ಹೊಸದಿಲ್ಲಿ: ಭಾರತೀಯ ನೌಕಾ ಪಡೆ ವಿಶ್ವ ಮಹಿಳಾ ದಿನಾಚರಣೆಗೆ ವಿಶಿಷ್ಟ ಕೊಡುಗೆ ನೀಡಿದೆ. ಮಹತ್ವದ ಬೆಳವಣಿಗೆಯೊಂದರಲ್ಲಿ 23 ವರ್ಷಗಳ ಬಳಿಕ ಯುದ್ಧ ನೌಕೆಗೆ ನಾಲ್ವರು ಮಹಿಳೆಯರನ್ನು ನೇಮಕ ಮಾಡಲಾಗಿದೆ.
ಐಎನ್‌ಎಸ್ ವಿಕ್ರಮಾದಿತ್ಯ ವಿಮಾನ ವಾಹಕ ನೌಕೆಗೆ ಇಬ್ಬರು, ಐಎನ್‌ಎಸ್ ಶಕ್ತಿ ಟ್ಯಾಂಕರ್‌ಗೆ ಇಬ್ಬರು ಸೇರಿದಂತೆ ನಾಲ್ವರು ಮಹಿಳೆಯರನ್ನು ನೌಕಾಪಡೆಯ ಮುಂಚೂಣಿ ಜಾಗಕ್ಕೆ ನೇಮಕ ಮಾಡಲಾಗಿದೆ.
1998ರಲ್ಲಿ ಮೊಟ್ಟ ಮೊದಲ ಬಾರಿಗೆ ಯುದ್ಧನೌಕೆಗೆ ಮಹಿಳೆಯರನ್ನು ನೇಮಕ ಮಾಡಲಾಗಿತ್ತು. ಆದರೆ, ಕಾರಣಾಂತರಗಳಿಂದ ಅನುಷ್ಠಾನ ಸಾಧ್ಯವಾಗಿರಲಿಲ್ಲ. ಆದರೆ, ಮಾ.8ರ ವಿಶ್ವ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ನಾಲ್ವರು ಮಹಿಳೆಯರನ್ನು ಯುದ್ಧನೌಕೆಗೆ ನೇಮಕ ಮಾಡುವ ಮೂಲಕ “ನಾರಿ ಶಕ್ತಿ’ಗೆ ಆದ್ಯತೆ ನೀಡಲಾಗಿದೆ.
Laxmi News 24×7