Breaking News

ಬಂಗಾಳಕೊಲ್ಲಿಯಲ್ಲಿ ನಿವಾರ್ ಸೈಕ್ಲೋನ್ ಆರ್ಭಟ ಬೆಂಗಳೂರಿನಲ್ಲಿಯೂ ಗಾಳಿ ಸಹಿತ ತುಂತುರು ಮಳೆ

Spread the love

ಚೆನ್ನೈ/ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ನಿವಾರ್ ಸೈಕ್ಲೋನ್ ಆರ್ಭಟ ಆರಂಭವಾಗಿದ್ದು, ತಮಿಳುನಾಡಿಗೆ ತಡರಾತ್ರಿ ಎಂಟ್ರಿ ಕೊಟ್ಟಿದೆ. ಇದೀಗ ಬೆಂಗಳೂರಿನಲ್ಲಿಯೂ ಗಾಳಿ ಸಹಿತ ತುಂತುರು ಮಳೆ

ಆರಂಭವಾಗಿದೆ.ಮಾಮಲ್ಲಾಪುರಂ ಮತ್ತು ಕಾರೈಕಲ್ ಸಮುದ್ರ ತೀರಕ್ಕೆ ಎಂಟ್ರಿ ಕೊಟ್ಟ ಸೈಕ್ಲೋನ್, ಗಂಟೆಗೆ 120 ಕಿಲೋ ಮೀಟರ್ ವೇಗದಲ್ಲಿ ಅಪ್ಪಳಿಸಿದೆ. ಚಂಡಿ ಅಬ್ಬರಕ್ಕೆ ತಮಿಳುನಾಡು, ಪುದುಚೇರಿ ತತ್ತರಿಸಿ ಹೋಗಿದೆ.

ನಿನ್ನೆ ರಾತ್ರಿ 11.30ರ ಸುಮಾರಿಗೆ ಪುದುಚೇರಿಗೆ ಅಪ್ಪಳಿಸಿದ ನಿವಾರ್, ಇಂದು ನಸುಕಿನ ಜಾವ 2.30ರ ಸುಮಾರಿಗೆ ತಮಿಳುನಾಡಿಗೆ ಎಂಟ್ರಿ ಕೊಟ್ಟಿದೆ. ನಸುಕಿನ ಜಾವ 3ರ ಬಳಿಕ ಚಂಡಮಾರುತದ ತೀವ್ರತೆ ಸ್ವಲ್ಪ ತಗ್ಗಿದೆ.

ಈ ಮಾರುತ ಮುಂದಿನ 3 ಗಂಟೆಗಳಲ್ಲಿ ಗಂಟೆಗೆ 60-65 ಕಿ.ಮೀ ವೇಗ ಪಡೆಯಲಿದೆ. ಗಾಳಿಯ ವೇಗ ಗಂಟೆಗೆ 145 ಕಿಲೋ ಮೀಟರ್ ಎಂದು ಅಂದಾಜಿಸಲಾಗಿತ್ತು. ಆದರೆ ಗಂಟೆಗೆ 110-120 ಕಿ.ಮೀ ವೇಗದಲ್ಲಿ ದ ಸೈಕ್ಲೋನ್ ಅಪ್ಪಳಿಸಿದೆ. ಸೈಕ್ಲೋನ್ ಪ್ರಭಾಗ ತಗ್ಗಿದರೂ ತಮಿಳುನಾಡಿನಲ್ಲಿ ಮಳೆ ಮುಂದುವರಿದಿದೆ.


Spread the love

About Laxminews 24x7

Check Also

ಧರ್ಮದ ರಕ್ಷಣೆ ನಾವು ಮಾಡಿದರೆ ಮಾತ್ರ ನಮ್ಮನ್ನು ಧರ್ಮ ರಕ್ಷಣೆ ಮಾಡುತ್ತೆ ಡಾ. ಅಭಿನವ ಸ್ವಾಮೀಜಿ ಅಭಿಮತ

Spread the loveಗಡಿ ರಕ್ಷಣೆ ಮಾಡುವ ಸೈನಿಕರು ಧರ್ಮರಕ್ಷಣೆ ಮಾಡಬಹುದು ಎಂಬರಕ್ಕೆ ಉದಾಹರಣೆ ಅಂದರೆ ಸೈನಿಕರು ಕಾಗವಾಡದಲ್ಲಿ ಕಟ್ಟಿಸಿದ ವಿಠ್ಠಲ- …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ