವಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ