Breaking News

ಮೈಸೂರಿನಲ್ಲಿ ಇಂಜಿನಿಯರ್​ ಸಾವು! 2 ತಿಂಗಳ ಹಿಂದಷ್ಟೇ ಮದ್ವೆ ಆಗಿದ್ದವರ ಬಾಳಿಗೆ ಕೊಳ್ಳಿ ಇಟ್ಟ ಕರೊನಾ..

Spread the love

ಮೈಸೂರು: ನೂರಾರು ಕನಸಿನ ಬುತ್ತಿಯೊಂದಿಗೆ ಎರಡು ತಿಂಗಳ ಹಿಂದಷ್ಟೇ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಅಷ್ಟರಲ್ಲಿ ಸುಖಸಂಸಾರಕ್ಕೆ ಬಂದಪ್ಪಳಿಸಿದ ಮಹಾಮಾರಿ ಕರೊನಾ, ನವವಿವಾಹಿತನ ಪ್ರಾಣ ತೆಗೆದ ಹೃದಯವಿದ್ರಾವಕ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಆಲನಹಳ್ಳಿ ಬಡಾವಣೆ ನಿವಾಸಿ, ಇಂಜಿನಿಯರ್​ ನವೀನ್ ಕುಮಾರ್ ಮೃತ ದುರ್ದೈವಿ. ಬೆಂಗಳೂರಿನ ಜೈನ್ ವಿವಿಯಲ್ಲಿ ಕೆಲಸ‌ ಮಾಡುತ್ತಿದ್ದ ನವೀನ್, ಎರಡು ತಿಂಗಳ ಹಿಂದಷ್ಟೆ ಮದುವೆ ಆಗಿದ್ದರು. ಇತ್ತೀಚಿಗೆ ತೀವ್ರ ಉಸಿರಾಟದ ಬಳಲುತ್ತಿದ್ದ ನವೀನ್​, ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿ ಕರೊನಾ ತಪಾಸಣೆ ಮಾಡಿಸಿದ್ದರು. ವರದಿಯು ಪಾಸಿಟಿವ್​ ಬಂದಿತ್ತು. ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ನವೀನ್​ ಸಾವಿಂದ ಕಂಗಾಲಾದ ಪತ್ನಿಯ ಮತ್ತು ಕುಟುಂಬಸ್ಥರ ಆಕ್ರಂದ ಮುಗಿಲು ಮುಟ್ಟಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ