Breaking News

ಮುಂದಿನ ಸಿಎಂ ಸಿದ್ದರಾಮಯ್ಯ : ಎತ್ತಿನ ಮೇಲೂ ಬಲು ಜೋರು ಬರವಣಿಗೆ

Spread the love

ಗದಗ : ಸದ್ಯ ಬಿಜೆಪಿ ಒಡೆದ ಮನೆಯಂತಾಗಿದೆ. ಮೊದಲಿದ್ದ ಬೆಂಬಲ, ಪ್ರೀತಿ, ವಿಶ್ವಾಸ ಅಷ್ಟಾಗೇನು ಕಾಣ್ತಾ ಇಲ್ಲ. ಇನ್ನೆರಡು ವರ್ಷವಷ್ಟೆ ಎಲೆಕ್ಷನ್ ಗೆ ದಿನಗಳು ಬಾಕಿ ಉಳಿದಿರೋದು. ಈ ನಡುವೆ ಬಿಜೆಪಿಯ ಒಳಮುನಿಸ್ಸನ್ನ ವಿಪಕ್ಷಗಳು ಬಂಡವಾಳವನ್ನಾಗಿಸಿಕೊಳ್ಳುತ್ತಿವೆ. ಜೆಡಿಎಸ್, ಕಾಂಗ್ರೆಸ್ ನಲ್ಲಿ ಸಿಎಂ ಕ್ರೇಜ್ ಶುರುವಾಗಿದೆ. ಅದರಲ್ಲೂ ಕಾಂಗ್ರೆಸ್ ನಲ್ಲಿ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ನೋ ಕೂಗು ಆಗಾಗ ಕೇಳುತ್ತಲೆ ಇರುತ್ತೆ. ಆದ್ರೆ ಈ ಬಾರಿ ಅದು ಎತ್ತುಗಳ ಮೇಲೂ ರಾರಾಜಿಸುತ್ತಿದೆ.

ಗದಗ ತಾಲೂಕಿನ ತಿಮ್ಮಾಪುರದಲ್ಲಿ ಕಾರಹುಣ್ಣಿಮೆ ನೆಡೆದಿದೆ. ಈ ಹಿನ್ನೆಲೆ ಸಿದ್ದರಾಮಯ್ಯ ಅಭಿಮಾನಿಗಳು ಎತ್ತಿನ ಮೇಲೆ ಸಿಎಂ ಸಿದ್ದರಾಮಯ್ಯ ಎಂದು ಬರೆದು ಎತ್ತನ್ನ ಅಲಂಕಾರ ಮಾಡಿದ್ದಾರೆ. ಕಾರ ಹುಣ್ಣಿಮೆಯಲ್ಲಿ ಎತ್ತುಗಳನ್ನ ಸಿಂಗರಿಸಿ ಮೆರವಣಿಗೆ ಮಾಡಲಾಗುತ್ತೆ. ಹಾಗೇ ಮೆರವಣಿಗೆ ಮಾಡಲು ರೆಡಿ‌ ಮಾಡಿದ ಎತ್ತಿನ ಮೇಲೆ ಈ ರೀತಿ ಬರೆಯಲಾಗಿದೆ. ಸದ್ಯ ಸಿಎಂ ಸಿದ್ದರಾಮಯ್ಯ ಎಂದು ಬರೆದ ಎತ್ತಿನ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ