Breaking News

50 ಜನ ರೋಗಿಗಳ ಶವಗಳನ್ನು ಹೈದರಾಬಾದ್‌ನಲ್ಲಿ ಸಾಮೂಹಿಕವಾಗಿ ದಹನ ಮಾಡಲಾಗಿದೆ.

Spread the love

ಹೈದರಾಬಾದ್‌: ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ 50 ಜನ ರೋಗಿಗಳ ಶವಗಳನ್ನು ಹೈದರಾಬಾದ್‌ನಲ್ಲಿ ಸಾಮೂಹಿಕವಾಗಿ ದಹನ ಮಾಡಲಾಗಿದೆ. ಸರ್ಕಾರದ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎರ್ರಗಡ್ಡ ಶವಾಗಾರದಲ್ಲಿ ಸಾಮೂಹಿಕ ಅಂತ್ಯಕ್ರಿಯೆ ನೆರವೇರಿಸಲಾಗಿದ್ದು, ಈ ವಿಡಿಯೋ ಭಾರೀ ವೈರಲ್ ಆಗಿದೆ. ದೇಶಾದ್ಯಂತ ವ್ಯಾಪಿ ಭಾರೀ ಖಂಡನೆ ವ್ಯಕ್ತವಾಗಿದೆ.

ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಈ ಕುರಿತು ಸ್ಪಷ್ಟನೆ ನೀಡಿರುವ ತೆಲಂಗಾಣ ಆರೋಗ್ಯ ಇಲಾಖೆ, ಈ ಮೃತ ದೇಹಗಳು ಒಂದೇ ದಿನ ಸಾವನ್ನಪ್ಪಿದವರದ್ದಲ್ಲ. ಕಳೆದ ಮೂರು ದಿನಗಳಿಂದ ಮೃತಪಟ್ಟವರ ದೇಹವನ್ನು ಒಟ್ಟಾಗಿ ಅಂತ್ಯಕ್ರಿಯೆ ಮಾಡಲಾಗಿದೆ” ಎಂದು ತಿಳಿಸಿದೆ.

ಕೊರೋನಾ ವೈರಸ್‌ನಿಂದ ಮೃತಪಟ್ಟವರ ಶವದ ಅಂತ್ಯಕ್ರಿಯೆ ಇತ್ತೀಚಿನ ದಿನಗಳಲ್ಲಿ ಎಲ್ಲಾ ಸರ್ಕಾರಗಳಿಗೂ ಸವಾಲಾಗಿ ಪರಿಣಮಿಸಿದೆ. ಈ ನಡುವೆ ಬೇಕಾಬಿಟ್ಟಿ ಅಂತ್ಯಕ್ರಿಯೆ ನಡೆಸುವ ವಿಡಿಯೋಗಳು ಹಲವೆಡೆ ವೈರಲ್ ಆಗಿದ್ದು, ಜನಾಕ್ರೋಶಕ್ಕೂ ಕಾರಣವಾಗಿದೆ. ಈ ನಡುವೆ ಹೈದರಾಬಾದ್‌ನಲ್ಲೂ ಅಂತಹದ್ದೇ ಕೃತ್ಯ ನಡೆದಿರುವುದು ಸಾಮಾನ್ಯವಾಗಿ ಜನರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಈ ನಡುವೆ ವಿಶ್ವದಾದ್ಯಂತ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ 15 ದಶ ಲಕ್ಷಕ್ಕೂ ಅಧಿಕವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ. ಕೊರೋನಾದಿಂದಾಗಿ ಈವರೆಗೆ 6,20,000 ಜನ ಮೃತಪಟ್ಟಿದ್ದಾರೆ. ಮಾರಣಾಂತಿಕ ಕೊರೋನಾ ವೈರಸ್ ಪ್ರಸ್ತುತ ಎಲ್ಲಾ ದೇಶಗಳಲ್ಲೂ ವ್ಯಾಪಿಸಿದೆ. ಆದರೆ, 2/3 ರಷ್ಟು ಪ್ರಕರಣಗಳು 10 ದೇಶಗಳಲ್ಲಿ ದಾಖಲಾಗುತ್ತಿದ್ದರೆ, ಒಟ್ಟು ಸೋಂಕಿತರ ಪೈಕಿ ಅರ್ಧದಷ್ಟು ಜನ ಕೇವಲ 3 ದೇಶಗಳಲ್ಲೇ ಇದ್ದಾರೆ. ಈ ಪೈಕಿ ಭಾರತವೂ ಒಂದು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ


Spread the love

About Laxminews 24x7

Check Also

ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ

Spread the love ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ