Breaking News

ಧುಮ್ಮಿಕ್ಕಿ ಹರಿದ ದೂಧಸಾಗರ ಜಲಪಾತ : ಬೆಳಗಾವಿ-ಗೋವಾ ರೈಲು ಸಂಚಾರ ಸ್ಥಗಿತ

Spread the love

ಪಣಜಿ: ಗೋವಾ ಮತ್ತು ಕರ್ನಾಟಕದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಗೋವಾದ ಜಗತ್ಪ್ರಸಿದ್ಧ ದೂಧಸಾಗರ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದ್ದು ಈ ಭಾಗದಲ್ಲಿ ದಟ್ಟ ಮಂಜು ಆವರಿಸಿರುವ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಿಗ್ಗೆ ಬೆಳಗಾವಿ-ಗೋವಾ ರೈಲು ಸಂಚಾರ ಸ್ಥಗಿತಗೊಂಡಿದೆ.

ಗೋವಾದ ದೂಧಸಾಗರ ಜಲಪಾತದ ಬಳಿ ಭಾರಿ ಪ್ರಮಾಣದಲ್ಲಿ ಮಂಜುಗಟ್ಟಿದ್ದು ಶುಕ್ರವಾರ ಬೆಳಿಗ್ಗೆ ಬೆಳಗಾವಿ -ವಾಸ್ಕೊಡಗಾಮಾ ರೈಲು ಸಂಚಾರ ಜಲಪಾತದ ಬಳಿಯೇ ಸ್ಥಗಿತಗೊಂಡಿದೆ.

ಕೊಂಕಣ ರೈಲು ಹಳಿಗಳ ಮೇಲೆ ಮಳೆಗೆ ಗುಡ್ಡ ಕುಸಿತವುಂಟಾಗಿರುವುದರಿಂದಲೂ ಮುಂಬಯಿ ಮತ್ತು ವಿವಿದೆಡೆಯಿಂದ ಗೋವಾಕ್ಕೆ ಕೆಲ ರೈಲು ಸಂಚಾರ ಬಂದ್ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ.


Spread the love

About Laxminews 24x7

Check Also

ಗೌರವಯುತವಾಗಿ ನಡೆದುಕೊಳ್ಳಬೇಕು ಎಂದರೆ ಘರ್ಷಣೆ ಬೇಡ ಎಂದರ್ಥ: ಶಿವಲಿಂಗೇಗೌಡ ಸ್ಪಷ್ಟನೆ

Spread the loveಹಾಸನ: ಗೌರವಯುತವಾಗಿ ನಡೆದುಕೊಳ್ಳಬೇಕು ಎಂದರೆ ಘರ್ಷಣೆ ಬೇಡ ಎಂದು ಅರ್ಥ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ