Breaking News

ಸುಧಾಕರ್ ಕಾಮಿಡಿ ಮಾಡ್ತಿದ್ದಾರಾ : ಸುಧಾಕರ್ ಗೆ ಸೌಮ್ಯ ರೆಡ್ಡಿ ಟಾಂಗ್

Spread the love

ಬೆಂಗಳೂರು : ಡಾ.ಕೆ.ಸುಧಾಕರ್ ಅವರಿಗೆ ಮಾಡೋಕೆ ಏನೂ ಕೆಲಸ ಇಲ್ವಾ. ಜನ ನಗ್ತಾ ಇದ್ದಾರೆ ಎಂದು ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಶಾಸಕ ಸೌಮ್ಯ ರೆಡ್ಡಿ ಟಾಂಗ್ ನೀಡಿದ್ದಾರೆ.

ಇಂದು ಬೆಳಗ್ಗೆ ಸಚಿವ ಡಾ.ಕೆ.ಸುಧಾಕರ್, ಸಿದ್ದರಾಮಯ್ಯ, ಕುಮಾರಸ್ವಾಮಿ, ಮುನಿಯಪ್ಪ, ಡಿ.ಕೆ.ಶಿವಕುಮಾರ್ ಮತ್ತು ನನ್ನನ್ನು ಸೇರಿದಂತೆ ಎಲ್ಲ 224 ಶಾಸಕರ ವೈಯಕ್ತಿಕ ಜೀವನದ ಬಗ್ಗೆ ತನಿಖೆ ಆಗಲಿ.

ಯಾರಿಗೆ ಅನೈತಿಕ ಸಂಬಂಧ ಇದೆ, ವಿವಾಹವೇತರ ಸಂಬಂಧ ಇದೆ ಎಂಬುವುದು ಗೊತ್ತಾಗಲಿ. ಸಿಎಂ ಆಗಿದ್ದಾಗ ಯಾರು ಏನು ಮಾಡಿದ್ರು ಅನ್ನೋದು ಗೊತ್ತಾಗಲಿ.

ಸಿದ್ದರಾಮಯ್ಯ, ಕುಮಾರಸ್ವಾಮಿ, ಮುನಿಯಪ್ಪ, ಡಿ.ಕೆ.ಶಿವಕುಮಾರ್ ಏನು ಏಕಪತ್ನಿವ್ರತಸ್ಥರಾ ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೌಮ್ಯ ರೆಡ್ಡಿ, ಅವರು ಕಾಮಿಡಿ ಮಾಡ್ತಿದ್ದಾರಾ. ನಾವು ಹೆಣ್ಣು ಮಗಳಿಗೆ ಅನ್ಯಾಯ ಆಗಿದೆ ಅಂತ ಪ್ರತಿಭಟನೆ ಮಾಡ್ತಾ ಇರೋದು.

ನಾವು ಯಾಕೆ ಪ್ರತಿಭಟನೆ ಮಾಡ್ತಾ ಇದ್ದೇವೆ ಅಂತ ಅರ್ಥ ಮಾಡ್ಕೊಳ್ಳಿ. ಯಾರೇ ಆಗಲಿ ಸಿಬಿಐಗೆ ಹೋಗಲಿ.

ಒಬ್ಬರ ಪರ್ಸನಲ್ ವಿಚಾರಕ್ಕೆ ಅಲ್ಲ ಪ್ರತಿಭಟನೆ ಮಾಡ್ತಾ ಇರೋದು. ಇದನ್ನ ಮೊದಲು ಸುಧಾಕರ್ ಅರ್ಥ ಮಾಡ್ಕೊಳ್ಳಿ. ಅವರಿಗೆ ಮಾಡೋಕೆ ಬೇರೆ ಕೆಲಸ ಇಲ್ವಾ.

ಅವರ ಹೇಳಿದ್ದನ್ನ ಕೇಳಿ ಜನ ನಗ್ತಾ ಇದ್ದಾರೆ ಎಂದು ನಗುನಗುತ್ತಲೇ ಸೌಮ್ಯ ರೆಡ್ಡಿ ಸುಧಾಕರ್ ವಿರುದ್ಧ ಕಿಡಿಕಾರಿದ್ದಾರೆ.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ