Breaking News

ಹೆಚ್.ಡಿ.ಕೆ. ಗೂಂಡಾರಾಜ್ ನಂತೆ ವರ್ತಿಸುತ್ತಿದ್ದಾರೆ; ಯಾವ ಬೆದರಿಕೆಗೂ ಬಗ್ಗಲ್ಲ; ಮಾಜಿ ಸಿಎಂ ವಿರುದ್ಧ ಮತ್ತೆ ಕಿಡಿಕಾರಿದ ಸಂಸದೆ

Spread the love

ಬೆಂಗಳೂರು: ಅಕ್ರಮ ಗಣಿಗಾರಿಕೆ ಬಗ್ಗೆ ಧ್ವನಿ ಎತ್ತಿದ್ದಕ್ಕೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆಡಿಯೋ ಇದೆ ಬಿಡುಗಡೆ ಮಾಡುತ್ತೇನೆ ಎಂದು ಬೆದರಿಸುತ್ತಿದ್ದಾರೆ. ಯಾವ ಆಡಿಯೋ ಇದ್ದರೂ ಈಗ್ಲೇ ಬಿಡುಗಡೆ ಮಾಡಲಿ ಚುನಾವಣೆವರೆಗೆ ಕಾಯುವುದೇಕೆ ? ಎಂದು ಸಂಸದೆ ಸುಮಲತಾ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ, ಹೆಚ್.ಡಿ.ಕೆ ಅವರ ಯಾವ ಸವಾಲನ್ನಾದರೂ ನಾನು ಎದುರಿಸಲು ಸಿದ್ಧ. ಗಣಿಗಾರಿಕೆ ಬಗ್ಗೆ ಧ್ವನಿ ಎತ್ತಿದ್ದಕ್ಕೆ ಇಲ್ಲದ ಆರೋಪ ಮಾಡುತ್ತಿದ್ದಾರೆ. ಓರ್ವ ಮಾಜಿ ಸಿಎಂ ಆಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಗೂಂಡಾರಾಜ್ ನಂತೆ ವರ್ತಿಸುತ್ತಿದ್ದಾರೆ ಅವರ ಯಾವ ಬೆದರಿಕೆಗೂ ಬಗ್ಗುವ ಪ್ರಶ್ನೆಯೇ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.

ಆಡಿಯೋ ಬಾಂಬ್ ಎನ್ನುತ್ತಿದ್ದಾರೆ ಅದೇನು ಆಡಿಯೋ ಈಗಲೇ ಬಿಡುಗಡೆ ಮಾಡಲಿ. ಗಣಿಗಾರಿಕೆಯಿಂದ ಸಾವಿರಾರು ಕೋಟಿ ರಾಜಧನ ಬರುತ್ತಿಲ್ಲ. ಅಕ್ರಮಗಳ ಬಗ್ಗೆ ಪ್ರಶ್ನಿಸಿದ್ದಕ್ಕೆ ಬೆದರಿಕೆಯೊಡ್ದಿ, ಬ್ಲ್ಯಾಕ್ ಮೇಲ್ ಮಾಡಲಾಗುತ್ತಿದೆ. ಯಾವುದಕ್ಕೂ ಹೆದರಲ್ಲ ಎಂದು ಗುಡುಗಿದರು.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ