ಹುಬ್ಬಳ್ಳಿ: ದೇವರಾಜ ಅರಸು ಅವರು ಎರಡು ಅವಧಿ ಗ್ಯಾಪ್ ಇಲ್ಲದೇ ಸಿಎಂ ಆಗಿ ದಾಖಲೆ ಮಾಡಿದರು. ಆದರೆ, ಸಿದ್ದರಾಮಯ್ಯನವರು ಸತತ ಎರಡು ಅವಧಿ ಸಿಎಂ ಆಗಿಲ್ಲ, ಗ್ಯಾಪ್ ಇದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಾಖಲೆ ಮಾಡುವುದು ಮುಖ್ಯವಲ್ಲ. ಜನಪರ ಆಡಳಿತ ಎಷ್ಟರಮಟ್ಟಿಗೆ ನೀಡಿದರು ಅನ್ನೋದು ಮುಖ್ಯ. ಈಗಿನ ಸಿದ್ದರಾಮಯ್ಯನವರ ಅವಧಿಯಲ್ಲಿ ಆಡಳಿತ ವ್ಯವಸ್ಥೆ ಕುಸಿದು ಹೋಗಿದೆ. ಸಿದ್ದರಾಮಯ್ಯನವರು ಈಗ ಅಡಳಿತದ ಮೇಲಿನ ಹಿಡಿತ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಆರ್ಥಿಕ ವ್ಯವಸ್ಥೆ ಸಂಪೂರ್ಣ ನೆಲಕಚ್ಚಿದೆ. ಜನಪರ ಯೋಜನೆಗಳಿಗೆ ಅನುದಾನ ಇಲ್ಲ, ಗುತ್ತಿಗೆದಾರರ ಬಿಲ್ ಬಾಕಿ ಉಳಿದಿವೆ. ಕೇಂದ್ರ ಸರ್ಕಾರಗಳ ಯೋಜನೆಗೆ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ ಎಂದರು.
Laxmi News 24×7