Breaking News

ವಂಚನೆ ಪ್ರಕರಣ: ಮಹಿಳೆಯ ಹಿಂದಿರುವವರ ಪತ್ತೆಗೆ ನಟ ದರ್ಶನ್ ಒತ್ತಾಯ

Spread the love

ಮೈಸೂರು, 25 ಕೋಟಿ ರೂಪಾಯಿ ಬ್ಯಾಂಕ್ ಸಾಲ ಶೂರಿಟಿ ಸಂಬಂಧಿಸಿದಂತೆ ವಂಚಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಇಂದು ಹೆಚ್ಚಿನ ಮಾಹಿತಿ ನೀಡಿದ್ದಾರೆ. ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜೂನ್ 16ರಂದು ನನಗೆ ಈ ಸಂಬಂಧ ಮೊದಲ ಕರೆ ಬಂದಿತ್ತು ಎಂದು ಹೇಳಿದರು.
ನನ್ನ ತೋಟದ ಮನೆ ಸೇರಿದಂತೆ ಹಲವು ಆಸ್ತಿಗಳ ಕುರಿತು ಪರಿಶೀಲನೆ ನಡೆಸಬೇಕು ಎಂದು ಬ್ಯಾಂಕ್ ಅಧಿಕಾರಿ ಎಂದು ಹೇಳಿದ್ದ ವ್ಯಕ್ತಿಯೊಬ್ಬರು ತಿಳಿಸಿದರು ಎಂದು ದರ್ಶನ್ ಬಹಿರಂಗಪಡಿಸಿದರು.ಅರುಣ್ ಕುಮಾರಿ ಎಂಬವರು ಈ ಸಂಬಂಧ ತಮ್ಮನ್ನು ನಂಬಿಸಲು ಪ್ರಯತ್ನಿಸಿದರು ಎಂದು ದರ್ಶನ್ ತಿಳಿಸಿದರು.

ಜೂನ್ ತಿಂಗಳಿನಲ್ಲಿ ಉಮಾಪತಿಯವರ ಕರೆ ಬಂದು ಅವರು ಶೂರಿಟಿ ಹಾಕಿದ್ದೀರ ಎಂದು ಕೇಳಿದರು. ಕಾನ್ಫರೆನ್ಸ್ ಕಾಲ್ ನಲ್ಲಿ ಅರುಣಾ ಕುಮಾರಿಯವರು ಇದ್ದರು. ಆಗ ಅವರು 25 ಕೋಟಿ ಸಾಲಕ್ಕೆ ತಾವು ಶೂರಿಟಿ ಹಾಕಿರುವುದಾಗಿ ಅರುಣಾ ಕುಮಾರಿಯವರು ತಮ್ಮ ನಿವಾಸದಲ್ಲಿ ತಿಳಿಸಿದ್ದು, ತಮ್ಮ ಆಪ್ತರಾದ ಹರ್ಷರವರು ಹೀಗೆ ಮಾಡಿರುವುದಾಗಿ ಹೇಳಿದರು. ನಂತರ ಹರ್ಷ ಹಾಗೂ ರಾಕಿಯವರ ಬಗ್ಗೆ ವಿಚಾರಿಸಿದ್ದು, ಅವರು ಯಾರು ಈ ಕೆಲಸ ಮಾಡಿಲ್ಲವೆಂದು ತಿಳಿಯಿತು.
ಅರುಣಾ ಕುಮಾರಿಯವರು ತಮ್ಮ ತೋಟದ ಬಗ್ಗೆ ಮಾತಾಡಿ ಅಲ್ಲಿಗೆ ಒಮ್ಮೆ ಹೋಗಬೇಕೆಂದು ಹೇಳಿ ತೋಟಕ್ಕೆ ಭೇಟಿ ನೀಡಿದರು. ತೋಟದಲ್ಲಿ ಹರ್ಷ ಅವರನ್ನು ನೋಡಿ ಅರುಣಾ ಕುಮಾರಿಯವರು ಶಾಕ್ ಆಗಿದ್ದು, ತೋಟದಿಂದ ಅರುಣಾಕುಮಾರಿಯವರು ಯಾರಿಗೋ ಕರೆ ಮಾಡಿದರು. ಅವರು ಗಾಬರಿಯಾಗಿಗಿದ್ದು ಕಂಡು ಬಂತು. ಬ್ಯಾಂಕಿಗೆ ಹೋಗಿ ವಿಚಾರಿಸಿದಾಗ ಆ ಹೆಸರಿನವರು ತಮ್ಮ ಬ್ಯಾಂಕ್ ಉದ್ಯೋಗಿ ಅಲ್ಲ ಎಂಬುದು ತಿಳಿದು ಬಂತು. ನಂತರ ಉಮಾಪತಿಯವರೊಂದಿಗೂ ಮತ್ತೆ ವಿಚಾರಿಸಿ ಅವರಿಗೂ ಒಂದು ದೂರು ನೀಡಲು ನಿರ್ಧರಿಸಿ, ಅರುಣಾ ಕುಮಾರಿ ಸತ್ಯ ಹೇಳಲು ತಮ್ಮ ನಿವಾಸಕ್ಕೆ ಬಂದು, ಇದೆಲ್ಲ ಮಾಡಿಸಿದ್ದು ಉಮಾಪತಿ ಎಂದು ಹೇಳಿದ್ದರು ಎಂದರು.

ಇದರಲ್ಲಿ ಯಾರ ಕೈವಾಡ ಇದೆ ಎಂಬುದು ತಿಳಿದಿಲ್ಲ. ಅರುಣಾ ಕುಮಾರಿ, ಉಮಾಪತಿ, ಹರ್ಷ, ರಾಕಿ ಯಾರೆ ಆದರೂ ಇದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು. ಆದರೆ ಇದರಲ್ಲಿ ಅರುಣಾ ಕುಮಾರಿ ಜೊತೆ ಉಮಾಪತಿ ಕೈ ಜೋಡಿಸಿದ್ದಾರಾ ಎಂಬುದು ಬಗೆಹರಿಯ ಬೇಕಾಗಿರುವ ವಿಷಯ ಎಂದು ಹೇಳಿದರು


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ