Breaking News

96 ದಿನ ಜೈಲಿಗೆ ಹೋಗಿ ಬಂದಿದ್ದರಂತೆ ವೈಲ್ಡ್​ ಕಾರ್ಡ್​ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ! ಕಾರಣ?

Spread the love

ಬಿಗ್​ ಬಾಸ್​ ಐದನೇ ವಾರದಲ್ಲಿ ವೈಲ್ಡ್​ ಕಾರ್ಡ್​ ಎಂಟ್ರಿ ಆಗಿದೆ. ಪ್ರಶಾಂತ್​ ಸಂಬರಗಿ ಆಪ್ತ ಚಕ್ರವರ್ತಿ ಚಂದ್ರಚೂಡ ಅನ್ನೋದು ವಿಶೇಷ. ಬಂದ ದಿನವೇ ಮನೆಯಲ್ಲಿ ತುಂಬಾನೇ ವಿಚಿತ್ರವಾಗಿ ನಡೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ತುಂಬಾನೇ ಚರ್ಚೆಗೂ ಕಾರಣವಾಗಿದ್ದಾರೆ.

ಪತ್ರಿಕೋದ್ಯಮದಿಂದ ತಮ್ಮ ವೃತ್ತಿ ಆರಂಭಿಸಿದ ಚಕ್ರವರ್ತಿ ಚಂದ್ರಚೂಡ ನಂತರ ಕಾಲಿಟ್ಟಿದ್ದು ಚಿತ್ರರಂಗಕ್ಕೆ. ಇವರು ಸಿನಿಮಾ ನಿರ್ದೇಶನಕ್ಕೆ ಇಳಿದರು. ಈಗ ನೇರವಾಗಿ ಬಿಗ್​ ಬಾಸ್​ ಮನೆಗೆ ಪ್ರವೇಶ ಪಡೆದುಕೊಂಡಿದ್ದಾರೆ. ಕವಿತೆ ಬರೆಯುವುದರ ಜತೆಗೆ ಸಾಮಾಜಿಕ ಕಾರ್ಯಕರ್ತರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಈಗಾಗಲೇ ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಸಂಬರಗಿ ಮಾತು ಕೇಳಿ ಎಲ್ಲರಿಗೂ ಶಾಕಾಗಿದೆ. ಅವರು ನಡೆದುಕೊಳ್ಳುವ ರೀತಿ ಸಾಕಷ್ಟು ಜನರಿಗೆ ಇಷ್ಟವಾಗುತ್ತಿಲ್ಲ. ಮಾತಿನಲ್ಲಿ ಚಕ್ರವರ್ತಿ ಚಂದ್ರಚೂಡ​ ಕೂಡ ನಿಪುಣರು. ಅಲ್ಲದೆ, ಪ್ರಶಾಂತ್​-ಚಂದ್ರಚೂಡ ಇಬ್ಬರೂ ಆಪ್ತರು. ಹೀಗಾಗಿ, ಇಬ್ಬರಿಗೂ ಪರಸ್ಪರ ಧ್ವನಿ ಸಿಕ್ಕಂತೆ ಆಗಿದೆ.

ಚಂದ್ರಚೂಡ ಮನೆಗೆ ಬರುತ್ತಿದ್ದಂತೆ ಎಲ್ಲರನ್ನೂ ತಮ್ಮಡೊನೆ ಸೆಳೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಬಿಗ್​ ಬಾಸ್​ ಪ್ರವೇಶಿಸಿದ ಅವರು ದೊಡ್ಡ ಧ್ವನಿಯಲ್ಲಿ ಮಾತನಾಡಿದ್ದಾರೆ. ನಾನು ಅನೇಕ ಚಳುವಳಿಗೆ ಭಾಗವಹಿಸಿದ್ದೆ. ಮೊದಲು ಆಂಧ್ರಪ್ರದೇಶದ ಪವಾಡ ಪುರಷರ ಬಗ್ಗೆ ನಾನು ಒಂದು ಪುಸ್ತಕ ಬರೆದೆ. ಅವರು ನಕಲಿ ಎಂದು ಹೇಳಿದ್ದೆ. ಅದು ನಿಜವೂ ಆಗಿತ್ತು. ಆದರೆ, ನನ್ನನ್ನು ತೆಗೆದುಕೊಂಡು ಹೋಗಿ 96 ದಿನ ಜೈಲಿನಲ್ಲಿಟ್ಟರು ಎಂದು ತಮ್ಮ ಇತಿಹಾಸ ಹೇಳಿಕೊಂಡಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ