Breaking News

ಯಡಿಯೂರಪ್ಪನವರು ಸುಳ್ಳು ಆರೋಪಗಳಿಂದ ಮುಕ್ತರಾಗುವ ದಿನಗಳು ಸಮೀಪ:ಬಿ‌.ವೈ.ರಾಘವೇಂದ್ರ

Spread the love

ಶಿವಮೊಗ್ಗ: “ಯಡಿಯೂರಪ್ಪನವರಿಗೆ ಜೀವನಪೂರ್ತಿ ಹೋರಾಟ ಮಾಡುವ ಅನಿವಾರ್ಯತೆ ಅಧಿಕಾರಿದಲ್ಲಿದ್ದಾಗ ಮತ್ತು ಅಧಿಕಾರಿದಲಿಲ್ಲದಿದ್ದಾಗಲೂ ಇದೆ. ಈಗ ಪೋಕ್ಸೋ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆದು ಅವರು ಎಲ್ಲ ಸುಳ್ಳು ಆರೋಪಗಳಿಂದ ಮುಕ್ತವಾಗಿ ಹೊರಬರುವ ದಿನಗಳು ಹತ್ತಿರ ಇದೆ” ಎಂದು ಸಂಸದ ಬಿ‌.ವೈ.ರಾಘವೇಂದ್ರ ತಿಳಿಸಿದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಭ್ರಷ್ಟಾಚಾರ ಹೆಚ್ಚಿದೆ. ಅಧಿಕಾರಿಗಳು ಕಣ್ಣೀರು ಹಾಕುತ್ತಿದ್ದಾರೆ. ನಾವು ಖಾಲಿ ಕೈಯಲ್ಲಿ ಜಿಲ್ಲೆಗೆ ಬಂದಿಲ್ಲ. ಇಂಥವರಿಗೆ ಇಂತಿಷ್ಟು ಹಣ ಕೊಟ್ಟು ಬಂದಿದ್ದೇವೆ ಎಂದು ಹೇಳುತ್ತಿದ್ದಾರೆ. ತಿಂಗಳ ಮಾಮೂಲು ಫಿಕ್ಸ್ ಆಗಿದೆ. ಇಂತಹ ಕೆಟ್ಟ ವ್ಯವಸ್ಥೆ ನಮ್ಮ ರಾಜ್ಯ, ಜಿಲ್ಲೆಯಲ್ಲಿ ನಾವು ಈ ಹಿಂದೆ ನೋಡಿರಲಿಲ್ಲ‌” ಎಂದರು.

ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುವುದು ಅನುಮಾನ: “ಸ್ಥಳೀಯ ಸಂಸ್ಥೆ ಚುನಾವಣೆಗಳು ನಡೆಯುವುದರ ಬಗ್ಗೆ ನಮಗೆ ಅನುಮಾನವಿದೆ. ಈಗಾಗಲೇ ಚುನಾವಣಾ ಆಯೋಗ ಸ್ಥಳೀಯ ಸಂಸ್ಥೆಗಳಾದ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಮಹಾನಗರ ಪಾಲಿಕೆ ಚುನಾವಣೆಗೆ ತಯಾರಾಗಿ ಎಂದು ಹೇಳಿದೆ ಎಂದು ಮಾಧ್ಯಮಗಳಲ್ಲಿ ವರದಿ ನೋಡಿದೆ. ಆದರೆ ರಾಜ್ಯ ಸರ್ಕಾರ ಚುನಾವಣೆ ನಡೆಸುವುದು ನಮಗೆ ಅನುಮಾನ. ರಾಜ್ಯ ಸರ್ಕಾರ ಖಾಲಿ ಕೈಯಲ್ಲಿ ಬಜೆಟ್ ಕೊಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ” ಎಂದು ಹೇಳಿದರು.


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ