Breaking News

ಮತ್ತೊಂದು ವಿಡೀಯೋ ಮಾಡಿ ಹೊರಗೆ ಬಿಟ್ಟಿದ್ದಾಳೆ ,ಸಿಡಿ ಯುವತಿ

Spread the love

ಬೆಂಗಳೂರು – ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿಯಲ್ಲಿದ್ದಾಳೆ ಎನ್ನಲಾದ ಯುವತಿ ಮತ್ತೊಂದು ವಿಡೀಯೋ ಮಾಡಿ ಹೊರಗೆ ಬಿಟ್ಟಿದ್ದಾಳೆ.

ಇದರಲ್ಲಿ 2-3 ಸ್ಫೋಟಕ ಅಂಶಗಳನ್ನು ಪ್ರಸ್ತಾಪಿಸಿದ್ದಾಳೆ. ನನ್ನ ಅಪ್ಪ, ಅಮ್ಮ ಸ್ವ ಇಚ್ಛೆಯಿಂದ ಪೊಲೀಸ್ ದೂರು ನೀಡಿಲ್ಲ. ನಾನು ತಪ್ಪು ಮಾಡಿಲ್ಲ ಎಂದು ಅವರಿಗೆ ಗೊತ್ತಿದೆ. ಹಾಗಾಗಿ ಅವರು ಸ್ವಇಚ್ಛೆಯಿಂದ ದೂರು ನೀಡಲು ಸಾಧ್ಯವೇ ಇಲ್ಲ ಎಂದಿದ್ದಾಳೆ.

ನನಗೆ ನನ್ನ ಅಪ್ಪ, ಅಮ್ಮನ ಸೇಫ್ಟಿ ಮುಖ್ಯ. ಅವರು ಸೇಫಾಗಿದ್ದಾರೆ ಎಂದು ಗೊತ್ತಾದ ತಕ್ಷಣ ನಾನು ಹೊರಗೆ ಬಂದು ಎಸ್ಐಟಿ ಮುಂದೆ ಹಾಜರಾಗಿ ಎಲ್ಲ ಹೇಳಿಕೆ ನೀಡುತ್ತೇನೆ ಎಂದಿದ್ದಾಳೆ.

ಜೊತೆಗೆ ನನ್ನ ಅಪ್ಪ, ಅಮ್ಮನಿಗೆ ಸೇಫಾಗಿರುವಂತೆ ನೋಡಿಕೊಳ್ಳಿ ಎಂದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಮತ್ತು ರಮೇಶ ಕುಮಾರ್ ಹಾಗೂ ಮಹಿಳೆ ಸಂಘಟನೆಗಳ ಬಳಿ ವಿನಂತಿಸಿಕೊಂಡಿದ್ದಾಳೆ.

ಇದರೊಂದಿಗೆ ಮತ್ತೊಂದು ಆಘಾತಕಾರಿ ಹೇಳಿಕೆ ನೀಡಿದ್ದಾಳೆ. ಈ ಮೊದಲು ಹೊರಬಂದಿದ್ದ ಅವಳ ವೀಡಿಯೋ ಕುರಿತು ಪ್ರಸ್ತಾಪಿಸಿದ್ದಾಳೆ. ನಾನು ಮಾ.12ರಂದು ಪೊಲೀಸ್ ಕಮಿಷನರ್ ಕಚೇರಿಗೆ ವಿಡೀಯೋ ಕಳಿಸಿದ್ದೆ. ಅದನ್ನು ಮಾ.13ರಂದು ರಮೇಶ ಜಾರಕಿಹೊಳಿ ತರಾತುರಿಯಲ್ಲಿ ದೂರು ಕೊಟ್ಟ ಅರ್ಧ ಗಂಟೆ ನಂತರ ಹೊರಗೆ ಬಿಡಲಾಗಿದೆ ಎನ್ನುವ ಆರೋಪ ಮಾಡಿದ್ದಾಳೆ.

ಎಸ್ಐಟಿಯವರು ಯಾರ ಪರವಾಗಿ ಕೆಲಸ ಮಾಡುತ್ತಿದ್ದಾರೆ ತಿಳಿಯುತ್ತಿಲ್ಲ, ಯಾರನ್ನು ಸೇಫ್ ಮಾಡುತ್ತಿದ್ದಾರೆ ತಿಳಿಯುತ್ತಿಲ್ಲ ಎಂದಿದ್ದಾಳೆ.

ನಾನು ದೂರು ಕೊಟ್ಟ ಅರ್ಧ ಗಂಟೆ ನಂತರ ಯುವತಿ ವಿಡೀಯೋ ಬಿಡುಗಡೆ ಮಾಡಲಾಗಿದೆ ಎಂದು ರಮೇಶ ಜಾರಕಿಹೊಳಿ ಹೇಳಿದ್ದರು. ಆದರೆ ಇದರಲ್ಲಿ ಯುವತಿ, ನಾನು ಒಂದು ದಿನ ಮೊದಲೇ ವಿಡೀಯೋ ಕಳಿಸಿದ್ದೆ ಎಂದಿದ್ದಾಳೆ.

ನನಗೆ ನ್ಯಾಯ ಸಿಕ್ಕೇ ಸಿಗುತ್ತೆ ಎನ್ನುವ ವಿಶ್ವಾಸ ನನಗಿದೆ ಎಂದೂ ಹೇಳಿದ್ದಾಳೆ.

ಈ ವಿಡೀಯೋ ಇಡೀ ಪ್ರಕರಣಕ್ಕೆ ಮತ್ತೊಂದು ತಿರುವು ನೀಡಿದೆ.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ