Home / ರಾಜಕೀಯ / ಅಪಘಾತ ಪೀಡಿತ ಪ್ರದೇಶಗಳಲ್ಲಿ “ಮೃತ್ಯುಂಜಯ ಧೂತ್‌’ ತಂಡ ನಿಯೋಜನೆ

ಅಪಘಾತ ಪೀಡಿತ ಪ್ರದೇಶಗಳಲ್ಲಿ “ಮೃತ್ಯುಂಜಯ ಧೂತ್‌’ ತಂಡ ನಿಯೋಜನೆ

Spread the love

ಮುಂಬಯಿ: ಥಾಣೆ, ರಾಯಗಢ, ಪುಣೆ ಮತ್ತು ನಾಗಪುರ ಜಿಲ್ಲೆಯಾದ್ಯಂತ ಅಪಘಾತ ಪೀಡಿತ ಪ್ರದೇಶಗಳಲ್ಲಿ “ಮೃತ್ಯುಂಜಯ ಧೂತ್‌’ ತಂಡಗಳನ್ನು ನಿಯೋಜಿಸಿರುವ ಹೆದ್ದಾರಿ ಪೊಲೀಸರು. ಈ ಮೂಲಕ ಕಳೆದ ಮೂರು ತಿಂಗಳಲ್ಲಿ 277 ಮಂದಿಯ ಜೀವ ಉಳಿಸಲು ಸಹಾಯವಾಗಿದೆ ಎಂದು ತಿಳಿಸಿದೆ.

ಈ ತಂಡಗಳಲ್ಲಿ ಹತ್ತಿರದ ಹಳ್ಳಿಗಳ ಸಾಮಾ ನ್ಯ ಜನರು, ಪೆಟೊ›àಲ್‌ ಪಂಪ್‌ ಮತ್ತು ಡಾಬಾ ಗಳಲ್ಲಿ ಕೆಲಸ ಮಾಡುವವರು ಹಾಗೂ ಸಾಮಾಜಿಕ ಸಂಸ್ಥೆಗಳೊಂದಿಗೆ ಸಂಬಂಧ ಹೊಂದಿರುವವರನ್ನು ಧೂತ್‌ ಕಾರ್ಯಕರ್ತ ರನ್ನಾಗಿ ಪೊಲೀಸ್‌ ಇಲಾಖೆಯಿಂದ ನೇಮಿಸ ಲಾಗುತ್ತೆ. ಈ ಕಾರ್ಯಕರ್ತರಿಗೆ ಅಪಘಾತ ನಡೆದ ಸಂದರ್ಭ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಲು ತರಬೇತಿ ನೀಡಲಾಗಿದೆ.

ನೂರಾರು ಅಮಾಯಕರ ರಕ್ಷಣೆ

ಥಾಣೆ, ರಾಯಗಢ, ಪುಣೆ ಮತ್ತು ನಾಗಪುರ ಪ್ರದೇಶದ ಹೆದ್ದಾರಿಗಳ ಬಳಿ ಒಟ್ಟು 5,012 ಮೃತ್ಯುಂಜಯ ಧೂತ್‌ ಕಾರ್ಯಕರ್ತರು ಕಾರ್ಯನಿರ್ವಹಿಸುತ್ತಿದ್ದು, ಮಾರ್ಚ್‌ 1ರಿಂದ ಮೇ 31ರ ವರೆಗೆ 172 ಅಪಘಾತಗಳಲ್ಲಿ 309 ಮಂದಿ ಗಾಯಗೊಂಡಿದ್ದಾರೆ. ಈ 309ರಲ್ಲಿ 277 ಮಂದಿ ಮೃತ್ಯುಂಜಯ ಧೂತ್‌ ಅವರ ಪ್ರಥಮ ಚಿಕಿತ್ಸೆಯಿಂದ ಬದುಕುಳಿದಿದ್ದು, ಪುಣೆ ಪ್ರದೇಶದಲ್ಲಿ 3,480 ಅತಿ ಹೆಚ್ಚು ಧೂತರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪ್ರದೇಶದಲ್ಲಿ 62 ಅಪಘಾತಗಳಲ್ಲಿ 141 ಜೀವಗಳನ್ನು ಉಳಿಸಲಾಗಿದೆ.

ಗೋಲ್ಡನ್‌ ಅವರ್‌ ಒಳಗೆ ಚಿಕಿತ್ಸೆ

ಥಾಣೆ ಪ್ರದೇಶದಲ್ಲಿ 546 ಧೂತ್‌ ಕಾರ್ಯಕರ್ತರಿದ್ದು 119 ಜೀವಗಳನ್ನು ಉಳಿಸಿದ್ದಾರೆ. ರಾಯಗಢ ಪ್ರದೇಶದಲ್ಲಿ 351 ಧೂತರಿದ್ದು, 34 ಅಪಘಾತಗಳಲ್ಲಿ 39 ಜೀವಗಳನ್ನು ಉಳಿಸಿದೆ. ನಾಗಪುರ ಪ್ರದೇಶದಲ್ಲಿ 635 ಧೂತರಿದ್ದು, ಒಂಬತ್ತು ಅಪಘಾತಗಳಲ್ಲಿ 15 ಜೀವಗಳನ್ನು ಉಳಿಸಿದ್ದಾರೆ.

ಅಪಘಾತದ ಬಳಿಕ ಗಾಯಗೊಂಡ ವ್ಯಕ್ತಿಯು ಒಂದು ಗಂಟೆಯೊಳಗೆ ಚಿಕಿತ್ಸೆ ಪಡೆಯಬೇಕು. ಇದನ್ನು ಗೋಲ್ಡನ್‌ ಅವರ್‌ ಎಂದು ಕರೆಯಲಾಗುತ್ತದೆ. ಗಾಯಗೊಂಡ ವ್ಯಕ್ತಿಗೆ ಗೋಲ್ಡನ್‌ ಅವರ್‌ ಒಳಗೆ ಚಿಕಿತ್ಸೆ ಸಿಗದಿದ್ದರೆ, ಅವರನ್ನು ಉಳಿಸುವುದು ಕಷ್ಟವಾಗುತ್ತದೆ. ಆದ್ದರಿಂದ ನಾವು ಸಾಮಾನ್ಯ ಜನರನ್ನು ಮೃತ್ಯುಂಜಯ ಧೂತ್‌ರನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದೇವೆ. ಇದರಿಂದ ಗಾಯಾಳುಗಳನ್ನು ಬೇಗನೆ ಆಸ್ಪತ್ರೆಗೆ ಕರೆದೊಯ್ಯಬಹುದು ಎಂದು ಹೆ¨ªಾರಿ ಸಂಚಾರದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಭೂಷಣ್‌ ಉಪಾಧ್ಯಾಯ ಅವರು ಹೇಳಿದ್ದಾರೆ.


Spread the love

About Laxminews 24x7

Check Also

ಬುಧವಾರದಂದು ಪ್ರಧಾನಿಗಳು ಆಗಮಿಸುವ ಸ್ಥಳವನ್ನು ಪರಿಶೀಲಿಸಿದ : ಬಾಲಚಂದ್ರ & ರಮೇಶ್ ಜಾರಕಿಹೊಳಿ

Spread the loveಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ