Breaking News

ವಿಧಾನಸೌಧದ ಆವರಣದಲ್ಲಿ ಪುಸ್ತಕ ಮೇಳಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

Spread the love

ಬೆಂಗಳೂರು: ಇದೇ ಮೊದಲ ಬಾರಿಗೆ ಶಕ್ತಿಸೌಧ ವಿಧಾನಸೌಧದ ಆವರಣದಲ್ಲಿ ಸಚಿವಾಲಯದ ವತಿಯಿಂದ ಪುಸ್ತಕ ಜಾತ್ರೆ ಆಯೋಜಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಪುಸ್ತಕ ಮೇಳಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, “ಅತ್ಯಂತ ಸಂತೋಷದಿಂದ‌ ಉದ್ಘಾಟನೆ ಮಾಡಿದ್ದೇನೆ. 151 ಪುಸ್ತಕ ಮಳಿಗೆಗಳು ಇವೆ. ಪುಸ್ತಕಪ್ರಿಯರಿಗೆ ಇದೊಂದು ಹಬ್ಬ. ಬೇರೆ ಭಾಷೆಯಿಂದ ಭಾಷಾಂತರ ಆಗಿರುವ ಪುಸ್ತಕಗಳು ಸಹ ಇಲ್ಲಿ ಸಿಗುತ್ತವೆ. ದೇಶ ಸುತ್ತು, ಕೋಶ ಓದು ಅಂತ ಗಾದೆ ಇದೆ. ಜ್ಞಾನ ವಿಕಾಸ ಮಾಡಬೇಕು. ಓದುವಿಕೆಯಿಂದ ಜ್ಞಾನ ವಿಕಾಸ ಆಗುತ್ತದೆ. ಮಕ್ಕಳು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು” ಎಂದು ಹೇಳಿದರು.

ನಾನು ದುಡ್ಡು ತಂದಿಲ್ಲ: “ನಾನು ಇಂದು ದುಡ್ಡು ತಂದಿಲ್ಲ. ನಾಳೆ ದುಡ್ಡು ತಂದು ಪುಸ್ತಕ ತೆಗೆದುಕೊಳ್ಳುತ್ತೇನೆ” ಎಂದು ನಗೆ ಚಟಾಕಿ ಹಾರಿಸಿದರು. “ನನಗೆ ಬೇಕಾದ ಪುಸ್ತಕ ಖರೀದಿ ಮಾಡುತ್ತೇನೆ. ಬೇರೆಯವರು ಖರೀದಿ ಮಾಡಿರೋ ಪುಸ್ತಕ ಓದಬಾರದು. ನೀವೇ ಖರೀದಿ ಮಾಡಿ ಪುಸ್ತಕ ಓದಬೇಕು” ಎಂದು ಸಲಹೆ ನೀಡಿದರು.

ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, “ಪುಸ್ತಕ ಮೇಳ ಹಮ್ಮಿಕೊಳ್ಳುವ ಕನಸು ಕಂಡಿದ್ದೆವು. ಸಭಾಪತಿಗಳು ಎಲ್ಲಾ ಸಹಕಾರ ಕೊಟ್ಟಿದ್ದಾರೆ. ವಿಧಾನಸೌಧ ರಾಜಕಾರಣಿಗಳಿಗೆ ಮಾತ್ರವಲ್ಲ, ಎಲ್ಲರಿಗೂ ವಿಧಾನಸೌಧ ಎನ್ನುವ ಭಾವನೆ ಬರಲು ಅವಕಾಶ ಮಾಡಿಕೊಟ್ಟಿದ್ದೇವೆ. ಸಾಹಿತಿಗಳಿಗೆ ನಾವು ವಿಶೇಷ ಗೌರವ ಕೊಡ್ತಿದ್ದೇವೆ. ಸಾಹಿತಿಗಳು ಸತ್ಯವನ್ನು ಹೇಳುವವರು. ಸಾಹಿತಿಗಳಿಗೆ, ಬರಹಗಾರರಿಗೆ ನಾವು ಅವಕಾಶ ಮಾಡಿಕೊಟ್ಟಿದ್ದೇವೆ” ಎಂದು ಹೇಳಿದರು.


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ