Breaking News

ವಿಷಾ ಸೇವಿಸಿ ರೈತ ಆತ್ಮಹತ್ಯೆ……..

Spread the love

: ವಡಗೇರಾ ತಾಲೂಕಿನ ಅನಕಸೂಗೂರು ಗ್ರಾಮದ ದೇವಪ್ಪ .ತಂಆಜಪ್ಪ ದೇವದುರ್ಗ ಕ್ರೀಮಿನಾಷಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ರೈತನ ಭಾವಚಿತ್ರ

ವಡಗೇರಾ : ಸಾಲ ಬಾಧೆ ತಾಳಲಾರದೆ ವಿಷ ಕ್ರಿಮಿನಾಶಕ )ಸೇವಿಸಿ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ತಾಲೂಕಿನ ಅನಕಸೂಗೂರು ಗ್ರಾಮದಲ್ಲಿ ನಡೆದಿದೆ
ಇದೇ ಗ್ರಾಮದ ದೇವಪ್ಪ ದೇವದುರ್ಗ ವ.(50) ಎಂಬುವರೇ ಆತ್ಮಹತ್ಯೆ ಮಾಡಿಕೊಂಡಿರುವ ರೈತ ಅನಕಸೂಗೂರು ಗ್ರಾಮದ ಸರ್ವೆ ನಂ 50ರಲ್ಲಿ ನಾಲ್ಕು ಎಕರೆ ಜಮೀನು ಹೊಂದಿದ್ದು ಜಮೀನಲ್ಲಿ ಹತ್ತಿ ಬೆಳೆ ಬೆಳೆಯುವುದಕ್ಕೆ ಬೀಜ, ಗೊಬ್ಬರಕ್ಕೆಂದು ವ್ಯವಸಾಯ ಸಹಕಾರ ಸಂಘ (ಅಂಜುಮನ್) ಬ್ಯಾಂಕ್ ನಲ್ಲಿ 1.50.ಲಕ್ಷ ರೂ. ಸಾಲ ಜೊತೆಗೆ ಊರಲ್ಲಿ ಕೂಡ ಅಲ್ಲಲ್ಲಿ 2.50 ಲಕ್ಷ ರೂ. ಕೈಸಾಲ ಮಾಡಿ ಈ ವಷ೯ ಹತ್ತಿ ಬೆಳದಿದ್ದು ವಿಪರೀತ ಮಳೆಯಾಗಿ ಹೊಲದಲ್ಲಿ ನೀರು ನಿಂತಿದ್ದರಿಂದ ಹತ್ತಿ ಬೆಳೆಯು ಕೊಳೆಯುವ ಸ್ಥಿತಿಗೆ ತಲುಪಿದ ರಿಂದ ಬೀಜ-ಗೊಬ್ಬರ ಸಂಸಾರಕ್ಕೆ ಎಂದು ಮಾಡಿದ ಸಾಲ ಹೇಗೆ ತೀರಿಸುವುದು ಹತ್ತಿ ಬೆಳೆ ಸರಿಯಾಗಿ ಬೆಳೆದರೆ ತಿಳಿಸಬೇಕೆಂದು ಕೊಂಡಿದ್ದರು ಇದರಿಂದ ಸಾಲದ ಬಾಧೆ ಜಾಸ್ತಿಯಾದ ಹಿನ್ನೆಲೆಯಲ್ಲಿ ಮನನೊಂದು ದೇವಪ್ಪ ತಂದೆ ರಾಜಪ್ಪ ಮನೆಯಲ್ಲಿ ಕ್ರಿಮಿನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದರು ಅವರನ್ನು ಕೂಡಲೇ ಶಹಪುರ್ ತಾಲೂಕ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಯಿತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಹೆಂಡತಿ ನಾಗಮ್ಮ ಗಂಡ ದೇವಪ್ಪ ದೇವದುರ್ಗ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ ಯು.ಡಿ.ಆರ್.ನಂ.10 /2020 ಕಲಂ : 174 ಸಿ.ಆರ್. ಪಿ.ಸಿ. ಪ್ರಕಾರ ವಡಗೇರಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ