Breaking News

ತಂಗಿ ಮದುವೆ ನಿರಾಕರಿಸಿದ್ಲು ಅಂತ, ಅಣ್ಣ ಹೀಗ್ ಮಾಡೋದಾ.?!

Spread the love

ರಾಯಚೂರು: ನಿಶ್ಚಿತಾರ್ಥವಾಗಿದ್ದ ಹುಡುಗ ಕಪ್ಪು ‌ಎಂಬ ಕಾರಣಕ್ಕೆ ಮದುವೆ ನಿರಾಕರಣೆ ಮಾಡಿದ್ದ ಯುವತಿಯನ್ನು ಅಣ್ಣನೇ ಕೊಲೆಗೈದ ಘಟನೆ ಜಿಲ್ಲೆ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ನಡೆದಿದೆ.

ಚಂದ್ರಕಲಾ (22) ಕೊಲೆಯಾದ ಯುವತಿ. ಶ್ಯಾಮಸುಂದರ ಸಹೋದರಿಯನ್ನೇ ಕೊಲೆಗೈದ ಅಣ್ಣ. ಕುಟುಂಬಸ್ಥರು ಜುಲೈ 13ರಂದು ಮದುವೆಗೆ ದಿನಾಂಕ ನಿಗದಿ ಮಾಡಿ, ಲಗ್ನ ಪತ್ರಿಕೆಯನ್ನು ಹಂಚಿಕೆ ‌ಮಾಡಿದ್ದರು. ಆದರೆ ಏಕಾಏಕಿ ತಂಗಿ ಮದುವೆಗೆ ನಿರಾಕರಿಸಿದ್ದಳು ಎನ್ನಲಾಗಿದೆ.

 

 

ಸಹೋದರಿ ಮದುವೆಗೆ ನಿರಾಕರಿಸಿದ್ದ ವಿಚಾರ ತಿಳಿದ ಶ್ಯಾಮಸುಂದರ ಮನೆಯಲ್ಲಿದ್ದ ಕೊಡಲಿಯಿಂದ ಸಹೋದರಿಯನ್ನು ಕೊಚ್ಚಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಘಟನೆ ಸಂಬಂಧ ಮಾಹಿತಿ ಪಡೆದ ಗಬ್ಬೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಆರೋಪಿ ಶ್ಯಾಮಸುಂದರನನ್ನು ಬಂಧಿಸಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ